40 • ಕರ್ಣಾಟಕ ಗ್ರಂಥಮಾಲೆ ವಳೇ ? ಅಥವಾ ಊರನ್ನು ಬಿಟ್ಟು ಹೊರಟುಹೋದಳೋ ? ವಿಚಾರಿಸ ಬೇಕಲ್ಲಾ! " ಎನ್ನಲು ಆತನು “ಮಹಾರಾಜರೇ ? " ಗತಂ ನತೋಚಯೇತ್ ಪ್ರಾಜ್ಞಃ ' ಎಂಬುದನ್ನು ತಿಳಿದೇಇರುವಿರಲ್ಲವೇ ? ದೈವದುಗ್ನಿಪಾಕದಿಂದ ಸಕಲರಿಗೂ ಕಷ್ಟಗಳು ಅವಿತರ್ಕಿತಸಂಭವವಾಗಿ ಬರುವುದುಂಟು. ಅನಂಗ ಸೇನೆಯು ಊರನ್ನು ಬಿಟ್ಟು ಹೊರಟುಹೋದಂತೆ ವರ್ತಮಾನವನ್ನು ಕೇಳಿ ದೆನು. ಆಕೆಯೊಡನೆ ಮಾಲತಿಯ ಹೋಗಿರುವಳಂತೆ, ಅನಿತರಸಾಧನ ರಣವಾದ ವಿವೇಕವನ್ನು ಪಡೆದಿರುವ ಮಾಲತಿಯು ಸಂಗಡವಿರುವುದರಿಂದ, ಅನಂಗಸೇನೆಗೆ ಯಾವಬಾಧೆಯ ಉಂಟಾಗಲಾರದು ಅವರನ್ನು ಕಂಡು ಹಿಡಿಯಲು ದೂತರನ್ನು ನಿಯಮಿಸುವೆನು ” ಎಂದು ಉತ್ತರಹೇಳಿದನು.
- ಮಂತ್ರಿ ಪುಂಗವಾ ! ನನಗೆ ಇಷ್ಟು ತೊಂದರೆಯನ್ನುಂಟುಮಾ ಡಿದ ಆ ಹುಚ್ಚನು ಬಹಳ ತುಂಟನೆಂದೂ, ಕುತಂತ್ರಿಯೆಂದೂ ವ್ಯಕಪಡು ತದೆ. ಅವನು ಯಾರು ? ಹುಚ್ಚನೆಂದೇ ನಾವು ಅವನನ್ನು ತಿಳಿದು ಅವನಿಗೆ ಬೇಕಾದೆಡೆಯಲ್ಲೆಲ್ಲಾ ಸಂಚರಿಸಲು ಅವಕಾಶಕೊಟ್ಟುದು ಅಷ್ಟು ಯುಕ್ತ ವಲ್ಲವೆಂದು ತೋರುವುದು, ಅವನು ಯಾರೆಂಬುದನ್ನು ಕಂಡು ಹಿಡಿಯ ಬೇಕಲ್ಲಾ ! )
“ ಮಹಾಸ್ವಾಮಿ ! ಅವನು ಯಾರೋ ಬಹಳ ಬುದ್ದಿ ಶಾಲಿ. ನನ್ನ ಶತ್ತು ಮಂಡಲಿಯಲ್ಲಿ ಪ್ರಬಲನೆಂದು ತೋರುವುದು, ನಾನು ಅವನನ್ನು ಐಲು ಗಾಲನೆಂದೇ ತಿಳಿದಿದ್ದೆನು. ಅವನು ಯಾರಿಗೂ ಬಾಧಿಸದೇ ಇದ್ದುದ ರಿಂದಲೂ, ಸಮಯಸಂದರ್ಭಗಳನ್ನು ತಿಳಿದು ವಿನೋದಪಡಿಸುತ್ತಿದ್ದುದ ರಿಂದಲೂ ಅವನನ್ನು ನಿರಾಧಕವಾದ ಕ್ರೀಡಾಸಾಧನವನ್ನಾಗಿ ಉಪಯೋ ಗಿಸಿಕೊಳ್ಳುತ್ತಿದ್ದನು. ಅವನ ಕಪಟನಾಟಕವು ಈಗೀಗ ವ್ಯಕ್ತವಾಗುತ್ತ ಲಿದೆ, ನನ್ನನ್ನು ಮೊದಲು ಕೊಲ್ಲಲುಯತ್ನಿಸಿದುದೂ ಆ ತಂತ್ರಿಯ ಬೋಧ ನೆಯಿಂದಲೇ ! ವಿಜಯಸಿಂಹನನ್ನು ವಧಿಸಲು ಹವಣಿಸಿದುದೂ ಆ ಮೋಸ