ರಾಯರು ವಿಜಯ ೩೧ ೧ ಗಾರನ ಪ್ರೇರಣೆಯಿಂದಲೇ, ಆ ಕುಹಕಿಯ ಮಾಯದಿಂದಲೇ ವಿಜಯಸಿಂಹ ನಿಗೂ, ಅಂಗಸೇನೆಗೂ ದುರಸವಾದವುಂಟಾದುದು, ನನ್ನ ಆನೆಗೊಂದಿ ಯನ್ನು ಸುಟ್ಟವನೂ ಆ ಮಾಯಾವಿಯೇ ಎಂದು ವರ್ತಮಾನ ಬಂತು. ಇಂತಹ ಠಕ್ಕನು ತಂತ್ರಿಗಳ ಲೆಲ್ಲಾ ಅಗ್ರಗಣ್ಯನು.” ಕೃಷ್ಣ-ಏನು ! ಆನೆಗೊಂದಿಗೆ ಬೆಂಕಿಬಿತ್ತೆ ? ಆ ಹುಚ್ಚನೇ ಅದಕ್ಕೂ ಕಾರಣಭೂತನೆ ? ) ಅಪ್ಪಾಜಿ ಆಠಕ್ಕುಗಾರನೇ ಆನೆಗೊಂದಿಗೆ ಉಪಾಯವಾಗಿ ಬೆಂಕಿ ಹೊತ್ತಿಸಿ, ಪ್ರಹರೇಶ್ವರನನ್ನು ತಪ್ಪಿಸಿ ಕರೆದುಕೊಂಡು ಹೋಗಿರುವನು. ಮುಕ್ಕಾಂಬೆಯು ಆ ಹುಚ್ಚನನ್ನು ಕುರಿತು ಬರೆದಿರುವಳೇ ಹೊರತು ಅವನು ಇಂತಹವನೆಂದು ತಿಳಿಸದಿರುವುದು ನೋಡಿದರೆ ಹುಚ್ಚನಿಗೂ ಆಕೆಗೂ ಬಾಂಧವ್ಯ ವಿರುವುದೆಂದು ತೋರುವುದು, ಯಾವಕಾರಣದಿಂದಲೂ ಅವ ನಿಗೂ, ವಿಜಯಸಿಂಹನಿಗೂ ಹಗೆತನವುಂಟಾಗಿರಬಹುದು, ಮುಕ್ಕಾಂಬೆಯು ಮತ್ತೆ ಯಾವಕಾರಣದಿಂದಲೋ ಹುಚ್ಚನ ತಂತ್ರಗಳಿಗೆ ಸಿಕ್ಕಿಬೀಳದಂತೆ ವಿಜಯಸಿಂಹನಿಗೆ ಸಹಾಯ ಮಾಡುತ್ತಿರುವಳು. ಈ ಉಭಯಸಂಕಟ ದಲ್ಲಿ ಆಕೆಯು ತೋರಿಸುತ್ತಿರುವ ಚಾತುಯ್ಯವು ಅಸಿತರಸಾಧಾರಣವಾ ಗಿರುವುದು.” “ ಮಂತ್ರೀಕೃರರೇ ! ಮುಕ್ಕಾಂಬೆಯ ತಪ್ಪಿಸಿಕೊಂಡು ಹೋಗ ದಂತೆ ಕಾವಲುಗಾರರನ್ನು ನೇಮಿಸಿರಲಿಲ್ಲವೆ ? ಅವರೆಲ್ಲರೂ ತಪ್ಪಿಸಿ ಕೊಂಡುಹೋಗಲು ಅವಕಾಶ ಹೇಗುಂಟಾಯಿತು ? ೨೨ < ಮಹಾರಾಜಾಧಿರಾಜರೆ ! ಪ್ರಹರೇಕ್ಷರಾದಿಗಳನ್ನು ಕಾಯಲು ಅನೇಕಮಂದಿ ಕಾವಲುಗಾರರನ್ನು ನೇಮಿಸಿತ್ತು. ಆದರೂ ಅವರೆಲ್ಲರಿಗೂ ಒಮ್ಮೆಲೆ ಆದವುಂಟಾಗುವಂತೆ ಮಾಡಿ, ಅವರಕರ್ತವ್ಯ ಬುದ್ದಿಯನ್ನು ಸೂರೆಗೊ೦ಡು, ಪೀಲಾವಾತ್ರದಿಂದ ತನ್ನವರನ್ನು ತಪ್ಪಿಸಿಕೊಂಡು ಹೋದು ಒ
ಪುಟ:ರಾಯಚೂರು ವಿಜಯ ಭಾಗ ೧ .djvu/೧೬೩
ಗೋಚರ