ಪುಟ:ರಾಯಚೂರು ವಿಜಯ ಭಾಗ ೧ .djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಕರ್ಣಾಟಕಕ್ರಂಥಮಾಲೆ wwwx ಒ ದನ್ನು ನೋಡಿದರೆ, ಹುಚ್ಚನು ಅಮಾನುಷಚರಿತ್ರನಂತೆ ತೋರುವನು. ಅವನು ಪ್ರಯೋಗಿಸುವ ಉಪಾಯಗಳಿಗೆ ಪ್ರತಿಕ್ರಿಯೆಯನ್ನು ಮಾಡು ವುದು ಅಷ್ಟು ಸುಲಭವೆಂದು ತೋರುವುದಿಲ್ಲ. ದೈವವಶದಿಂದ ಅವನ ಪ್ರಯೋಗಗಳಲ್ಲಿ ಒಂದೆರಡು ಭಗ್ನಫಲಗಳಾದುವು. ಇಂತದ ಪ್ರಬಲಪ್ರತಿ ದ್ವ೦ದ್ರಿಯನ್ನು ಜಯಿಸಿದರಲ್ಲವೇ ನನ್ನ ಹೆಸರು ಉಳಿಯುವುದೆ” ಎಂದು ಹೇಳಿದನು. - ಚಕ್ರವರ್ತಿಯವರು ಅಪ್ಪಟೆಯವರ ಪ್ರತಿಜ್ಞೆಯನ್ನು ಕೊಂಡಾಡಿ ಆತನನ್ನೂ ವಿಜಯಸಿಂಹನನ್ನೂ ಗೌರವದಿಂದ ಕಳುಹಿಸಿಕೊಟ್ಟರು. ಹತ್ತೊಂಭತ್ತನೆಯ ಪ್ರಕರಣ. ( ಅನೈತೇ ವಿಹಗಾಃ ಪಯೋದಪರ ತೋ ಧಾವಂತಿ ತೃಷ್ಣಾ ತುರಾ | ವಾಪಿ ಕೂಪ ಕಟಾಕ ಸಾಗರ ಸರಿತ್ತೊಯೇಷು ಬದ್ದಾದರಾಃ | ಚಿತ್ರಂ ಪಶ್ಯಯ ಏಷ ಚಾತಕ ಶಿಶುಶ್ರುಷ್ಟೊಷ್ಟ ಕ೦ತೋಪಿರ್ಸ | ನಾನ್ಯ೦ಪಶ್ಯತಿ ನೋಪಸಮ್ಪತಿ ನ ಚ ಪ್ರಸ್ತೋತಿ ನ ಧ್ಯಾಯತಿ | ' ಆನೆಗೊಂದಿಗೆ ಇದು ಸರಿದಾರಿಯ ದೂರದಲ್ಲಿ ಗಂಗರಾಡವೆಂಬ ಊರೊಂದಿತ್ತು, ಈಗ ಆ ಊರು ಇಲ್ಲ, ಈ ಕಥೆಯ ಸಂಗತಿಗಳು ನಡೆದ ಕಾಲದಲ್ಲಿ ಆ ಹಳ್ಳಿಯಲ್ಲಿ ನೂರು ಮನೆಗಳು ಇದ್ದುವು ಅವುಗಳಲ್ಲಿ ಒಂದೆರಡು ಹೆಂಚಿನವು ; ಮಿಕ್ಕುವು ಹುಲ್ಲಿನವು. ಆ ಊರಿನಲ್ಲೇ ಗಾಮಾ ಧಿಕಾರಿಯಾದ ವಿಪ್ರನೊಬ್ಬನು ವಾಸಿಸುತ್ತಿದ್ದನು. ಅವನ ಮನೆಯಲ್ಲಿ ಎರಡು ಕೊಟಡಿಗಳಿದ್ದುವು, ಅವುಗಳಲ್ಲೊಂದರಲ್ಲಿ ತಾನು ವಾಸಿಸುತ್ತಾ, ಮತ್ತೊಂ ದನ್ನು ಪರಸ್ಥಳದವರು ಬಂದರೆ ಇಳಿದುಕೊಳ್ಳುವುದಕ್ಕಾಗಿ ಕೊಡುತ್ತಿದ್ದನು.