ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬. ಕರ್ಣಾಟಕಗ್ರಂಥಮಾಲೆ ' // rwx ೪ ಒ ಟ ರ್ಥ್ಯವನ್ನು ಕರಗಿಸಿ ನೀರುಮಾಡಿ ಬಿಡುವುವು. ಇದರಿಂದ ಉಭಯ ಭ್ರಷ್ಟ ತೆಯುಂಟಾಗಬಹುದು. ಪುಣ್ಯ ಕ್ಷೇತ್ರಗಳಿಗೂ ದುರಾತ್ಮರು ಬರುವುದುಂಟು. ಇಂತಹವರಿಂದ ಹಾನಿಯ ತಪ್ಪಲಾಗದು. ಆದುದರಿಂದ ಈ ಯೋಚನೆ ಯನ್ನು ಬಿಟ್ಟುಬಿಡು, ನಿನ್ನ ತವರುಮನೆಯಲ್ಲಿ ಸುರಕ್ಷಿತವಾಗಿರುವುದನ್ನು ಕಂಡು ನಿಜಾಂಶವನ್ನು ತಿಳಿದು, ಪಶ್ಚಾತ್ತಾಪಪಟ್ಟು, ಮಹಾರಾಜರು ಕರೆ ಯಿಸಿಕೊಳ್ಳುವರು.” ಅನಂ... ತಂಗಿ, ದುಃಖಾತಿರೇಕದಿಂದ ನನ್ನ ಮನಸ್ಸು ಮುಕ್ಕಾ ಮುಕ್ತ ವಿವೆಚನೆ - ಡು ಅಶಕ್ತವಾಗಿರುವುದು, ಈ ಆಸತ್ತಿನಲ್ಲಿ ನೀನೇ ನನಗೆ ಗತಿ. ಈಗ ನಾವು ಏನುಮತೋ ೯ ? ನಮಗೆ ವಸತಿಯನ್ನು ಕೊಟ್ಟಿರುವ ಬ್ರಾಹ್ಮ: ಏನು ಪರೋಪಕಾರಶೀಲನೆಂದು ತೋರುವನು. ನಮ್ಮನ್ನು ಕೊಂಡಪಲ್ಲಿಗೆ ಸೇರಿಸಲಾರನೇ ?? - ಮಾಲತಿ_66 ಕಿತನ: ಬಸು ಯೋಗ್ಯವೆಂದು ತೆ.೧೦ಬುವನು. ಆತನು ಬಂದಮೇಲೆ ಆಲೋಚಿಸಿ ನೋಡೋಣ. ಒಂದುವೇಳೆ ಆತನೇ ನಮ್ಮನ್ನು ಕರೆದುಕೊಂಡು ಹೋಗಿ, ಕೊಂಡಪಲ್ಲಿಗೆ ಬಿಡಲು ಒಪ್ಪಿದರೆ ನಮ್ಮ ಕೆಲಸವು ಸುಲಭವಾಯಿತು. ಇಲ್ಲದಿದ್ದರೆ ನಾನು ನಿನ್ನನ್ನು ಸುರಕ್ಷಿತವಾಗಿ ಕರೆದು ಕೊಂಡು ಹೋಗುವೆನು, ಧೈಯ್ಯದಿಂದಿರು.” ಹೀಗೆ ಆ ಇಬ್ಬರು ಸ್ತ್ರೀಯರೂ ಮಾತನಾಡುತ್ತಿರುವಾಗ ಯಾರೋ ಬರುತ್ತಿದ್ದ ಶಬ್ದವು ಕೇಳಿಸಿತು. ಬೀದಿಯಕಡೆ ನೋಡಲು ನೀರುಗಾವಿಯ ದೋತರವನ್ನುಟ್ಟುವಿಭೂತಿ ರುದ್ರಾಕ್ಷವಾಲೆಯನ್ನು ಧರಿಸಿ, ಜಪಸರವನ್ನು ಕೈಯಲ್ಲಿ ಹಿಡಿದು ಜಪಮಾಡಿಕೊಳ್ಳುತ್ತಾ ಬರುತ್ತಿದ್ದ ಒಬ್ಬ ಮನುಷ್ಯನು ಗೋಚರನಾದನು. ಈತನು ಆ ಯುವತಿಯರು ಪ್ರಸ್ತಾವಿಸುತ್ತಿದ್ದ ಗೃಹ ಪತಿಯೇ, ಆತನ ಹೆಸರು ಸದಾಶಿವಭಟ್ಟ ಆತನನ್ನು ಕಂಡಕೂಡಲೆ ಆ ಮುವತಿಯರಿಬ್ಬರೂ ಆತನಿಗೆ ಪ್ರಣಾಮಮಾಡಲು ಸದಾಶಿವಭಟ್ಟನು ಆಶೀ