ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರು ವಿಜಯ ೩೭ MANN೧೧೧#\ \೧ ರಾದ ಮಾಡಿ ಕುಶಲಪ್ರಶ್ನೆಯನ್ನು ಕೇಳಿದನು. ಅನಂಗಸೇನೆಯು « ತಮ್ಮ ಕಟಾಕ್ಷದಿಂದ ನಾವು ಕ್ಷೇಮವಾಗಿದ್ದೇವೆ. ನಾನು ಕೊಂಡಪಲ್ಲಿಯಲ್ಲಿರುವ ನನ್ನ ತೌರುಮನೆಗೆ ಹೋಗಬೇಕೆಂದಿದ್ದೇನೆ, ನನ್ನನ್ನು ಕೊಂಡಪಲ್ಲಿಗೆ ಕರೆ ದುಕೊಂಡು ಹೋಗಿ ಬಿಡುವಿರಾ ? ?” ಎಂದು ಕೇಳಿದಳು. (6 ಅಮ್ಮಾ ! ಅಗತ್ಯವಾಗಿಯ ಹಾಗೆ ಮಾಡುವೆನು | ಅಬಲೆಯ ರಾದ ಸ್ತ್ರೀಯರಿಗೆ ಕಷ್ಟ ಕಾಲದಲ್ಲಿ ಸಹಾರುಮಾಡದ ಮಾನವನ ಬುದ್ದಿ ಬಲಗಳಿ೦ದ ಫಲವೇನು ? ಕಪ್ಪ ಕಾಲದಲ್ಲಿ ಧೈಯ್ಯ ಕೆಡಬಾರದು. ಮನುಷ್ಯ ನಿಗೆ ಕಷ್ಟವೂ ಶಾಶ್ವತವಲ್ಲ, ಸಖವೂ ಶಾಶ್ವತವಲ್ಲ. * ಸುಖಸ್ಯ ನಂತರಂ ದುಃಖಂ ದುಃಖಸ್ಮಾನಂತರಂ ಸುಖಂ ” ಎಂಬಂತೆ ಕಷ್ಟಸುಖಗಳು ಬಂದು ಹೋಗುತ್ತಿರುವುವು. ಕಷ್ಟ ಬಂದಾಗ ಕುಗ್ಗದೆಯ, ಸುಖ ಬಂದಾಗ ಹಿಗ್ಗದೆಯ ಇರುವವರೇ ಜ್ಞಾನಿಗಳು, ಅವರಿಗೆ ಎಂತಹ ಕಷ್ಟ ಕಾಲ ದಲ್ಲಿಯ ಬಹಳ ವ್ಯಥೆ :ತಾಗಲಾದ ದು. ಆದುದರಿಂದ ಧೈಯ್ಯದಿಂದ ಇರಿ. ದೇವರು ನಿಮಗೆ ಒಳ್ಳೆಯದನ್ನು ಮಾಡುವನು.” ಎಂದು ಕರುಣೆಯಿಂದ ಸಮಾಧಾನಪಡಿಸಿದನು ಈತನ ಮಾತುಗಳನ್ನು ಕೇಳಿ ಆ ಯುವತಿಯರಿಬ್ಬರಿಗೂ ಬಹಳ ಆನಂದವಾಯಿತು ತಮ್ಮ ಭಾಗ್ಯದೇವತೆಯೆ ಆ ಬ್ರಾಹ್ಮಣನ ರೂಪಿ ನಿಂದ ತಮಗೆ ಸಹಾಯಮಾಡುತ್ತಿದೆಯೆಂದು ಅವರು ಭಾವಿಸಿದರು. ೧. ಬ