ಪುಟ:ರಾಯಚೂರು ವಿಜಯ ಭಾಗ ೧ .djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ m. ದಲ್ಲಿ, ಆ ಮಾತಿಗೆ ತಪ್ಪುತ್ತಿದ್ದೆಯೋ ? ನಿನ್ನಾಭಿಮುಖವಾದ ಜಲಪ್ರವಾಹವು ಹೇಗೆ ನಿರ್ಬಂಧಕ್ಕೆ ೪೩ ಗುವುದಿಲ್ಲವೋ, ನಿಷ್ಕಪಟಾನುರಾಗವೂ ಹಾಗೆಯೇ ಯಾರ ಮಾತಿನ ಸಿಒr ೦ಧಕ್ಕೂ ಒಳಪಡದು." ರುದ್ರ- ಲಲನಾಮಣಿ ! ತಿಮ್ಮರಸನ ಆಜ್ಞೆಯಿಂದ, ನಿಮ್ಮ ಮನೆಗೆ ಯಾವ ಹೊಸಬನೂ ಬರುವುದಕ್ಕೆ ಆಗುತ್ತಿರಲಿಲ್ಲ. ರ್ಪೂವ್ರದಲ್ಲಿದ್ದ ರಾಜಭಟನನ್ನು ತಪ್ಪಿಸಿ, ಬೇರೊಬ್ಬ ಕಾವಲುಗಾರನನ್ನು ನೇಮಿಸಿದ್ದುದರಿಂದ ಲೂ, ಅವನಿಗೆ ಲಂಚದ ಆಸೆಯು ಇರಲಿಲ್ಲವಾದುದರಿಂದಲೂ, ನಾನು ಎಷ್ಟು ಪ್ರಯತ್ನ ಮಾಡಿದರೂ ನಿನ್ನ ಸಂದರ್ಶನವು ದೊರೆಯಲಿಲ್ಲ. ಏನುಮಾಡಲಿ ? ಅಷ್ಟು ದಿವಸವೂ ನಾನು ಅನುಭವಿಸಿದ ಸಂತಾಪವು ದೇವರಿಗೇ ಗೊತ್ತು. ಆ ವಿಜಯಸಿಂಹನು ಮೃತ್ಯು ಮುಖದಲ್ಲಿದ್ದರೂ ಅದೃಷ್ಟವಶದಿಂದ ಉಳಿದು ಕೊಂಡನು. ಅವನನ್ನು ಕೊಲ್ಲಬೇಕೆಂದು ಮಾಡಿದ ನಮ್ಮ ಪ್ರಯತ್ನಗಳು ನಿರರ್ಥಕವಾದುವು, ನಿನಗೆ ಸಂತೋಷಕರವಲ್ಲದ ಈ ಸುದ್ದಿಯನ್ನು ಹೇಗೆ ವಿವರಿಸಲಿ??? ಮುಕಾಂಬೆ" ಏನು ? ಏ.. : ವಿಜಯಸಿಂಹನು ಸತ್ತನೆಂದುಕೇಳದೆ ನಲ್ಲಾ ? ಇದೇನು ಹೀಗೆ ಹೇಳುತ್ತಿರುವೆ ? ವಿಜಯಸಿಂಹನು ಬದುಕಿ ಕೂಂಡನೆ ?' ಎಂದು ಕೇಳಿದಳು. ಮುಕ್ತಾಂಬೆಗೆ ವಿಜಯಸಿಂಹನು ಕ್ಷೇಮವಾಗಿದ್ದನೆಂದು ಗೊತ್ತಿತ್ತು. ಆದರೂ ನಿಜವಾದ ಸಮಾಚಾರವನ್ನು ತಿಳಿಯಬೇಕೆಂದೂ, ರುದ್ರದೇವನಿಗೆ ಮೋಸಮಾಡಿ ರಹಸ್ಯವನ್ನೆಲ್ಲಾ ತಿಳಿದುಕೊಳ್ಳಬೇಕೆಂದೂ, ಹೀಗೆಮಾತನಾಡು ತಿದ್ದಳು. ಇದೂ ಅಲ್ಲದೆ ರಾಮಯಮಂತ್ರಿಯು ಸ್ಥಿರವನಸ್ಕನಾಗಿದ್ದುದ ರಿಂದ ವಿಜಯಸಿಂಹನ ವಧೆಗಾಗಿ ಮತ್ತೇನಾದರೂ ಪ್ರಯತ್ನಗಳನ್ನು ನಡೆಯಿ ಸುತ್ತಿರುವನೋ ಇಲ್ಲವೋ ಎಂಬುದನ್ನು ರುದ್ರದೇವನಿಂದ ಹೊರಡಿಸ ಬೇಕೆಂದು ಹೀಗೆ ಮಾತನಾಡುತ್ತಿದ್ದಳು.