ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ರಾಯೂರು ವಿಜಯ “ ರೋಗಿ ಬಯಸಿದುದೂ ಹಾಲೋಗರ; ವೈದ್ಯ ಹೇಳಿದುದೂ ಹಾಲೋ ಗರ” ಎಂಬ ಗಾದೆಯಂತೆ ತೋಫಖಾನನಿಗೆ ಫಕೀರನ ಈ ಮಾತುಗ ಳನ್ನು ಕೇಳಿ, ಬಹಳ ಸಂತೋಷವಾಯಿತು, ಆದುದರಿಂದ ಅನಂಗಸೇನೆ ಯನ್ನು ಕಾಣುವುದು ಒಳ್ಳೆಯದೆಂದು ಭಾವಿಸಿ, ಫಕೀರನನ್ನು ಕುರಿತು * ಓ ಮಹಾತ್ಮರೇ ! ತಮ್ಮ ಅಪ್ಪಣೆಯಂತೆ ಆ ಯುವತಿಯನ್ನು ನೋಡಲು ಈಗಲೇ ಹೊರಡುವನು. ತಾವು ಶ್ರಮವೆಂದು ಭಾವಿಸದೆ, ನನ್ನೊಡನೆ ದಯಮಾಡಿಸಿ, ಆಕೆಯನ್ನು ನೋಡಿ, ಮುಖಲಕ್ಷಣಗಳನ್ನು ಪರೀಕ್ಷಿಸಿ ಶುಭಾಶುಭಗಳನ್ನು ತಿಳಿಸಬೇಕೆಂದು ಬೇಡುತ್ತೇನೆ. ಸಂಬಂಧವು ಅನುಕೂ ಲಿಸಿದರೆ ಆಕೆಗೆ ಮಹಮ್ಮದೀಯ ಮತದೀಕ್ಷೆಯನ್ನು ಕೊಡಬೇಕಾದುದು ಆವಶ್ಯಕವಾದುದರಿಂದ, ಇದೂ ಒಂದು ಮತಕಾರ್ಯವೆಂದು ಪರಿಭಾವಿಸಿ ನನ್ನೊಡನೆ ಚಿತ್ತೈಸಬೇಕು. " ಎಂದು ಹೇಳಿಕೊಳ್ಳಲು, ಫಕೀರನು ಅದಕ್ಕೆ ಸಮ್ಮತಿಸಿದನು, ಆ ಬಳಿಕ ಇಬ್ಬರೂ ಹೊರಟು, ಅನಂಗಸೇನೆಯು ಇದ್ದ ವಿಶ್ರಮ ಮಂದಿರವನ್ನು ಪ್ರವೇಶಿಸಿದರು.