ಪುಟ:ರಾಯಚೂರು ವಿಜಯ ಭಾಗ ೧ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ಕರ್ನಾಟಕ ಗ್ರಂಥಮಾಲೆ ಎylvYYYYY #+ ಖಾನ-" ಮಹಾತ್ಮರೆ! ಆಕೆಯನ್ನು ನೋಡಬೇಕೆಂದು ನಾನು ಕುತೂ ಹಲಪಡುತ್ತಿದ್ದರೂ, ನನ್ನ ಮಿತ್ರನಾದ ರಾಮಯ ಮಂತ್ರಿಯು ಕೆಲವುದಿನ ಗಳ ವರೆಗೂ ಆಕೆಯನ್ನು ನೋಡಕೂಡದೆಂದು ನಿಷೇಧಿಸಿರುವನು. ಮಹಾ ಬುದ್ಧಿಶಾಲಿಯಾದ ಆತನ ಮಾತನ್ನು ಮಾರಿದರೆ ಕೆಲಸ ಕೆಟ್ಟಿತೆಂದು ಸುಮ್ಮ ನಿರುವನು, ಫಕೀರ-“ಆತನು ಅದೇಕೆ ಹಾಗೆ ಹೇಳಿರುವನು? ಆಕೆಗೆ ಈಗ ಏನಾ ದರೂ ಕಷ್ಟ ಕಾಲವು ಬಂದಿರುವುದೋ ? ಅನ್ಯಾಸಕ್ತಳಾಗಿರುವವಳನ್ನು ಇಲ್ಲಿಗೆ ತಂತ್ರದಿಂದ ಬರಮಾಡಿರುವಿರೆಂದು ಕಾಣುವುದು : 12 ಖಾನ- ಭರ್ತನು ನಿಂದೆಯನ್ನು ಹೊರಿಸಿ ಮನೆಯಿಂದ ಆಕೆಯನ್ನು ಹೊರಡಿಸಿದನ 3 ಆದ ದರಿಂದ ದುಃಖಿತೆಯಾಗಿ ಎಲ್ಲಿಗೋ ಹೋಗುತ್ತಿದ್ದ ವಳನ್ನು ನನ್ನ ಮಿತ್ರನು ಇಲ್ಲಿಗೆ ಕರೆತಂದಿರುವನು. ಆಕೆಗೆ ನನ್ನಲ್ಲಿ ಅನು ರಾಗವಿರುವುದೋ ಇಲ್ಲವೋ ನನಗೆ ತಿಳಿಯದು, ೨ ೧ ೧ - ಫಕೀರ-“ ಒಂದುವೇಳೆ ಅನುರಾಗವಿಲ್ಲದಿದ್ದರೂ ದರ್ಶನಸಂಭಾ ಪಂದಾನಮಾನಾದಿಗಳಿಂದ ಅದನ್ನು ಸಂಪಾದಿಸಬಹುದು, ಆಕೆಯನ್ನು ಒಲಿಸಿಕೊಳ್ಳಲು ಬೇಕಾದ ವಾಕ್ಚಾತುರ್ಯವು ತಮಗೆ ಇರುವುದೊ ಇಲ್ಲವೋ ಎಂದು ಸಂದೇಹಿಸಿ, ರಾಮಯಮಂತ್ರಿಯು ತಮಗೆ ಹಾಗೆ ಹೇಳಿರಬಹುದು, ತಮ್ಮ ವಾಕ್ಷಾತುರ್ಯದಿಂದ ಆಕೆಯನ್ನು ತಪ್ಪದೆ ವಶಪ ಡಿಸಿಕೊಳ್ಳಬಲ್ಲಿರಿ ಎಂದು ನನಗೆ ಸಂಪೂರ್ಣವಾದ ನಂಬಿಕೆಯುಂಟು. ಇದೂ ಅಲ್ಲದೆ ಆಕೆಯು ಪ್ರಥಮಭರ್ತನಿಂದ ತಿರಸ್ಕೃತಳಾಗಿರುವುದರಿಂದ, ಆಕೆಯ ಅನುರಾಗಲತೆಗೆ ಬೇರೊಂದು ಆಶಯವು ಇಲ್ಲದೇ ಇರಲು ಸಾಧ್ಯವಲ್ಲ. ಆದುದರಿಂದ ಆಕ್ರಯಾಂತರವನ್ನು ಸಂಪಾದಿಸಿಕೊಳ್ಳುವುದಕ್ಕೆ ಮೊದಲೇ, ತಾವು ಆಕೆಯನ್ನು ಕಾಣುವುದು ಬಹಳ ಒಳ್ಳೆಯದು.