ರಾಯರು ವಿಜಯ ೬೩ _0 ೪ ೦ ೧ ಆಕೆಗೆ ಹಿಂದಿನ ಸ್ಮರಣೆಯು ಉಂಟಾಗಿ ದುರ್ಭರವಾದ ವ್ಯಥೆಯುಂಟಾಗು ತಿತ್ತು, ಹಿಂದೆ ಸಕಲವಿಧವಾದ ಸುಖಕ್ಕೆ ಪಾತ್ರಳಾಗಿದ್ದ ತಾನು ಪರದೇ ಶಕ್ಕೆ ಬಂದು, ಅನ್ಯನಸೌಧದಲ್ಲಿ ವಾಸಿಸುತ್ತಾ ಪರಾನ್ನವನ್ನು ತಿನ್ನಬೇಕಾಗಿ ಬಂದಿದ್ದುದರಿಂದ ಆಕೆಯ ವ್ಯಸನಕ್ಕೆ ಮೇರೆ ಇರಲಿಲ್ಲ, ಆದರೂ ಮಾಲ ತಿಯು ಎಡೆಬಿಡದೆ ಆಕೆಯ ಸವಿಾಪದಲ್ಲಿದ್ದುಕೊಂಡು ಸಮುಚಿತ ವಚನ ಗಳಿ೦ದ ಆಕೆಗೆ ಸಮಾಧಾನವನ್ನುಂಟುಮಾಡುತ್ತಿದ್ದಳು. ಆದರೆ ಮನೋವ್ಯ ಥೆಯು ಅನಂಗಸೇನೆಯ ಆರೋಗ್ಯವನ್ನು ಸ್ವಲ್ಪ ಸ್ವಲ್ಪವಾಗಿ ಹಾಳುಮಾಡು ತಿತ್ತು, ಒಂದಾನೊಂದುರಾತ್ರಿ, ಅನಂಗಸೇನೆಯ ಮಾಲತಿಯ ಈ ಮೇ ರೆಗೆ ಮಾತನಾಡಿಕೊಳ್ಳುತ್ತಿದ್ದರು :- ಅನಂಗಸೇನೆ- ಮಾಲತಿ ! ಆಬ್ರಾಹ್ಮಣನು ಇನ್ನೂ ಏತಕ್ಕೆ ಬರ ಲಿಲ್ಲ ? ಅವನು ನಮ್ಮನ್ನು ಯಾವ ಅಭಿಪ್ರಾಯದಿಂದ ಈ ತುರುಷ್ಕ ರಾಜ್ಯಕ್ಕೆ ತಂದು ಬಿಟ್ಟಿರಬಹುದು ? ದುರ್ಭರತೋಕಸಂತಪ್ತಳಾಗಿದ್ದ ನನಗೆ ಈ ಬರ ಸಿಡಿಲು ಬೇರೆ ಬದಗಿರುವುದಲ್ಲ...” ಇನ್ನು ಮುಂದಕ್ಕೆ ಮಾತನಾಡಲಾರದೆ ಗೊಳೋ ಎಂದು ಅಳಲಾರಂಭಿಸಿದಳು ಇದನ್ನು ಕಂಡು ಮಾಲತಿಗೂ ಬಹಳ ದುಃಖ ಬಂತು ಆದರೂ ಕೂಡಲೆ ಧೈರ್ಯವನ್ನವಲಂಬಿಸಿದಳು. ಬಾಣಳಾದ ಮಾಲತಿಯು, ಅಬ್ರಾಹ್ಮಣನು ಮಹಾ ಮಾಯಾವಿಯೆಂದೂ, ಅವನಿಗೆ ಅನಂಗಸೇನೆಯು ಊಹಿಸಿದ್ದಂತೆ ಯಾವುದೋ ದುರುದ್ದೇಶವು ಇರಬೇಕೆಂದೂ ಭಾವಿಸಿ, ಉಪಾಯವಾಗಿ ಆ ದುರ್ಗದಿಂದ ತಪ್ಪಿಸಿಕೊಳ್ಳಬೇ ಕಂದು ಅಲ್ಲಿಗೆ ಬಂದ ಎರಡನೆಯ ದಿವಸದಿಂದಲೇ ಬಗೆಬಗೆಯಾಗಿ ಆಲೋ ಜಿಸುತ್ತಿದ್ದಳು ತನ್ನ ಶಂಕೆಯನ್ನು ಸ್ವಲ್ಪವಾದರೂ ತೋರ್ಪಡಿಸಿಕೊಳ್ಳದೆ, < ಅಮ್ಮ ! ನೀನು ಯೇಕೆ ಹೀಗೆ ದುಃಖಿಸುತ್ತಿರುವೆ ? ಆಬ್ರಾಹ್ಮಣನು ಪರೋಪಕಾರಿಯೆಂದೂ ಮಹಾಯೋಗ್ಯನೆಂದೂ ಕಾಣುವನು. ಅವನು ನನ್ನನ್ನು ವಂಚಿಸಲಾರನು. ಅವನಿಗೆ ಏನೋ ಕೆಲಸ ಬಂದಿರುವುದರಿಂದ
ಪುಟ:ರಾಯಚೂರು ವಿಜಯ ಭಾಗ ೧ .djvu/೧೯೫
ಗೋಚರ