ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಕರ್ಣಾಟಕ ಗ್ರಂಥಮಾಲೆ ಇಲ್ಲಿಗೆ ಬರಲಿಲ್ಲವೆಂದು ಕಾಣುವುದು, ಕರುಣಾನಿಧಿಯಾದ ಭಗವಂತನು ಅತ್ಯಂತ ದುಃಖಸಂತಪ್ತಳಾದ ನಿನಗೆ ಪುನಃ ಕಷ್ಟವನ್ನುಂಟುಮಾಡಲಾರನು. ಆದುದರಿಂದ ಚಿಂತಿಸಬೇಡ. ಇಷ್ಟರಲ್ಲಿಯೇ ಆ ವಿಪ್ರನು ಬಂದು ನಮ್ಮನ್ನು ಗಮ್ಯಸ್ಥಾನಕ್ಕೆ ಕರೆದುಕೊಂಡು ಹೋಗುವನು.” ಎಂದು ಧೈರ್ಯಹೇಳಿ ದಳು. ಅನಂಗ- ಮಾಲತಿ ! ಆಗತ್ಸಾಗರದಲ್ಲಿ ನಿಮಗ್ನಳಾಗಿರುವ ನನಗೆ ಭಗವಂತನು ದೃಢತರಕದಂತಿರುವ ನಿನ್ನನ್ನು ದಯಪಾಲಿಸಿರುವನು. ಆದುದರಿಂದಲೇ ನಾನು ಇನ್ನೂ ಜೀವಸಹಿತಳಾಗಿರುವೆನು ಆ ಬ್ರಾಹ್ಮಣನು ಬರುವನೋ ಇಲ್ಲವೋ, ಎಲ್ಲಿಯಾದರೂ ವಿಚಾರಿಸುವೆಯಾಗಿ ಒಂದು ವೇಳೆ ಅವನು ಬಾರದೇ ಇರುವಲ್ಲಿ, ಸರಿಹೊತ್ತಿನಲ್ಲಿ ತಪ್ಪಿಸಿಕೊಂಡು ಹೊರಟು ಹೋಗುವುದು ಒಳ್ಳೆಯದಲ್ಲವೇ ? ಇದಕ್ಕೆ ನಿನೇನುಹೇಳುವೆ ?” ಈ ವಾಕ್ಯಗಳನ್ನು ಕೇಳಿ ಮಾಲತಿಯು " ಅಮ್ಮಾ ! ಆ ಬ್ರಾಹ್ಮಣ ನಿಗಾಗಿ ಎಲ್ಲೆಲ್ಲೊ ವಿಚಾರಿಸಿದೆ. ಅವನು ಈ ಊರಲ್ಲಿಯೇ ಇರುವ ನಂತ, ನಾನೇ ಅವನನ್ನು ಕಾಣಬೇಕೆಂದು ಯೋಚಿಸಿದೆ. ಆದರೆ ಯಾರಾ ದರೂ ದುಷ್ಟರಾದ ತುರುಷ್ಕರಿಂದ ಏನಾದರೂ ಕೇಡು ಸಂಭವಿಸೀತೆಂದು ಹೆದರುತ್ತಿರುವೆನು ಹೇಗಾದರೂ ಮಾಡಿ ಆತನ ವೃತ್ತಾಂತವನ್ನು ನಾಳೆ ತಿಳಿದುಕೊಂಡು ಬರುವೆನು. ಈದಿನ ನಿಶ್ಚಿಂತೆಯಿಂದ ನಿದ್ರೆ ಮಾಡು, ಇಲ್ಲ ದಿದ್ದರೆ ದೇಹಾರೋಗ್ಯವು ಕೆಟ್ಟತು.” ಎಂದು ಸಂತೈಸುತ್ತಿದ್ದಳು. ಅಷ್ಟರಲ್ಲಿ ಯಾರೊಬರುತ್ತಿದ್ದ ಶಬ್ದವು ಕೇಳಿಬಂದುದರಿಂದ, ತಾವು ಯೋಚಿಸುತ್ತಿದ್ದ ಬ್ರಾಹ್ಮಣನೇ ಬರುತ್ತಿರಬಹುದೆಂದು ಊಹಿಸಿದರು. ಆದರೆ ಅವನಿಗೆ ಬದುಲು, ಭಯ೦ಕರ ವೇಷವನ್ನು ಧರಿಸಿದ್ದ ಇಬ್ಬರು ಗಂಡಸರು ಅಲ್ಲಿಗೆ ಬಂದರು. ಅವರನ್ನು ಕಂಡು, ಭಯೋದ್ರೇಕದಿಂದ ಅನಂಗಸೇನೆಯು ಮರ್ಛ ಹೋದಳು. ಇದೇ ಸಮಯವೆಂದು ತೋಸಲ್