ಪುಟ:ರಾಯಚೂರು ವಿಜಯ ಭಾಗ ೧ .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೬ ಕರ್ಣಾಟಕಕ್ರಂಥಮಾಲೆ ಭ ತಿತ್ತು. ಪ್ರಾಣ ಹೋದರೂ ಹೋಗಲಿ ಎಂದು ಧೈರ್ಯದಿಂದ ಖಾನನ ಮುಖಮುರಿಯುವಂತಹ ಉತ್ತರವನ್ನು ಕೊಡಬೇಕೆಂದು ನಿರ್ಧರಿಸಿದಳು. ಅಷ್ಟರಲ್ಲಿ ಒಬ್ಬ ಪುರುಷನು ಬಹಳ ತ್ವರೆಯಾಗಿ ಒಂದು, ಖಾನನ ಕೈಗೆ ಒಂದು ಪತ್ರವನ್ನು ಕೊಟ್ಟನು. ಅದನ್ನು ಓದಿಕೊಂಡು ತನ್ನ ಬಳಿಯ ಶಿದ್ದ ಫಕೀರನನ್ನು ನೋಡಿ, “ ನಮ್ಮ ಪ್ರಭುಗಳಾದ ಅದಿಲ್‌ಪಹಾ ಅವರು ಇಲ್ಲಿಗೆ ದಯಮಾಡಿಸುವರಂತೆ, ಅವರು ಇಷ್ಟು ಬೇಗ ಬರುವ ರಂದು ನಾನು ನಂಬಿರಲಿಲ್ಲ, ಕೂಡಲೇ ಅವರನ್ನು ಇದಿರುಗೊಂಡು ಕರೆ ತರಬೇಕು. " ಎನ್ನಲು, ಆ ಫಕೀರನು ಆತನನ್ನು ಕುರಿತು, “ ಓ ! ರ್ಖಾ ವರರೆ ! ಹಾಗಾದರೆ ತಡಮಾಡಬಾರದು, ನಡೆಯಿರಿ, ಇನ್ನೊಂದು ದಿನ ಎಂದು ಈ ಸುಂದರಿಯರೊಡನೆ ಮಾತನಾಡಿಕೊಂಡು ಹೋಗಬಹುದು. ಆಕೆಯ ಮುಖಲಕ್ಷಣಗಳನ್ನು ಪರಿಶೀಲಿಸಿರುವನು. ಎಲ್ಲಾ ವಿಧಗಳಲ್ಲಿಯ ಆಕೆಯು ತಮಗೆ ಅನುಕೂಲಳಾದ ಪತ್ನಿಯಾಗುವಳು ! !” ಎಂದು ಪ್ರತ್ಯು ತರಕೊಟ್ಟನು. ಆ ಬಳಿಕ ಅವರಿಬ್ಬರೂ ಅಲ್ಲಿಂದ ಹೊರಟುಹೋದರು. ಅಗ ಮಾಲತಿಯು 'ಅಮ್ಮಾ ! ಅವರು ಹೊರಟುಹೋದರು. ಅವರು ನನಗೆ ಅಗೌರವವನ್ನು ಮಾಡಲಿಕ್ಕೆ ಬಂದಿರಲಿಲ್ಲ, ಏಳು ?” ಎಂದು ಸಮಾ ಧಾನ ಪಡಿಸಿದಳು. ಆದರೆ ವಾಸ್ತವವಾಗಿಯೂ ಅನಂಗಸೇನೆಗೆ ಮತ್ತೆ ಉಂಟಾಗಿರಲಿಲ್ಲವಾದುದರಿಂದ ಅದಕ್ಕೆ ಮುಂಚೆ ನಡೆದಿದ್ದ ಸಂಭಾಷಣೆಯಲ್ಲಿ ನನ್ನ ಆದ್ಯಂತವಾಗಿ ಕೇಳಿದ್ದಳು. ಆದುದರಿಂದ * ಅಮ್ಮಾ ! ಮಾಲತಿ ಏಕೆ ಸುಮ್ಮನೆ ಮರೆಮಾಚುತ್ತಿರುವೆ ? ಆ ಕುಟಿಲ ವಿಪ್ರನು ನಮಗೆ ಎಂತಹ ಆಪತ್ತನ್ನು ತಂದಿರುವನು ! ಇನ್ನು ಬದುಕಿರುವುದು ವ್ಯರ್ಥ, ನೀನು ನನ ಗಾಗಿ ಬಹಳ ಕಷ್ಟಗಳನ್ನು ಅನುಭವಿಸಿದೆ. ನಿನ್ನ ಬಂಧುಗಳನ್ನೆಲ್ಲರನ್ನೂ ಬಿಟ್ಟು ನನ್ನೊಡನೆ ಈ ವಿದೇಶಕ್ಕೆ ಬಂದೆ. ಆದರೂ ಸಾರ್ಥಕವಾಗಲಿಲ್ಲ. ಇಂದಿಗೆ ನನ್ನ ನಿನ್ನ ಋಣಾನುಬಂಧವು ಮುಗಿಯಿತು, ಈದಿನ ರಾತ್ರಿಯು ಟ |