ರಾ ರುವಿಜಯ ته ಅಂತ್ಯವಾಗುವುದರೊಳಗಾಗಿ ನನ್ನ ಜೀವನವೂ ಕಡೆಗಾಣುವುದು, ಇನ್ನಾ ದರೂ ನೀನು ನಿನ್ನವರಬಳಿಗೆ ಹೊರಟುಹೋಗು ” ಎಂದು ಅಳುತ್ತಾ ಉತ್ತರ ಹೇಳಿದಳು. ಈ ನಿರಾಶಾದ್ಯೋತಕವಚನಗಳನ್ನು ಕೇಳಿ ಮಾಲತಿಗೆ ಎದೆಯೊಡೆ ದಂತಾಯಿತು. ಆದರೂ ಅಂತಹ ವಿಷಮಸಮಯದಲ್ಲಿ ಧೃತಿಗೆಟ್ಟರೆ ಕೆಲಸಕೆಡು ವುದೆಂದು ತಿಳಿದು “ ಅಮ್ಮಾ ! ನೀನು ಇಷ್ಟು ನಿರಾಶಳಾಗುವುದು ಏಕೆ ? ಪ್ರಾಣಗಳನ್ನು ಕಳೆದುಕೊಳ್ಳುವಷ್ಟು ಮಟ್ಟಿಗೆ ಕೆಲಸಕೆಟ್ಟಿರುವುದೇ ? ನಿನ್ನ ಈ ಸೇವಕಳು ಬದುಕಿರುವಾಗ ನಿನಗೆ ಅವಮಾನವಾಗುವುದುಂಟೆ ? ಬಂದು ವೇಳೆ ಆ ದುರಾತ್ಮನು ಅಗೌರವಸಡಿಸಲು ಯತ್ನಿಸಿದರೂ, ಕರುಣಾ ಶಾಲಿಯ ಅನಾಥಸಂರಕ್ಷಕನೂ ಆದ, ಶ್ರೀ ಕೃಷ್ಣನು ನನ್ನನ್ನು ಈ ಕಷ್ಟ ಕಾಲದಲ್ಲಿ ಕೈಬಿಡುವನೆ ? ಸರ ಪ್ರಯತ್ನಗಳನ್ನೂ ಮಾಡಿ ನಿಮ್ಮನ್ನು ಈ ಕಷ್ಟದಿಂದ ತಪ್ಪಿಸುವನು. ” ಎಂದು ಧೈಯ್ಯ ಹೇಳಿದಳು. ಅನಂಗ-“ ಮಿತ್ರಳ ! ನಿನ್ನ ಮಾತುಗಳು ನಿಷ್ಪಲವಾದುವೆಂದು ತಿಳಿ ದಿದೇನೆ, ನನ್ನ ದುಃಖಪ್ರವಾಹಕ್ಕೆ ಏನಾದರೂ ಒಂದು ಅಡ್ಡಕಟ್ಟೆಯನ್ನು ಹಾಕಬೇಕೆಂದು ಪ್ರಯತ್ನಿಸುತ್ತಿರುವೆ. ಆದರೆ ಅದರಿಂದ ಫಲವೇನೂ ಇಲ್ಲ.” ಎಂದುಹೇಳ ಬಹಳವಾಗಿ ಅಳುತ್ತಿದ್ದಳು, ಮಾಲತಿಯ, ತನ್ನ ಶಕ್ತಿಯೆಲ್ಲ ವನ್ನೂ ಪ್ರಯೋಗಿಸಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಳು, ದುಃಖಾ ತಿರೇಕದಿಂದ ಅನಂಗಸೇನೆಗೆ ಬಹಳ ತೀವ್ರವಾದ ರವು ಬಂತು. ಆ ಹರಕ್ಕೆ ಔಷಧವನ್ನು ತಂದುಹಾಕಿದಹೊರತು ಅನಂಗಸೇನೆಯು ಉಳಿಯ ಲಾರಳೆಂದು ಮಾಲತಿಯು ಭಯಪಟ್ಟಳು. ಆದುದರಿಂದ ಸ್ವಲ್ಪ ಹಣವನ್ನು ತೆಗೆದುಕೊಂಡು, ದುರ್ಗದ ಹೊರಕ್ಕೆ ಹೋಗಿ ಔಷಧವನ್ನು ತರಬೇಕೆಂದು ಹೊರಟಳು. ದುರ್ಗಾಧ್ಯಕ್ಷನಿಗೆ ಹೇಳಿದ್ದರೆ ಔಷಧವು ಸುಲಭವಾಗಿ ಸಿಕ್ಕು ವುದೆಂದು ತಿಳಿದಿದ್ದರೂ, ಆ ದುರಾತ್ಮನಿಂದ ಉಪಕೃತಳಾದರೆ ಕೇಡುಮಡದೆ ಟ ಎ
ಪುಟ:ರಾಯಚೂರು ವಿಜಯ ಭಾಗ ೧ .djvu/೧೯೯
ಗೋಚರ