೮೬ ಕರ್ಣಾಟಕ ಗ್ರಂಥಮಾಲೆ •r ಆಗ ರಾಮು ಯಮಂತ್ರಿಯು ಎದ್ದು ಸಲಾಮುನಾಡಿ, ಬಾದ್ ಪಸರೇ : ಇಂಗಿತಜ್ಞನೆಂದು ತಿಳಿದುಕೊಂಡಿದ್ದ ನಾನೂ ಸಹ ತಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳಲಾರದೆ ಹೆ ೧೦ದೆನು ಇನ್ನು ನಾವು ಆಲಸ್ಯಮಾಡದೆ ಯದ್ಧಕ್ಕೆ ಹೊರಡುವುದು ಉಚಿತ ಶತ್ರುಗಳು ಯುದ್ಧ ಸನ್ನಾಹ ಮಾಡಿಕೊಳ್ಳುತಿರುವಂತೆ ಕಾಣುವುದು ನಾವು ಇನ್ನೂ ಏನನ್ನೂ ಮಾಡಿಕೊಂಡಿಲ್ಲ. ಈ ರಾಯಭಾರಿಯನ್ನು ಕಳುಹಿಸಿದ ಮಾರನೆಯ ದಿನವೇ ಅವರು ಯುದ್ಧಕ್ಕೆ ಬರುವರು. ಆದುದರಿ ದ ವಿಜಯಸಿಂಹನನ್ನು ಕಾರಾಗೃಹದಲ್ಲಿಡುವುದೇ ಒಳ್ಳೆಯದು. " ಎಂದುಹೇಳಿದನು. ರಾಮುಲು ಮಂತ್ರಿಗಳ ! ನನ್ನ ಮನಸ್ಸಿನಲ್ಲಿದ್ದಂತೆ ತಾವು ಹೇಳಿ ದಿರಿ, ಬಹಳ ಸಂತೋಷವಾಯಿತು.” ಎಂದು ಹೇ, ತೋಫಖಾನನನ್ನು ನೋಡುತ್ತಾ, “ ದುಗಾಧಿಕರೇ ! ಇನ್ನು ನೀವು ತಕ್ಕ ಯುದ್ಧ ಸನ್ನಾಹ ಗಳನ್ನು ಮಾಡುತ್ತಿರಿ, ನಾವು ರಾಜಧಾನಿಗೆ ಹೊರಡುವೆವು, ರಾಯಭಾರಿ ಯನ್ನು ಕಾರಾಗೃಹದಲ್ಲಿ ಡಿ ” ಎಂದು ಹೇಳಿ ಸಭೆಯನ್ನು ಮುಗಿಸಿದನು. ಸದಸ್ಯರೆಲ್ಲರೂ ಬಾದ್‌ಷಹನಿಗೆ ಸಲಾಮು ಮಾಡಿ, ವಿಜಯಸಿಂಹನಿಗೆ ಮರ Mಶಿಕ್ಷೆಯಾಗದೇ ಹೋದರೂ, ಕಾರಾಗೃಹವಾಸವಾದರೂ ಪ್ರಾಪ್ತವಾಯಿ ತಲ್ಲಾ ಎಂದು ಸಂತೋಷಪಟ್ಟು ಕೊಳ್ಳುತ್ತಾ ತಮ್ಮ ತಮ್ಮ ಬಿಡಾರಗಳಿಗೆ ಹೊರಟುಹೋದರು. - ತೋಫಖಾನನು ವಿಜಯನಿಂಹನ ಬಿಡದಿಗೆ ಹೋಗಿ • ವೀರ ಶ್ರೇಷ್ಠರೇ ! ನೀವು ತಂದ ಸಂದೇಶವನ್ನು ಕೇಳಿ ನಮ್ಮ ಬಾದ್‌ಷಹರೂ ನಾವೂ ಬಹಳ ಸಂತೋಷಪಟ್ಟೆವು. ನನ್ನು ಪ್ರಭುಗಳು ತಮಗೆ ಪ್ರತ್ಯು ತರ ಕೊಡುವವರೆಗೂ ದುರ್ಗಾಧ್ಯಕ್ಷನಾದ ನಾನು ತಮಗೆ ಸೇವೆ ಮಾಡು ತಿರುವೆನು. ನಮ್ಮ ದುರ್ಗವನ್ನು ನೋಡುವುದಕ್ಕೆ ದಯಮಾಡಿಸಿ. ಎಂದು ಉಪಚಾರವಾಗಿ ಮಾತನಾಡುತ್ತಾ ದುರ್ಗದ ಕೆಲವು ಭಾಗಗಳನ್ನು
ಪುಟ:ರಾಯಚೂರು ವಿಜಯ ಭಾಗ ೧ .djvu/೨೧೮
ಗೋಚರ