ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fಲೆ ಕರ್ಣಾಟಕ ಗ್ರಂಥಮಾಲೆ ಇrurnhn. f th Af F1 # # # # # # #141 { A

  • * //phpnnAAA

© ಟ | ಸಿಂಕನೋ ರುದ್ರದೇವನೋ ತಾವೇ ಯೋಚಿಸಿ, ಈಗಲಾದರೂ ರಾಮಯ ತಿಮ್ಮರಸರು ಆಂತರದಲ್ಲಿ ಮಿತ್ರರೇ ಎಂಬುದು ಗೊತ್ತಾಯಿತೆ ? ಕಂಬರ್‌- ಇದೂ ಇರಲಿ. ವಿಜಯಸಿಂಹನಿಗೂ ಅನಂಗಸೇನೆಗೂ ಸಂಬಂಧವನ್ನು ಕಲ್ಪಿಸಿದವನು ರಾಮಯಮಂತ್ರಿಯೇ ಎಂದು ಕೇಳಿರುವೆನು. ಇದಕ್ಕೂ ಏನಾದರೂ ಸಮಾಧಾನವನ್ನು ಹೇಳುವಿರೋ ? ರಾಮ- ಮಂತ್ರಿ ಶ್ರೇಷ್ಠರೆ ನಿಮ್ಮನ್ನು ಮೋಹಸಮುದ್ರದಲ್ಲಿ ಮುಳುಗಿಸುವುದರಿಂದ ನನಗೆ ಆಗುವ ಲಾಭವೇನು ? ನಂಬಿ, ನಂಬದಿರಿ ನಾನು ಹೇಳುವುದನ್ನು ಹೇಳಿಬಿಡುವೆನು, ಉಂಗುರಗಳನ್ನು ವಿನಿಮಯಮಾಡಿ ದುದೂ, ಸುಳ್ಳು ಕಾಗದವನ್ನು ಸೃಷ್ಟಿಸಿ ಅನಂಗಸೇನೆಯನ್ನು ಹೊರಡಿಸಿ ದುದೂ, ಕಾರಾಗೃಹದಲ್ಲಿದ್ದ ಮುಕ್ಕಾಂಬಾದಿಗಳನ್ನು ಬಿಡಿಸಿಕೊಂಡು ಬಂದುದೂ, ಇವೆಲ್ಲಾ ತಿಮ್ಮರಸನೆ ರಾಮಯನಿಂದ ಮಾಡಿಸಿದ ಕೆಲಸ ಗಳು, ಹೀಗೆ ಮಾಡಿಸಿದರೆ ಮಹಮ್ಮದೀಯರು ರಸಮಯವನ್ನು ವಿಜಯ ನಗರದ ವಿರೋಧಿಯೆಂದು ಭಾವಿಸುವರೆಂದೇ ಹೀಗೆಲ್ಲಾ ಮಾಡಿಸಿದುದು." ಕಂಬರ್“ ಅಯ್ಯಾ ! ಬೆಟ್ಟವನ್ನಗೆದು ಇಲಿಯನ್ನು ಹಿಡಿದಹಾಗೆ ಮಹಮ್ಮದೀಯರನ್ನು ಅಣಗಿಸಲು ಇಷ್ಟೊಂದು ಪ್ರಯಾಸವೇಕೆ ? " ರಾಮಯ – ಈ ಪ್ರವಾಸಕ್ಕೆ ತಕ್ಕಸವಿಲ್ಲದೇ ಇಲ್ಲ, ಈವರೆಗೂ ಬಿಜಾಪುರ ವಿಜಯನಗರಗಳಿಗೆ ಅತ್ಯಂತ ಮೈತ್ರಿಯಿದ್ದುದರಿಂದ ಬಿಜಾಪುರಕ್ಕೆ ಸೇರಿರುವ ರಾಯರುದುರ್ಗವನ್ನು ಹಿಡಿದು ಕೊಳ್ಳಬೇಕೆಂದು ಆಸೆ ಪಡುತ್ತಿದ್ದ ರಾಯರಿಗೆ ಸಮಯಸಿಕ್ಕದೇ ಇತ್ತು, ಅದಕ್ಕಾಗಿ ಒಂದು ಕಾರಣವನ್ನು ಕಲ್ಪಿಸಬೇಕೆಂದೇ ತಿಮ್ಮರಸನು ರಾಮಯಮಂತ್ರಿ ಯೊಡನೆ ಮುಕ್ಕಾಂಬೆ, ಅನಂಗಸೇನೆ,-ಇವರನ್ನು ಇಲ್ಲಿಗೆ ಕಳುಹಿಸಿರುವನು, ಮೊದಲು ಈ ದುರ್ಗವನ್ನು ಆಕ್ರಮಿಸಿಕೊಂಡು ಬಳಿಕ ಇತರ ಮಹಮ್ಮ ದೀಯ ರಾಜ್ಯವನ್ನು ವಿಜಯನಗರಕ್ಕೆ ಸಂಪಾದಿಸಿಕೊಡಬೇಕೆಂದು