ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕರ್ಣಾಟಕ ಗ್ರಂಥಮಾಲೆ Mowna ಬಹಳ ಬಲವಾಗಿದೆ. ಎರಡು ಗಂಟೆಗೆ ಒಂದುಸಲ ಅವರು ಬದುಲಾಯಿಸಿ ಕೊಳ್ಳುತ್ತಿರುವುದರಿಂದ ತಾವು ಒಬ್ಬರಿಬ್ಬರಿಗೆ ಅಜ್ಞ ಕೊಟ್ಟರೆ ಮಿಕ್ಕ ವರು ಅದೇ ಅಜ್ಞೆಯಂತೆ ನಡೆದುಕೊಳ್ಳುವರೋ ಇಲ್ಲವೋ ? ಇಂತಹ ಅಡ್ಡಿಯೇನಾದರೂ ಉಂಟಾದರೆ ಕೆಲಸವೇ ಕೆಡುವುದು. ಆದುದರಿಂದ ತಮ್ಮ ಹೆಸರಿನ ಮುದ್ರೆಯೊಂದನ್ನು ನನಗೆ ದಯಪಾಲಿಸುವುದಾದರೆ ಅದನ್ನು ಅವರಿಗೆ ತೋರಿಸಿ ನಿರಾತಂಕವಾಗಿ ಹೋಗಿ ಔಷಧವನ್ನು ತಂದುಕೊಡಲು ಸುಲಭವಾಗುವುದು, ತಮಗೇನೊ ಅನಂಗಸೇನೆಯಂತಹವರು ನೂರಾರು ಮಂದಿ ಸಿಕ್ಕುವರು. ಆದುದರಿಂದ ತಮಗೆ ಅಷ್ಟು ವಿಚಾರವಿರಲಾರದು. ನನಗಾದರೋ ಬಹಳ ವ್ಯಸನವಾಗಿದೆ” ಎಂದು ಗೋಳಾಡುತ್ತಾ ಹೇಳಿದಳು. ಖಾನನು ಈ ಮಾತುಗಳನ್ನು ಕೇಳಿ ಮರುಳಾಗಿ, “ ಸುಂದರಿ ! ಏನು,ಾತನಾಡಿದೆ? ನಿನಗೂ ಅನಂಗಸೇನೆಗೂ ಇರುವ ಪ್ರೀತಿಗಿಂತಲೂ ನನ್ನ ಪ್ರೀತಿಯು ಎಷ್ಟೋ ಹೆಚ್ಚಾಗಿದೆ. ಆದುದರಿಂದಲೇ ಈ ಮುದ್ರೆ ಮುಂಗುರವನ್ನ ನಿನಗೆ ಕೆ.ಡುತ್ತೇನೆ ಇದನ್ನು ತೋರಿಸಿದರೆ ಯಾವ ಘಟನೆ ನಿನ್ನನ್ನು ತಡೆ .ಲಾನು, ನಿನ್ನ ಸ್ನೇಹಿತರಿಗೆ ಗುಣವಾದ ಕೊಡಲೇ ಇವನ ನನಗೆ ಕೊಡು. ನೀನು ಕಷ್ಟಪಟ್ಟು ಆಕೆಯನ್ನು ಬದುಕಿನ ಅಳಗೆ ನನ್ನಲ್ಲಿ ಅನುರಾಗವನ್ನುಂಟುಮಾಡಿದರೆ ಅತ್ಯಂತ ಬಹು ಮಾನವನ್ನು ವು ಡುವೆನು. ಎಂದು ಹೇಳಿ ರಕ್ಷಕನಟರ ಯಜಮಾನ ನನ್ನು ಕರೆಯಿಸಿ, ಮುದ್ರೆಯುಂಗುರವನ್ನು ತೋರಿಸಿದ ಕೂಡಲೆ ಮಾಲತಿ ಯನ್ನು ಮಾತ್ರ ಹೊರಕ್ಕೆ ಬಿಡಬಹುದೆಂದು ಆಜ್ಞೆ ಮಾಡಿ ತನ್ನ ಸೌಧಕ್ಕೆ ಹೊರಟುಹೋದನು. ಬಳಿಕ ಮಾಲತಿ ಅತ್ಯಂತ ಸಂತೋಷಭ:ತಳಾಗಿ ಈ ಅಮ್ಮಾ ! ಅನಂಗಸೇನೆ : ಖಾನನ, ತೊಲಗಿಹೋದನು, ನೀನು ಈಗ ಏಳಬಹುದು.) ಎಂದು ಹೇಳಿದಳು. ಇದನ್ನು ಕೇಳಿ ಸಂತೋಷಿಸುತ್ತಾ ಅನಂಗಸೇನೆಯು ಬಿ