ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ffy v\\ wwy vvvvvv ಕಾಯಿರುವಿಜಯ ತನ್ನ ಮುಸುಕನ್ನು ತೆಗೆದುಹಾಕಿ ಎದ್ದು ಕುಳಿತುಕೊಂಡು “ ಎಲೇ ಮಾಲ ತೀ ! ಏನು ಚಮತ್ಕಾರಮಾಡಿದೆ ?, ಬೆಪ್ಪನೂ ಪಾಪಾಣಹೃದಯನೂ ಆದ ಖಾನನನ್ನೂ ಹಳ್ಳಕ್ಕೆ ಕೆಡವಿದೆ. ಉಪಾಯವೆಂದರೆ ನಿನ್ನದೇ ಸರಿ 1 ಇಷ್ಟು ಸಾಹಸಿಯಾದ ನಿನ್ನ ಸಹಾಯವನ್ನು ನನಗೆ ಭಗವಂ ತನು ಒದಗಿಸಿಕೊಟ್ಟಿರುವುದರಿಂದ ಎಷ್ಟು ಕೃಜ್ಞತಳಾಗಿದ್ದರೂ ಕಡಿಮೆ ಯೇ, ಈ ಉಂಗುರದ ಸಹಾಯದಿಂದ ರೋಗವು ಬಿಟ್ಟು ಹೋಗುವುದು ಹಾಗಿರಲಿ, ನಾನೇ ಬಿಟ್ಟು ಹೋಗುವುದಕ್ಕೆ ಇದನ್ನು ಉಪಯೋಗಿಸಿ ಕೊಳ್ಳೋಣ, ಇನ್ನು ಸೀನು ದುರಾತ್ಮನಾದ ಯಾವ ಭಟನ ತಂಟೆ ಯ ಇಲ್ಲದೆ ಬೇಕಾದಾಗ ಪುರಕ್ಕೆ ಹೋಗಿ ನಿನ್ನ ಕೆಲಸವನ್ನು ಮಾಡಿ ಕೊಳ್ಳಬಹುದು. ಈಗೇನು ಲಾನ್‌ ಸಾಹೇಬರು ಅಪ್ಪಣೆಕೊಡಿಸಿದ ವೈದ್ಯ ಶ್ರೇಷ್ಠರ ಬಳಿಗೆ ಹೋಗುವೆಯಷ್ಟೆ ? " ಎಂದು ಪರಿಹಾಸವಾಗಿ ಹೇಳಿದಳು. ಅನಂಗಸೇನೆಯು ಈ ಮಾತುಗಳನ್ನು ಕೇಳಿ ನಗುತ್ತಾ ಮಾಲತಿಯು “ ಅದಕ್ಕೇನು ? ಆದರೂ ಆಗಬಹುದು, ಆ ದಿನ ನೀನು ಅಪಾಯದಲ್ಲಿ ದ್ದಾಗ ತಕ್ಕ ಔಷಧವನ್ನು ಕೊಟ್ಟ ವೈದ್ಯನಿಗೆ ಏನು ಬಹುಮಾನವನ್ನು ಕೊಟ್ಟ ರೂ ಸಾಲದು. ಆತನಿಗೆ ಬೊವ ಬಹುಮಾನವನ್ನೂ ಇದುವರೆಗೂ ಕೂಡದೆ ಇರುವುದರಿಂದ ಆತನನ್ನು ನೋಡುವುದಕ್ಕೂ ನನಗೆ ಮುಖವಿಲ್ಲ. ಆತನಿಗೆ ಏನು ಬಹುಮಾನವನ್ನು ಕೊಟ್ಟು ಕಳುಹಿಸುವೆ, ಹೇಳು ! ಎಂದು ಪ್ರತ್ಯುತ್ತರಕೊಟ್ಟಳು. • ಸ್ನೇಹಿತಳ : ಸಿದ, ಹೇಳಿದ ಮಾತು ಸತ್ಯ. ಆತನಿಗೆ ಯಾವ ಪದಾರ್ಥವನ್ನು ಕೊಟ್ಟರೂ ಏಮಣ ತೀರುವುದಿಲ್ಲ, ನೀನು ನನ್ನವಳ ಆದುದರಿಂದ ನಿನ್ನನ್ನೇ ಆ ವೈದ್ಯನಿಗೆ ಬಹುಮಾನವನ್ನಾಗಿ ಕಳುಹಿಸಿಕೊಡು ವನು. ಇದಕ್ಕೆ ಒಪ್ಪುವೆಯಷ್ಟೆ ? " ಎಂದು ಅನಂಗಸೇನೆಯು ನಗುತ್ತಾ ಹೇಳಿದಳು.