ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧ YYYY। ಯw MY wwwr ಬ ಆದುದರಿಂದ ಇವನನ್ನು ನನ್ನೊಡನೆ ಕಳುಹಿಸಿಕೊಡು. ನನ್ನಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ ನೀನೂ ನನ್ನೊಡನೆ ಬಾ, ಅಥವಾ ನಿನಗೆ ವಿಶ್ವಾಸ ಪಾತ್ರನಾದ ಒಬ್ಬ ಸೇವಕನನ್ನು ಕಳುಹಿಸು ಪ್ರಭುಗಳ ಅಪ್ಪಣೆಯನ್ನು ಮೀರುವುದು ನಮ್ಮಂತಹವರಿಗೆ ಸರಿಯಲ್ಲ ೨೨ ಈ ಮಾತುಗಳನ್ನು ಕೇಳಿ ಆ ಅಧಿಕಾರಿಯು ಮತ್ತೊಂದು ಬಾರಿ ಮುದ್ರೆಯ ಉಂಗುರವನ್ನು ಪರೀಕ್ಷಿಸಿ, ತನಗೆ ನಂಬಿಕೆಯಾದ ಒಬ್ಬ ನೃತ್ಯ ನನ್ನ ಜೊತೆಗೆ ಕೊಟ್ಟು ವಿಜಯಸಿಂಹನನ್ನು ಆ ಪುರುಷನೊಡನೆ ಕಳು ಹಿಸಿದನು. ಅವರಿಬ್ಬರೂ ಖಡ್ಡ ಗಾಣಿಗಳಾಗಿ ವಿಜಯಸಿಂಹನನ್ನು ಮಧ್ಯ ದಲ್ಲಿ ನಡೆಯಿಸಿಕೊಂಡು ಸ್ವಲ್ಪ ದೂರ ಹೋದರು. ಆಗ ಕಾರಾಗೃಹದ ಭಟನು ಆ ಪುರುಷನನ್ನು ನೋಡಿ “ ಇದೇಕೆ ಈ ಮಾರ್ಗವನ್ನು ಹಿಡಿದೆ? ಆರಾಮಮಂದಿರಕ್ಕೆ ಈ ದಾರಿಯೇ ಹತ್ತಿರವಲ್ಲವೇ ? " ಎಂದು ಕೇಳಿದನು. ಅದಕ್ಕೆ ಆ ಪುರುಷನು “ಅಯ್ಯಾ ! ನನಗೆ ಆ ಮಾರ್ಗವು ತಿಳಿಯದು ಎಂದು ಭಾವಿಸಿರುವೆಯೋ ? * ಮಸೀದಿಯಿಂದ ಬರುವಾಗ್ಗೆ ಫಕೀರನನ್ನೂ ಕರೆತರಬೇಕು ' ಎಂದು ಪ್ರಭುಗಳು ನನಗೆ ಆಜ್ಞೆ ಮಾಡಿರುವರು. ಆದು ದರಿಂದ ಈ ಕಡೆ ಹೋಗ ಬೇಕಾಗಿದೆ ೨೨-ಎಂದು ಗರ್ಜಿಸಿದನು. ರಕ ಕಭಟ ನು ಆ ಗರ್ಜನೆಯನ್ನು ಕೇಳಿ, ಸ್ವಲ್ಪ ಮಟ್ಟಿಗೆ ಸಂಶಯವು ಉಂಟಾಗಿದ್ದರೂ ಮರುಮಾತನಾಡಲಾರದೆ ತಾನೂ ಅವನು ಹೋಗುತ್ತಿದ್ದ ಮಾರ್ಗವನ್ನೇ ಹಿಡಿದನು. ಇನ್ನು ಸ್ವಲ್ಪ ದೂರ ಹೋಗುವುದರೊಳಗಾಗಿ ಆ ಪುರುಷನ ಹಿಂದೂ ದೇವಾಲಯದ ಒಳಗೆ ಅವನನ್ನು ಕರೆತಂದಿದ್ದನು. ಆ ರಕ್ಷಕನಟ ನಿಗೆ ಸಂಶಯವು ಅಧಿಕವಾಗಿ, “ ಇದೇನಯ್ಯಾ 1 ಮಸೀದಿಗೆ ಎಂದು ಹೇಳಿ ಈ ಹಿಂದೂ ದೇವಸ್ಥಾನದ ಬಳಿಗೆ ಕರೆತಂದೆ ! ಎಂದು ಕೇಳಿದನು. ಇಷ್ಟು ಹೊತ್ತಿಗೆ ದೇವಾಲಯದಿಂದ ರಾಮರಾಜನು ಅವರಿದ್ದ ಸ್ಥಳಕ್ಕೆ ಬಂದು ರಕ್ಷಕಭಟನ ತಲೆಯ ಮೇಲೆ ಬಲವಾಗಿ ಬಂದು ಸೆಟ್ಟನ್ನು ಕೊಟ್ಟನು.