ರ೦ ರುಪಿಚಯ ೧೩೩ ಆ ಕ ಆಕೆಗೆ ಒಂದು ಕಾಗದವನ್ನು ಬರೆದಿದ್ದೆನು ಆಕೆಯು ನನಗೆ ಪ್ರತ್ಯು ತರವನ್ನು ಬರೆದಳು. ಈಗಲೇ ಆಕೆಯಿರುವಸ್ಥಳಕ್ಕೆ ಕರೆದುಕೊಂಡು ಹೋಗುವೆನು ಬಾ !” ಎಂದು ರಾಮರಾಜನು ಹೇಳಿದನು. ಈ ವಾಕ್ಯಗ ಳನ್ನು ಕೇಳಿ ವಿಜಯಸಿಂಹನಿಗೆ ಬಹಳ ಸಂತೋಷವಾಯಿತು. ಸ್ವಲ್ಪ ಹೊತ್ತಿಗೆಮುಂಚೆ ಆ ದುರ್ಗಂಧಮಯವಾಗ ಕಾರಾಗೃಹದಲ್ಲಿ ನಿರಾಶೆಯಿಂದ ನರಳುತ್ತಿದ್ದ ಅದೇ ವಿಜಯ ಸಿಂಹ ನೇ ಅದೇ ಶತ್ರುದುರ್ಗದಲ್ಲಿದ್ದ ತನ್ನ ಪ್ರಿಯಳ ಬಳಿಗೆ ಸಂತೋಷದಿಂದ ಈಗ ಹೋಗುತ್ತಿರುವನು ! ಕಾಲ ಗತಿಯು ಅತರ್ಕವಲ್ಲವೆ ? ಇಪ್ಪತ್ತೊಂಬತ್ತನೆಯ ಪ್ರಕರಣ, --, +40+." ಸಂದರ್ಶನ ಮುಕ್ಕಾಂಬೆಯು ವಾಸಿಸುತ್ತಿದ್ದ ಮಂದಿರವು ಬಂದು ಪ್ರಕಾರದ ಮಧ್ಯದಲ್ಲಿ ತು, ಉನ್ನತವಾದ ಆ ಪ್ರಕಾರದ ಗೋಡೆಗಳ ಉತ್ತರದಕ್ಷಿಣ ಭಾಗಗಳಲ್ಲಿ ಎರಡುಬಾಗಿಲುಗಳು ಇದ್ದವು. ಉಹರದ್ವಾರದಲ್ಲಿ ಹೊರಟರೆ ದೊಡ್ಡ ಮನೆಗಳು ಕಾಣುತ್ತಿದ್ದುವು. ಆ ಮಂದಿರಗಳಲ್ಲೇ ಪ್ರಹರೇಶ್ವರ ರುದ್ರದೇವಾದಿಗಳು ವಾಸಿಸುತ್ತಿದ್ದರು ಆ ಮಂದಿರಗಳಿಗೆ ದಕ್ಷಿಣದಲ್ಲಿ ಮತ್ತೊಂದು ಉನ್ನ ತಪಾಸಾದವಿತ್ತು, ಅದಕ್ಕೆ ಆಚೆ ಹತೋಟಗಳೂ ಒಂದು ದಿವ್ಯ ಮಂದಿರವೂ ಕಂಡುಬರುತ್ತಿದ್ದುವು, ದಕ್ಷಿಣದ್ವಾರದಿಂದ ಪ್ರವೇ ಶಿಸಿದರೆ, ಈ ಮಂದಿರದೊಳಕ್ಕೆ ಹೋಗುವಂತಿತ್ತು. ಅದನ್ನು ದಾಟಿ ಸೋಶa ನಪಞ್ಚಯನ್ನು ಹತ್ತಿ ಮಹಡಿಯ ಮೇಲಕ್ಕೆ ಹೋಗಬಹುದಾಗಿತ್ತು. ಆ ದಿಕ್ಕಿನಲ್ಲಿ ಏನು ನಡೆದರೂ ಉತ್ತರದಿಕ್ಕಿನ ಮಂದಿರದಲ್ಲಿದ್ದವರಿಗೆ ಗೊತ್ತಾಗು 8
ಪುಟ:ರಾಯಚೂರು ವಿಜಯ ಭಾಗ ೧ .djvu/೨೬೫
ಗೋಚರ