ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯರು ವಿಜಯ hat ವೇನು ?” ಎನ್ನಲು ರಾಮರಾಜನು ಈ ಮಾತುಗಳನ್ನು ಕೇಳಿ ಸ್ವಲ್ಪ ಹೊತ್ತು ಆಲೋಚಿಸುತ್ತಿದ್ದನು, ಆಗ ವಿಜಯಸಿಂಹನು, “ ಯುವತೀಮಣಿಯೇ ! ನಿನ್ನ ಮಂತ್ರಿಯ ವಿಷಯದಲ್ಲಿ ನೀನು ತೋರಿಸುತ್ತಿರುವ ಕೃತಜ್ಞತೆಗಾಗಿ ಬಹಳ ಸಂತೋಷವಾಗುವುದು, ನೀನು ಆತನೊಡನೆಯೇ ಇರಬಹುದು. ಆದರೆ ತಿಮ್ಮರಸನಿಗೆ ಒಂದು ಪತ್ರವನ್ನು ಬರೆದು ಕಳುಹಿಸು, ಮಿಕ್ಕ ಕಾಠ್ಯಗಳನ್ನು ನಾನು ನೋಡಿಕೊಳ್ಳುವೆನು. ಎಂದು ಹೇಳಿದನು. ರಾಮರಾಜನು ಈಮಾತುಗಳನ್ನು ಕೇಳಿ ಒಪ್ಪಿ, “ ಅಮ್ಮ ! ಬಹಳ ಕಷ್ಟಪಟ್ಟು ವಿಜಯಸಿಂಹನನ್ನು ಕಾರಾಗೃಹದಿಂದ ಬಿಡಿಸಿದೆವು. ಈ ವೃತ್ತಾಂತವನ್ನು ಯಾರೂ ತಿಳಿಯಕೂಡದು. ಸಮಯಬರುವವರೆಗೂ ಈತನನ್ನು ಇಲ್ಲಿಯೇ ಬಚ್ಚಿಡು. ಈತನನ್ನು ಈ ದುರ್ಗದಿಂದ ಕಳುಹಿ ಸಿಬಿಟ್ಟರೆ, ಕೂಡಲೇ ಹಿಂತಿರುಗಿ ಬರಲಾರನು. ಆದುದರಿಂದ ಇವನನ್ನು ಬಜ್ಞೆಡುವ ಭಾರ ನಿನ್ನದೇ, ” ಎಂದು ಹೇಳಿದನು.

  • ಅಣ್ಣಾ ! ಹೇಗೆ ಬಚ್ಚಿಡಲಿ ? ಆ ಮಂದಿರದಲ್ಲಿ ರುವ ಪ್ರಹರೇಕ ರಾದಿಗಳಿಗೆ ಇದು ತಿಳಿಯದೇಹೋಗುವುದೇ ? ತಿಳಿದರೆ ಈತನನ್ನು ಕೊಲ್ಲ ದೆ ಅವರು ಸುಮ್ಮನೆ ಬಿಡುವರೇ ? ಏನುಮಾಡಲಿ !” ಎಂದು ಮುಕ್ಕಾಂ ಬೆಯು ಬಹಳ ವ್ಯಸನದಿಂದ ಹೇಳಿದಳು.

“ ಹಾಗಲ್ಲ, ಇವನಿಗೆ ಕಾರಾಗೃಹವಾಸವೆಂದರೆ ಬಹಳ ಇಷ್ಟ. ಆದುದರಿಂದ ಈ ಮಂದಿರದಲ್ಲಿ ಬಂದು ಕಡೆ ಈತನನ್ನು ಬಂಧಿಸಿ ಎಚ್ಚರಿಕೆ ಯಿಂದ ನೋಡಿಕೊಳ್ಳುತ್ತಿರು. ನಾಳೆಯದಿನ ಶಂಕರರೆಡ್ಡಿ ಯನ್ನು ಇಲ್ಲಿಗೆ ಕಳುಹಿಸುವೆನು, ನಿಮ್ಮ ಕಾಠ್ಯದಲ್ಲಿ ಆತನೂ ಸಹಾಯಮಾಡುವನು. " ಎಂದು ಹೇಳಿ ರಾಮರಾಜನು ಹೊರಟುಹೋದನು. ಅನಂತರ ಮುಕ್ತಾಂಬಾವಿಜಯಸಿಂಹರು ತಮ್ಮ ತಮ್ಮ ಸಮಾಚಾರ ಗಳನ್ನು ಮಾತನಾಡಿಕೊಳ್ಳುತ್ತಾ ಕಾಲವನ್ನು ಕಳದರು. ಮರುದಿನ