ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯುವಿಜಯ ೧೪೭ ನು ಶತ ಗಳಿಗೆ ಕೋಟದ ೧ ಮು ಕುಶರಾಗಿ, ತಮ್ಮ ಪ್ರಭುತ್ವವನ್ನೆ ನಡೆಯಗೊಡಿಸಲು, ಕಾರಾಗೃಹಗಳಲ್ಲಿ ರುವವರು ತಪ್ಪಿಸಿಕೊಂಡರೆ, ರಾಜ್ಯದ ಬಿಗಿಯು ತಪ್ಪಿತೆಂದು ಸುಲಭವಾಗಿ ಎಲ್ಲರಿಗೂ ತಿಳಿಯುವುದು. ಆದುದರಿಂದ ಅಂತಹ ದುಷ್ಟರನ್ನು ಹಿಡಿದು ಈಗಲೇ ಶಿಕ್ಷಿಸಬೇಕು. ಮಾಲತಿಯು ಬಹಳ ಚತುರಳು, ಅವಳು ಉಂಗುರ ಕೊಟ್ಟಿರಬಹುದು, ಆದರೆ ನಾವು ಈಗ ಅವಳ ಸ್ನು ಬಂಧಿಸುವುದು ಒಳ್ಳೆಯದಲ್ಲವೆಂದು ತೋರುವುದು. ಹಾಗೆ ಬಾಧಿಸಿದರೆ ಈ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮನ್ನು ವರಿಸಬೇಕೆಂದಿರುವ ಅನಂಗಸೇನೆಯ ಮನಸ್ಸನ್ನು ಮುರಿಯಬಹುದು. ಫಲೋನ್ಮುಖವಾಗಿರುವ ಕಾರವು ನಿಷ್ಪಲವಾಗುವುದಲ್ಲಾ ಎಂದು ವ್ಯಸನವಾ ಗುತ್ತಿದೆ. ಆದುದರಿಂದ ರಾಜದ್ರೋಹಿಗಳನ್ನು ಹಿಡಿಯಲು ಮತ್ತೊಂದು ಉಪಾಯವನ್ನು ಆಯೋಜಿಸುವುದು ಒಳ್ಳೆಯದಲ್ಲವೇ ?” ಎಂದು ಫಕೀರನು ಕೇಳಿದನು. N N “ ಪೂಜ ರೇ ? ತಮ್ಮ ವಚನಗಳು ಯುಕ್ತವೇಸರಿ, ರಾಜಕಾರಾ ಧೀನಚಿತ್ತನಾಗಿ ಈ ವಿಷಯವನ್ನು ಮರೆತಿದ್ದೆ, ಮಾಲತಿಯನ್ನು ಬಾಧಿಸಿ ದರೆ ನಮ್ಮ ಕೆಲಸವು ಕೆಡುವುದು, ೨೨ ಎಂದು ಖಾನನು ಮಾತನಾಡುತ್ತಿದ್ದಾಗ ಒಬ್ಬ ದ್ವಾರಪಾಲಕನು ಅಲ್ಲಿಗೆಬಂದು, “ ಅಹಮ್ಮದ್ ನಗರದಿಂದ ಬಂದಿ ರುವ ಒಬ್ಬ ಸೇವಕನು ತಮ್ಮ ದರ್ಶನವನ್ನು ಮಾಡಬೇಕೆಂದು ಕಾದಿರು ವನು. ಅಪ್ಪಣೆ ಖಾದರೆ ಇಲ್ಲಿಗೆ ಕರೆತರುವೆನು ಎಂದು ವಿಜ್ಞಾನಿ ದನು. ಖಾನನು ಸಮ್ಮತಿಸಲಾಗಿ ಆ ಸೇವಕನು ಅಹಮ್ಮದ್‌ನಗರದಿಂದ ಬಂದಿದ್ದವನನ್ನು ಕರೆತಂದು ಬಿಟ್ಟನು. ಅವನು ತಾನು ತಂದಿದ್ದ ಎರಡು ಪತ್ರಗಳನ್ನು ಭಕ್ತಿ ಪೂರಕವಾಗಿ ಗವನಿಗೆ ಸಮರ್ಪಿಸಿದನು. ಅವುಗಳಲ್ಲಿ ಬಂದರ ಒಕ್ಕಣೆಯು ಈರೀತಿಯಲ್ಲಿತ್ತು:-