ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧೬೫. ವಾಡಿ, ಪಾತ್ರೆಗಳನ್ನು ಹಿಡಿದುಕೊಂಡು ಪುನಃ ಹೊರಡಲು ಪ್ರಯತ್ನಿಸಿ ದಾಗ, ಮಾಲತಿಯು ಅವಳನ್ನು ತಡೆದು * ಸ್ವಲ್ಪ ತಾಳು. ಅಂತಹ ಅವಸರ ವೇನು? ಕುಳಿತುಕೊ, ಈ ದುರ್ಗದ ಸಮಾಚಾರವೇನು ? ಹೇಳಿ ನನಗೆ ಸಂತೋಷಪಡಿಸುವೆಯಾ ” ಎಂದು ಕೇಳಿದಳು. ತನಗೆ ಅಂತಹ ಒಳ್ಳೆಯ ಸೀರೆಯನ್ನು ಕೊಡಿಸಿದ್ದ ಮಾಲತಿಯ ಮಾತನ್ನು ಮೀರಲಾರದೆ, ಆ ಪರಿಚಾರಿಕೆಯು ಅಲ್ಲಿಯೇ ಕುಳಿತುಕೊಂಡು ದುರ್ಗಾಧ್ಯಕ್ಷನ ಅಂತಃಪುರರಹಸ್ಯವನ್ನೂ ಆ ದುರ್ಗದಲ್ಲಿದ್ದ ಧನಿಕನ್ತಿ ಯರ ರಹಸ್ಯಗಳನ್ನೂ ಸರಸವಾಗಿ ವರ್ಣಿಸಿ ಅವರನ್ನು ನಗಿಸುತ್ತಿದ್ದಳು. ಇಷ್ಟು ಹೊತ್ತಿಗೆ ರಾತ್ರಿ ಬಹಳ ಹೊತ್ತಾಯಿತು. ಆಗ ಅನಂಗಸೇನೆಯು ತನ್ನ ಹಾಸಿಗೆಯ ಮೇಲೆ ಕುಳಿತುಕೊಂಡು, ಆ ಸೇವಕಿಯ ವರ್ಣನೆಯು ಬಹಳ ಚಮತ್ಕಾರವಾಗಿದೆಯೆಂದೂ ಆಕೆಯ ಮಾತಿನ ಬುದ್ದಿವಂತಿಕೆಯನ್ನು ಮೊದಲೇ ತಿಳಿಯದೇಹೋದುದು ತನ್ನ ದುರದೃಷ್ಟವೆಂದೂ ಅವಳನ್ನು ಹೊಗಳಿ, ಇನ್ನೂ ಆಕೆಯ ವರ್ಣನೆ ಯನ್ನು ಕೇಳಬೇಕೆಂದಿದ್ದುದರಿಂದ ಆ ಪರಿಚಾರಿಕೆಯ ಆರಾತ್ರೆ ಅಲ್ಲಿಯೇ ನಿದ್ರಿಸಬೇಕೆಂದೂ ಒತ್ತಾಯಮಾಡಿದಳು. ಆದುದರಿಂದ ಆ ಸೇವಕಿಯು ದಾಕ್ಷಿಣ್ಯಕ್ಕೆ ಸಿಕ್ಕಿ ಆರಾತ್ರಿ ಆಕೆಯ ಕೊಟಡಿಯಲ್ಲೇ ಮಲಗಿಕೊಳ್ಳಲು ಒಪ್ಪಿದಳು, ಅರ್ಧರಾತ್ರಿಯವರೆಗೂ ಆ ಸೇವಕಿಯ ವರ್ಣನೆಯು ನಡೆ ಯುತ್ತಲೇ ಇತ್ತು. ಆಬಳಿಕ ನಿದ್ರಾಭರದಿಂದ ಮವರೂ ಮಲಗಿಕೊಂ ಡರು ಪರಿಚಾರಿಕೆಯು ಬೆಳಗಿನಿಂದ ಕಷ್ಟಪಟ್ಟು ದುಡಿದಿದ್ದ ಕಾರಣ ಅವ ೪ಗೆ ಗಾಢವಾದ ನಿದ್ರೆಯು ಬಂತು. ಇನ್ನು ಸ್ವಲ್ಪಹೊತ್ತು ಕಳೆದ ಬಳಿಕ ಒಬ್ಬ ಸ್ತ್ರೀಯು ಕೆಲವು ವಸ್ತುಗಳನ್ನು ಗಂಟುಕಟ್ಟಿಕೊಂಡು ಹೊರಟು ದುರ್ಗವ್ವಾರದ ಬಳಿಗೆ ಬಂದಳು. ಅಲ್ಲಿ ಆಯುಧಹಸ್ತನಾಗಿ ತಿರುಗುತ್ತಿದ್ದ