ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ರಾಯರು ವಿಜಯ ಎರಡನೆಯ ಸ್ತ್ರೀ-“ ನನ್ನ ವೇಷವನ್ನೂ ಈ ಪಾತ್ರೆಯನ್ನೂ ನೋಡಿ ಯಾದರೂ ತಿಳಿಯಬಾರದಾಗಿತ್ತ! ದ್ವಾರ- ಅನಂಗಸೇನೆಯ ಒಳಗೆ ಇರುವಳೋ? ೨೨ ಎರಡನೆಯ ಸ್ತ್ರೀ-“ ಹೌದು ; ನಿದ್ರಿಸುತ್ತಿರುವಳು.” ದಾರ-“ ಇಷ್ಟು ಹೊತ್ತೂ ಇಲ್ಲಿ ನೀನು ಏನುಮಾಡುತ್ತಿದ್ದೆ? " ಎರಡನೆಯ ಸ್ತ್ರೀ-“ಅನಂಗಸೇನೆಯು ನನ್ನೊಡನೆ ಮಾತನಾಡುತ್ತಿದ್ದ ಹಾಗೆಯೇ ಬಹಳ ಕಷ್ಟದ ಕೆಲಸಗಳನ್ನು ಮಾಡಿದ್ದ ನನಗೆ ನಿದ್ದೆಯು ಬಂತು, ಈಗ ಎಚ ರವಾಗಲು ಹೊರಟುಬಂದೆನು. ಒಳಗೆ ಅನಂಗ ಸೇನೆಯು ಒಬ್ಬಳೇ ಇರುವಳು. ಎಚ್ಚರಿಕೆಯಿಂದ ನೋಡಿಕೋ ” ಎಂದು ಹೇಳಿ ಹೊರಟುಹೋದಳು. - ಇನ್ನು ಸ್ವಲ್ಪ ಹೊತ್ತು ಕಳೆದ ಬಳಿಕ ನಿದ್ರಾದೇವಿಯ ಪ್ರಭಾವವು ಸ್ಪಲ್ಪ ಸ್ವಲ್ಪವಾಗಿ ಆ ದ್ವಾರಪಾಲಕನನ್ನೂ ಆಕ್ರಮಿಸುತ್ತಿತ್ತು. ಮೊದ ಮೊದಲು ನಿದ್ದೆಗೆ ಒಳಗಾಗಬಾರದೆಂದು ದೃಢಮಾಡಿಕೊಂಡು ಅತ್ತಿತ್ತ ಸುತ್ತಾಡುತ್ತಿದ್ದನು. ಹೀಗೆ ಸ್ವಲ್ಪಹೊತ್ತು ಕಳೆದ ಬಳಿಕ ಒಂದೊಂದು ಕಣ್ಣನ್ನು ಮುಚ್ಚಿಕೊಂಡು ಒಂದೊಂದು ಕ್ಷಣ ನಿದ್ರಿಸಲು ಪ್ರಾರಂಭ ಮಾಡಿದನು. ಇನ್ನೂ ಸ್ವಲ್ಪ ಹೊತ್ತಿನಲ್ಲೇ ಎರಡು ಕಣ್ಣುಗಳಿಂದಲೂ ಒಂದೊಂದು ಕ್ಷಣ ನಿದ್ದೆ ಮಾಡಿದರೆ ಬಾಧಕವೇನೂ ಇಲ್ಲವೆಂದು ಭಾವಿಸಿ ಸ್ಪಲ್ಪಸ್ವಲ್ಪಹೊತ್ತು ನಿದ್ರೆ ಮಾಡುತ್ತಾ ಬಂದನು. ಹೀಗೆ ಬಂದುಸಲ ಕಣ್ಣು ಮುಚ್ಚಿಕೊಂಡು ಪುನಃ ಬಿಟ್ಟಾಗ, ಈ ದ್ವಾರಪಾಲಕನ ಇದಿರಿಗೆ ಖರತರಖಡ್ ಪಾಲಿಯಾದ ಒಬ್ಬ ಭಟನು ದುರ್ಗದ್ವಾರದ ಕಡೆಗೆ ಬರು ತಿದ್ದುದನ್ನು ಕಂಡನು. ಪುನಃ “ ಯಾರು ಅಲ್ಲಿ ಬರುವವರು ? ಅಲ್ಲೇ ನಿಂತು ಸರಿಯಾದ ಸಮಾಧಾನವನ್ನು ಹೇಳಿದರೆ ಸರಿ ; ಇಲ್ಲದಿದ್ದರೆ ನಿನಗೆ