ಪುಟ:ರಾಯಚೂರು ವಿಜಯ ಭಾಗ ೧ .djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧೬೯ •••••www ವ ಇಲ್ಲದೇ ಇದ್ದ ಆ ಸಮಯದಲ್ಲಿ ಒಂದುಸಾರಿ ಅನಂಗಸೇನೆಯನ್ನು ನೋಡಿ ಮಾತನಾಡಿಕೊಂಡು ಬರೋಣವೆಂದು ಆ ಮಂದಿರದೊಳಕ್ಕೆ ಹೋದನು. ಅಲ್ಲಿ ಮಲಗಿದ್ದ ನೀಯು, ಅನಂಗಸೇನೆಯು ಧರಿಸುತ್ತಿದ್ದ ಸೀರೆಯನ್ನು ಉಟ್ಟು ಕೊಂಡು ಇದ್ದುದರಿಂದ, ಆಕೆಯನ್ನು ಅನಂಗಸೇನೆಯೆಂದೇ ಭ್ರಮಿಸಿ ದನು, ಆಕೆಯೊಡನೆ ಮಾತನಾಡಬಹುದೆ. ಕೂಡದೋ ಎಂದು ಸ್ವಲ್ಪ ಹೊತ್ತು ಅನುಮಾನಿಸಿ, ಕಡೆಗೆ ಆಕೆಯು ಮಲಗಿದ್ದ ಸ್ಥಳಕ್ಕೆ ಸ್ವಲ್ಪ ದೂರ ದಲ್ಲಿ ನಿಂತುಕೊಂಡು 6• ಸುಂದರಿ! ಅನಂಗಸೇನೆ ! 99 ಎಂದು ಎರಡ.ಮೂರು ಸಾರಿ ಕೂಗಿದನು. ಆಕೆಯಿಂದ ಉತ್ತರ ಯಾವುದೂ ಬಾರದೇ ಇದ್ದುದರಿಂದ ಮತ್ತೂ ಸವಿಾಪಕ್ಕೆ ಹೋಗಿ ನೋಡಿದ ಕೂಡಲೆ, ಖಾನನಿಗೆ ದಿಮೆಯಾ ಯಿತು. ಅವನು 14 ಎಲೇ! ದಾಸಿ! ನೀಚ ! ಅನಂಗಸೇನೆಯ ವಸ್ತ್ರಗಳನ್ನು ಧರಿಸಿ ಇಲ್ಲೇಕೆ ಬಿದ್ದಿರುವೆ? ನಿಜಹೇಳು ; ಇಲ್ಲದಿದ್ದರೆ ಕತ್ತರಿಸಿ ಹಾಕು ವೆನು ” ಎಂದು ಗರ್ಜಿಸಿದನು. ಈ ಮಾತುಗಳನ್ನು ಕೇಳಿ ಎಚ ರವಾದ ಆ ದಾಸಿಯು ಇದಿರಿಗೆ ನಿಂತಿದ್ದ ದುರ್ಗಾಧ್ಯಕ್ಷನನ್ನು ನೋಡಿ ಬಹಳ ಹೆದರಿ ಗದ್ದ ದಸ್ಸರದಿಂದ ಮಹಾ ಪ್ರಭುಗಳೇ ! ಅಭಯವನ್ನು ದಯಪಾಲಿಸುವುದಾದರೆ ನಡೆದ ಸಂಗ ತಿಯನ್ನು ಹೇಳುವೆನು, 99 ಎಂದು ಬೇಡಿಕೊಂಡಳು. ಖಾನನು ಅಭಯ ದಾನವನ್ನು ಮಾಡಲು ಅದುವರೆಗೆ ನಡೆದಿದ್ದ ಸಮಾಚಾರವೆಲ್ಲವನ್ನೂ ಸಾಂಗವಾಗಿ ವಿವರಿಸಿದಳು. ಕೈಗೆ ಸಿಕ್ಕಿದ್ದ ಹಕ್ಕಿಯು ಹಾರಿಹೋಯಿತಲ್ಲಾ ! ಎಂದು ಖಾನನು ಬಹಳವಾಗಿ ವ್ಯಥೆಪಡುತ್ತಾ ತನ್ನ ಸೌಧಕ್ಕೆ ಹಿಂತಿ ರುಗಿದನು.