೧೭೦ ಕರ್ಣಾಟಕಕ್ರಂಥಮಾಲೆ wwwywwwy wwws hwww ಮೂವತ್ತುಮೂರನೆಯ ಪ್ರಕರಣ ರುದ್ರದೇವ ತಿಮ್ಮರಸನು ಮಾಡಿದ ಉಪಾಯಗಳನ್ನು ರಾಮರಾಜನು ಹೇಳಿದ ಕೂಡಲೆ, ರಾಮಯನ ಪ್ರಯತ್ನಗಳು ನಡೆಯಲಾರವೆಂದು ಮುಕ್ಕಾಂಬೆಯು ನಿರ್ಧರಿಸಿದಳು, ಈಗ, ರಾಯರು ಅದಿಲ್‌ಪಹನನ್ನು ಓಡಿಸಿದುದನ್ನು ಕೇ ಸಂಪೂರ್ಣವಾಗಿ ನಿರಾಶಳಾದಳು. ರಾಮಯನನ್ನು ಕರೆಯಕಳುಹಿಸಿ ಇನ್ನಾ ದರೂ ಆತನು ತನ್ನ ಪ್ರಯತ್ನವನ್ನು ನಿಲ್ಲಿಸಬೇಕೆಂದು ತಿಳಿಸುವೆನು ಎಂದು ಭಾವಿಸಿದಳು; ಆದರೆ ರಾಮಯನು ತನ್ನ ಮಾತನ್ನು ಕೇಳದೆ ಹೋಗಬಹು ದೆಂದು ಸುಮ್ಮನಾದಳು. ಆಗ ಮುಕ್ಕಾಂಬೆಯು ಒಂದು ಪತ್ರವನ್ನು ಬರೆದು ಒಂದು ಲಕೋಟೆಯೊಳಕ್ಕೆ ಹಾಕಿ ಅದನ್ನು ವಿಶ್ವಾಸಪಾತ್ರನಾದ ಒಬ್ಬನಕೈಯಲ್ಲಿ ಕಳುಹಿಸಬೇಕೆಂದೂ, ರುದ್ರದೇವನೇ ಅದಕ್ಕೆ ತಕ್ಕವ ನಂದೂ ನಿರ್ಧರಿಸಿದಳು. ಹೀಗಿರುವಲ್ಲಿ ಆಕೆಯನ್ನು ನೋಡಬೇಕೆಂದು ರುದ; ದೇವನು ಬಂದಾಗ, “ಓ ವೀರಶ್ರೇಷ್ಠ' ಎಷ್ಟು ದಿನಗಳ ಮೇಲೆ ನಿನ್ನ ಸಂದರ್ಶ ನವಾಯಿತು ! ಏನು ! ನನ್ನ ವಿಷಯವೇ ಮರೆತು ಹೋಗಿತ್ತೆ ? ಅಥವಾ ನನ್ನನ್ನು ನೋಡಬೇಡವೆಂದು ರಾಮಯಮಂತ್ರಿಯ ಅಡ್ಡಿಮಾಡಿದ್ದನೋ?" ಎಂದು ಮುಕ್ತಾಂಬೆಯು ಕೇಳಿದಳು.
- ಸುಂದರಿ : ನಿನ್ನ ಮನೋಹರಾಕಾರವು ನನ್ನ ಮನೋದರ್ಪಣ ದಲ್ಲಿ ಸ್ಥಿರವಾಗಿ ನೆಲಸಿರುವಾಗ ನಿನ್ನನ್ನು ಮರೆಯುವುದು ಹೇಗೆ ? ನಾನು ಪ್ರತಿದಿವಸವೂ ಇಲ್ಲಿಗೆ ಬರುತ್ತಿದ್ದೆನು ; ನಿನ್ನನ್ನು ನೋಡಲು ಅವಕಾಶ ಸಿಕ್ಕದೆ ಪ್ರತಿದಿವಸವೂ ಹಿಂದಕ್ಕೆ ಹೋಗುತ್ತಿದ್ದೆನು” ಎಂದು ರುದ್ರದೇವನು ಹೇಳಿದನು.
ಬ