ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯಟ್ಟಿರುವಿಜಯ ೧೭೧ ೨ ೧ ೨ ೧ - ರುದ್ರದೇವನು ಹೇಳಿದಮಾತು ನಿಜ, ಆತನು ಬಂದಾಗೆಲ್ಲಾ ಏನಾ ದರೂ ಒಂದು ಕಾರಣವನ್ನು ಹೇಳಿ ರುದ್ರದೇವನಿಗೆ ಸಂದರ್ಶನವನ್ನು ಕೊಡದೆ ಆಕೆಯು ಕಳುಹಿಸಿ ಬಿಡುತ್ತಿದ್ದಳು. ಆದರೂ ಈಗ ಅವನಿಂದ ಕೆಲಸವಾಗಬೇಕಾಗಿದ್ದ ಕಾರಣ, ಅವನನ್ನು ವಶಪಡಿಸಿಕೊಳ್ಳುವುದಕ್ಕಾಗಿ ಹೀಗೆ ಮಾತನಾಡುತ್ತಿದ್ದಳು. ರುದ್ರದೇವನ ಮಾತುಗಳನ್ನು ಕೇಳಿ ಬಹಳ ಸಂತೋಷಪಟ್ಟವಳಂತೆ, * ರುದ್ರದೇವ ! ಪರಿಹಾನಾರ್ಥವಾಗಿ ಹೇಳಿದ ಮಾತುಗಳನ್ನು ನಿಜವೆಂದು ನಂಬಬೇಡ, ನನ್ನಲ್ಲಿ ನಿನಗೆ ಎಷ್ಟು ಅನುರಾಗವಿದೆ ಎಂಬುದನ್ನು ನೀನು ಪ್ರತಿದಿನವೂ ಇಲ್ಲಿಗೆ ಬರುತ್ತಿದ್ದುದರಿಂದಲೇ ತಿಳಿದು ಕೊಂಡೆನು, ಆದರೆ ನಿನ್ನನ್ನು ಮತ್ತೆ ಮತ್ತೆ ಪರೀಕ್ಷಿಸಬೇಕೆಂದು ಹಾಗೆಮಾ ಡುತ್ತಿದ್ದೆನು. ರಾಮಯಿ ಮಂತ್ರಿಯ ಪ್ರಯತ್ನಗಳು ಹೇಗಿವೆ ? ನಮ್ಮಕ ಮೃಗಳು ಎಂದಾದರೂ ತೊಲಗಿ ನಮಗೆ ಸುಖವುಂಟಾದೀತೆ ? ೨೨ ಎಂದು ಬಹಳ ವ್ಯಸನದಿಂದ ಕೇಳಿದಳು. ೯೯ ರನುಣೀಮಣಿ ! ರಾಮಯಮಂತ್ರಿಯು ಬುದ್ದಿವಂತನೇ ! ಆತನ ಕಾಠ್ಯಗಳಲ್ಲಿ ಪುರುಷಪ್ರಯತ್ನಕ್ಕೆ ಸ್ವಲ್ಪವಾದರೂ ಲೋಪವಿಲ್ಲ, ಆದರೆ ದೈವಸಹಾಯವಿಲ್ಲದಿರುವುದರಿಂದ ಆತನ ಪ್ರಯತ್ನಗಳು ವ್ಯರ್ಥವಾಗುತ್ತಿವೆ. ಎಷ್ಟೋ ಕಷ್ಟದಿಂದ ಒಟ್ಟುಗೂಡಿಸಿದ್ದ ಮಹಮ್ಮದೀಯ ರಾಜ್ಯಗಳು ಪುನಃ ಚದಿರಿಹೋದುವು. ಈ ದುರ್ಗದಲ್ಲಿ ಸೆರೆಬಿದ್ದಿದ್ದ ವಿಜಯಸಿಂಹನೂ ತಪ್ಪಿಸಿ ಕೊಂಡನು, ಇಷ್ಟೆಲ್ಲಾ ಆದರೂ ರಾಮಯನು ಎದೆಗುಂದಲಾರನು,” ಎಂದು ರುದ್ರದೇವನು ಧೈಯ್ಯಪೇಳಿದನು.

  • “ವೀರಶ್ರೇಷ್ಟನೇ! ನೀನು ಹೇಳಿದುದು ನಿಜ. ರಾಮಯಮಂತ್ರಿಯು ಸ್ಥಿರಪ್ರತಿಜ್ಞನೂ, ಅಧ್ಯವಸಾಯಿಯ ಹೌದು, ಆದರೆ ಕಾರವು ನೆರವೇರದೆ ಹೋದುದರಿಂದ ನಾನು ಉಭಯಭ್ರಷ್ಟಳಾದೆನು. ಯುದ್ಧಪ್ರಯ ತ್ನವೂ ಕೆಟ್ಟಿತು. ಅದಿಲ್‌ಪಹನಿಗೆ ತನ್ನ ರಾಜ್ಯವನ್ನೇ ಉಳಿಸಿಕೊಳ್ಳುವ