ರಾಯರುವಿಜಯ www + A # # # #rk2 ##heHY ಬೇಕಾದಷ್ಟು ವರ್ಷವನ್ನು ಸುರಿಸಿ ಪರಿತಸನುಗಳಲ್ಲಿಯ ದಾವಾನಲಾರ್ಚೆ ಗಳನ್ನು ಶಮನಮಾಡಿದರೂ, ಕಡೆಕಡೆಗೆ ಹಾಗೆ ಆರಿಸಿದ ಒಟವಾನಚ್ಚಾಲೆ ಗಳಿಗಿಂತಲೂ ಭಯಂಕರವಾದ ನಿರ್ಧಾರಗಳನ್ನು ಹೊರಡಿಸುವುದೂ ಉಂಟು, ಹಾಗೆಯೇ ನೀನೂ...............? ವೀರ-" ಮಹಾಪ್ರಭುಗಳ ಅಭಿಪ್ರಾಯವು ವಿಶದವಾಯಿತು. ಆ ನವಾಂಬುದದಂತೆಯೇ ನಾನೂ ಮೊದಮೊ'ತು ಉಪದ್ರವವನ್ನು ಹೇಗ ಲಾಡಿಸಿದರೂ ಕೊನೆಕೊನೆಗೆ ತಮಗೇನಾದರೂ ದ್ರೋಹವನ್ನು ಮಾಡ ಬಹುದೆಂದು ತಾವು ಭಾವಿಸಿರುವಂತೆ ಕಾಣುತ್ತಗೆ, ಆದರೆ ಈ ದಾಸನು ನವಾಂಬುದದಂತ ವಿವೇಕಶೂನ್ಯನೂ ನಿರ್ಷ್ಟುಣನೂ ಅಲ್ಲ. ಆದುದರಿಂದ ಸಂಶಯುಲೇಶವೂ ಇಲ್ಲದೆ ತಾವು ಆಶಯದಾನವನ್ನು ಮಾಡಬಹುದು.' ಕೃ, ದೇ. ರಾ.... ನಿನ್ನ ವಾಕ್ಯಗಳನ್ನು ಕೇಳಿ ಸಂತೋಷವಾಯಿತು. ನೀನು ನನ್ನ ಬಳಿಯಲ್ಲಿರಬಹುದು. ನಿನ್ನ ಹೆಸರೇನು? - ವೀರ..' ನನ್ನನ್ನು ವಿಜಯಸಿಂಗ್ ಗಜಪತಿ ಎಂದು ಕರೆಯುವರು. ೨ ಕೃ, ದೇ. ರಾ. ವಿಜಯಸಿಂಹ! ನಿನ್ನ ಪರಾಕ್ರಮತಿಶಯದಿಂದಲ ನೀನು ಆಗಲೇ ಮಾಡಿರುವ ಮಹೋಪಕಾರದಿಂದಲೂ ನಮ್ಮ ಅನುಗ್ರಹಕ್ಕೆ ಪಾತ್ರನಾಗಿರುವೆ, ನಮ್ಮ ಆನಂದಪ್ರದರ್ಶನಾರ್ಥವಾಗಿ ಈ ಉಂಗುರವನ್ನು ಪರಿಗ್ರಹಿಸು. ಇದೂ ಅಲ್ಲದೆ ನಮ್ಮ ಆತಿಥ್ಯವನ್ನು ಸ್ವೀಕರಿಸುವುದಕ್ಕೆ ನನ್ನ ನಿವಾಸಕ್ಕೆ ಬಾ' ಎಂದು ಹೇಳಿ ಆತನನ್ನು ತಮ್ಮ ರಥದಲ್ಲಿ ಕುಳ್ಳಿರಿಸಿ ಕೂಂಡು ರಾಜಭವನಾಭಿಮುಖವಾಗಿ ಹೊರಟರು. - ಹೀಗೆ ಹೋಗುತ್ತಿದ್ದಾಗ ವಿಜಯಸಿಂಹನು ತನಗೆ ಅಂತಹ ಮಹಾ ಗೌರವವು ಆದಿನ ಲಭವಾದುದರಿಂದ ಅಮಂದಾನಂದವನ್ನು ಹೊಂದಿ, ಮನಸ್ಸಿ ನಲ್ಲಿಯೇ ಮುಕುಂದನಿಗೆ ಅಭಿವಂದನಗಳನ್ನು ಸಮರ್ಪಿಸಿದನು. ಸತ್ರಿ ಹೊತ್ತಿನಲ್ಲಿಯೇ ರಾಜಧವು ಸಮೀಪಿಸಿತು ಅದನ್ನು ಉಭಯರೂ ಪ) * ಆಶಿಸಿದ ಬಳಿಕ, ಸುರಭೌಗುರು ವೀರನಿಗೆ ಉಚಿತವಾದ ನಿವಾಸಸ್ಥಳ ದನ್ನೂ ಆ ಇನ ಉಪಚಾರಕ್ಕಾಗಿ ಪರಿಜನಗಳನ್ನೂ ಯುಕ್ತವಾದ ರೀತಿಯಲ್ಲಿ ನಿಯಮಿಸಿ, ನಿಜ ಸಿಂಹನು ತನ್ನ ಅತಿಥಿಯಾಗಿ ಅರಮನೆಯಲ್ಲಿ ನಿಂತಿರು
ಪುಟ:ರಾಯಚೂರು ವಿಜಯ ಭಾಗ ೧ .djvu/೪೨
ಗೋಚರ