ಪುಟ:ರಾಯಚೂರು ವಿಜಯ ಭಾಗ ೧ .djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W3 ಕಾಯುವಿಜಯ ' ನವದಿಂದ ಮುಕಾಂಬೆಯ ಸಂದರ್ಶನಸುಖವನ್ನು ಅನುಭವಿಸಬಹುದೆಂದು ಅವನು ನೆನೆಸಿದನು, ಆದರೆ ತತ್‌ಕ್ಷಣವೇ ಸರಭೌಮರ ಮತ್ತು ಮಂತ್ರಿ ವರರ ಅನುಮತಿ ಇಲ್ಲದೆ ಹೊರಡುವುದು ಅನುಚಿತವೆಂಬ ಭಾವನೆಯು ತಲೆದೋರಲು, ಸುರಭೌಮರನ್ನೂ ಮಂತ್ರಿ ಶ್ರೇಷ್ಠರನ್ನೂ ಕಂಡು ಅವರ ಅನುಮತಿಯನ್ನು ಪಡೆಯುವುದು ಅತ್ಯಾವಶ್ಯಕವೆಂದು ನಿರ್ಧರಿಸಿ, ವಿಜಯ ಸಿಂಹನು ಮೊದಲು ಅರಮನೆಯಕಡೆಗೆ ಹೊರಟನು. ಆತನು ಬಂದಿರು ವುದನ್ನು ಅರಿತವರಾಗಿ ಮಹಾರಾಜರು ಆತನನ್ನು ಕರೆಯಿಸಿ ಉಚಿತಾಸನ ದಲ್ಲಿ ಕುಳ್ಳಿರುವಂತೆ ನಿಯಮಿಸಿ-“ ವಿಜಯಸಿಂಹ ! ನಿನಗೆ ಬಿಡಿಸಿಕೊಟ್ಟಿ ರುವ ಮನೆಯು ಅನುಕೂಲವಾಗಿರುವುದೆ ? ಆಹಾರಾದ್ಯುಪಚಾರಗಳಲ್ಲಿ ಲೋಪಗಳು ಯಾವುವೂ ತೋರಿಲಾಗಲಿಲ್ಲವಷ್ಟೆ ? ನಿನ್ನ ಪರಾಕ್ರಮಾತಿ ಶಯದಿಂದ ಉಳಿದುಕೊಂಡ ಮಂತ್ರಿಪುಂಗವರು ಕ್ರಮಕ್ರಮವಾಗಿ ಆರೋ ಗ್ಯ ಸ್ಥಿತಿಗೆ ಬರುತ್ತಿರುವರು. ನೀನು ಈಚೆಗೆ ಅವರನ್ನು ನೋಡಿದ್ದೆಯಾ? ೨ ಎಂದು ಕೇಳಿದರು. ವ.ಹಾಸ್ವಾಮಿ : ನಾನು ಪ್ರತಿದಿನವೂ ಅವರನ್ನು ನೋಡಿಕೊಂಡು ಬರುತ್ತಿರುವೆನು, ಮಂತ್ರಿಪುಂಗವರು ಆರೋಗ್ಯವನ್ನು ಪಡೆಯುತ್ತಿರು ವರು ” ಎಂದು ವಿಜಯಸಿಂಹನು ಹೇಳಿದನು. “ ವೀರವರೇಣ್ಯ ! ನಿನ್ನ ಪ್ರವರ್ತನವನ್ನ ನಿನ್ನ ಸುಸ್ವಭಾವವನ್ನೂ ನಿನ್ನ ಸುಗುಣಸಂಪದವನ್ನೂ ಕಂಡು, ನಾನೂ ಮಂತ್ರಿಯ ಬಹಳ ಸಂತೋಷಪಟ್ಟೆವು ಇನ್ನು ಮೇಲೆ ನಿನಗೆ ನಮ್ಮ ಬ೪ ಅಂಗರಕ್ಷ ದ್ರೋ ಗವನ್ನು ಕೊಡಬೇಕೆಂದು ನಿಶ್ಚಯಿಸಿರುವೆವು, ಹೊಸದಾಗಿಬಂದ ನಿನಗೆ ಆ ಉದ್ಯೋಗವನ್ನು ಕೊಡುವುದು ರಾಜನೀತಿಗೆ ವಿರುದ್ದವಾಗಿದ್ದರೂ, ಸಾಲೀ ಪುಲಾ ಕನ್ಯಾಯದಂತೆ ನಿನ್ನನ್ನು ಪರೀಕ್ಷಿಸಿರುವುದರಿಂದ, ನಿನಗೆ ಆ ಪದವಿ ಯನ್ನು ಕೊಡುವುದಕ್ಕೆ ಹಿಂದೆಗೆಯಲಿಲ್ಲ, ಇನ್ನು ಮೇಲೆ ಈ ಉದ್ಯೋಗ ದಲ್ಲಿದ್ದುಕೊಂಡು ಚಟುವಟಿಕೆಯಿಂದ ಪ್ರವರ್ತಿಸುತ್ತ ಗೌರವವನ್ನು ಸಂಪಾ ದಿಸಿಕೊ” ಎಂದು ಕೃಷ್ಣದೇವರಾಯರು ಹೇಳಿದರು. “ ಮಹಾಸ್ವಾಮಿ ! ಇಷ್ಟು ಸ್ವಲ್ಪ ಕಾಲದಲ್ಲೇ ತಮ್ಮ ಮಹಾನುಗ್ರ ಹವು ನನಗೆ ಲಭಿಸಿದುದಕ್ಕಾಗಿ ಪರವುಸಂತುಷ್ಟನಾಗಿರುವನು. ಜಿರಕಾಲ