ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪ್ರಕರಣ $ಸಿ ಸೇವೆಮಾಡಿ ನಂಬಿಕೆಯನ್ನು ಸಂಪಾದಿಸಿಕೊಂಡಿರುವವರಿಗೆಮಾತ್ರ ದೊರೆಯ ಬಹುದಾದ ಅಧಿಕಾರವನ್ನು ನನಗೆ ದಯಪಾಲಿಸಿ, ನನ್ನ ಚರಿತ್ರವನ್ನು ಗೌರವಪಾತ್ರವನ್ನಾಗಿ ಮಾಡಿದುದರಿಂದ, ಮಹಾಸ ಮಿಯವರಿಗೆ ಅತ್ಯಂತ ಕೃತಜ್ಞನಾಗಿರುವೆನು, ನನ್ನ ಶರೀರದಲ್ಲಿ ಪುಣವಿರುವವರೆಗೂ ತಮಗೆ ಯಾವವಿಧವಾದ ಅಪಾಯವಾಗಲಿ, ಲೇಶದಷ್ಟೂ ಬರಲಾರದೆಂದು ನಂಬ ಬಹುದು ” ಎಂದು ವಿಜಯಸಿಂಹನು ಅತ್ಯಂತ ವಿನಯದಿಂದ ಬಿನ್ನವಿಸಿದನು. “ ವಿಜಯಸಿಂಹ ! ನಿನ್ನ ಮಾತುಗಳನ್ನು ಕೇಳಿ ಸಂತೋಷವಾಯಿತು. ನೀನು ಏನನ್ನೋ ಕಳಕೊಳ್ಳಬೇಕೆಂದು ಇಲ್ಲಿಗೆ ಬಂದಿರುವೆ, ನಿನಗೇನು ಬೇಕಾಗಿದೆ ಎಂಬುದನ್ನು ತಿಳಿಸು " ಎಂದು ಪರೇಂಗಿತಜ್ಞರಾದ ಕೃಹ್ನದೇನ ರಾಯರು ಹೇಳಿದರು, “ ಮಹಾಸ್ವಾಮಿ ! ನಾನೆಂದು ವರವನ್ನು ಕೇಳಿಕೊಳ್ಳಬೇಕೆಂದು ಬಂದಿರುವೆನು, ಆನೆಗೊಂದಿಯಲ್ಲಿರುವ ಪ್ರಹರೇಶ ರಖತಾದಿಗಳು ನನಗೆ ಪರಿಚಿತರು. ಅವರನ್ನು ಒಂದುಸಾರಿ ನೋಡಿಕೊಂಡು ಬರಬೇಕೆಂಬ ಕುತೂಹಲವು ನನ್ನನ್ನು ಬಾಧಿಸುತ್ತಿರುವುದು, ಅದಕ್ಕೆ ತಮ್ಮ ಅನುಮತಿ ಯನ್ನು ದಯಪಾಲಿಸೋಣವಾಗಬೇಕು” ಎಂದು ಕೇಳಿಕೊಂಡನು. “ ವಿಜಯಸಿಂಹ 1 ಪ್ರಹರೇಶ್ವರಭತಾದಿಗಳನ್ನು ನೋಡಬೇಕೆ ? ಆದಿಗಳು ಎಂದರೆ ಯಾಎ: ? ಅಲ್ಲಿರುವ ಮುಕ್ಕಾಂಬೆಯೇ ಏನು ? ಆರ್ಕೆ. ಇನ್ನೂ ಪರಿಣಯವಾಗಿಲ್ಲ. ಆದುದರಿಂದ ಆಕೆಯನ್ನು ನೋಡಿದರೂ ನೋಡಿ ಕೊಂಡು ಬರಬಹುದು ಎಂದು ಮಂದಹಾಸದಿಂದ ಕೃಷ್ಣದೇವರಾಯರು ಹೇಳಿದರು.

  • ಸರಭೌಮರವರ ಅಭಿಖಿಯವು ಹಾಗಿರುವುದೆಂದರೆ ಆಕೆ ದನ್ನು ನೋಡಿಕೊಂಡು ಬರುವೆನು, ಪ್ರಹರೇಶರನು ನನಗೆ ಪರಿಚಿತನು ಮಾತ್ರವಲ್ಲದೆ ಬಂಧುವರ್ಗದಲ್ಲಿ ಸೇರಿದವನು, ಆತನನ್ನು ಒಂದುಸಾರಿ ನೋಡಿಕೊಂಡು ಬರಬೇಕೆಂಬುದು ನನ್ನ ಅಭಿಲಾಷೆ. ಅಪ್ಪಣೆಯಾದರೆ ಹೋಗಿಬರುವೆನು ” ಎಂದು ವಿಜಯಸಿಂಹನು ತನ್ನ ಅಂತರಂಗಾಭಿಲಾಷೆ

ಹುನ್ನು ಮರೆಯಿಸಿಕೊಂಡು ಬಿನ್ನವಿಸಿದನು. ಈ