ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܜܜ ಏಳನೆಯ ಪ್ರಕರಣ mmmmmmmmmmmmmmmmmmmmmmmwwwಯ ನಿಲ್ಲು ಅವಕಾಶವಿಲ್ಲ, ಕ್ಷಮಿಸಬೇಕು, ಮತ್ತೊಂದು ಸಾರಿ ಬಂದು ತಮ್ಮ ಮನೆಯಲ್ಲೇ ಇಳಿದುಕೊಳ್ಳುವೆನು, ತಾವು ಎಷ್ಟು ದಿನಗಳು ಇರಬೇಕೆಂದು ಹೇಳಿದರೂ ಅಷ್ಟು ದಿನ ಇರುವೆನು, ನನ್ನ ಈ ಪ್ರಾರ್ಥನೆಯನ್ನು ಲಾಲಿಸಿ ಅಪ್ಪಣೆಕೊಡಬೇಕು, ಸೂರನು ಅಸ್ತಮಿಸುತ್ತಲಿರುವನು. " ಪಹರೇ-“ ನೀನು ಮೊದಲಿನ ವಿಜಯಸಿಂಹನಲ್ಲ, ನಿನ್ನ ನಡತೆಯೇ ವ್ಯತ್ಯಸ್ತವಾದಂತಿದೆ. ಹಾಗಿಲ್ಲದಿದ್ದರೆ, ದೊಡ್ಡವನಾದ ನನ್ನ ಮಾತನ್ನು ಮೀರಲು ಯತ್ನಿಸುತ್ತಿದ್ದೆಯಾ ? ನಿನಗಿಂತಲೂ ವಯೋವೃದ್ಧನೂ ಹೆಚ್ಚು ಲೋಕಾನುಭವಶಾಲಿಯ ಆದ ನನ್ನಂತಹವನ ಮಾತನ್ನು ಕೇಳದಿರುವುದು ಯುಕ್ತವಲ್ಲ ; ಶೇರುಸ್ಕರವೂ ಅಲ್ಲ, ನಿನಗೆ ಅನೇಕ ಶತ್ರುಗಳಿರುವರೆಂದು ಕೇಳದೇನೆ. ನಿನಗೆ ದಾರಿಯಲ್ಲಿ ಏನಾದರೂ ಅಪಾಯವು ಸಂಭವಿಸೀತಲ್ಲಾ ಎಂದು ನನ್ನ ಮನಸ್ಸು ಬಾಧಿಸುತ್ತಿರುವುದರಿಂದ ಇಷ್ಟೊಂದು ಹೇಳಬೇಕಾ ಗಿದೆ. ನಿನ್ನನ್ನು ಕೊಲ್ಲಬೇಕೆಂದೇ ನಿನ್ನ ಶತ್ರುಗಳು ದೃಢಪ್ರಯತ್ನ ಮಾಡು ತಿರುವರಂತೆ. ನೀನು ಎಷ್ಟು ಬಲಾಡ್ಯನಾದರೂ ನಿನಗೆ ಹಾನಿ ಸಂಭವಿಸದೆ ಇರಲಾರದು. ಆದುದರಿಂದ ಈ ಹೊತ್ತು ನನ್ನ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸಿ ನಾಳೆ ಬೆಳಗ್ಗೆ ಏಳುತ್ತಲೇ ಹೊರಡು. ನೀನು ಶ್ರೀಕೃಷ್ಣ ದೇವ ರಾಯರ ಕೃಪಾಪಾತ್ರನಾಗಿರುವೆಯೆಂದು ಕೇಳಿ ನಿನ್ನ ಮೂಲಕ ನಮ್ಮ ಕಾಠ್ಯಗಳನ್ನು ನೆರವೇರಿಸಿಕೊಳ್ಳಬೇಕೆಂದು ಇದೇನೆ, ನನ್ನ ವೃತ್ತಾಂತ ವನ್ನೆಲ್ಲಾ ನಿನಗೆ ಸಾವಕಾಶವಾಗಿ ತಿಳಿಸಬೇಕಾಗಿದೆ. ಆದುದರಿಂದ ಈ ರಾತ್ರಿ ಪ್ರಯಾಣವನ್ನು ನಿಲ್ಲಿಸಿ, ನನ್ನ ಕೋರಿಕೆಗಳನ್ನು ಕೇಳಿ ನಿನ್ನ ಶಕನು ಸಾರವಾಗಿ ನಮಗೆ ಸಹಾಯವನ್ನು ಮಾಡು. ) | ವಿಜಯ- ದಯಾಶಾಲಿಗಳೇ ! ನಿನ್ನ ಕೃಪೆಸಿರಸವು ನನ್ನನ್ನು ಪೋಷಿಸುತ್ತಿರುವ ನನಗೆ ಅಪಾಯಗಳು ತಟ್ಟುವುದು ಹೇಗೆ ? ಶತ್ರುಗಳು ಮಾರ್ಗದಲ್ಲಿ ಆ ಈ ಹಾ ಕಿ ನನ್ನನ್ನು ಇದಿರಿಸುವರೆಂಬುದು ನನ್ನ ಮನಸ್ಸಿಗೆ ನಿಜವೆಂದು ತೋರುವುದಿಲ್ಲ, ದಾರಿಯಲ್ಲಿ ಇದಿರಿಸಬೇಕೆಂದಿರುವ ಶತ್ರುಗಳು ಇಲ್ಲಿ ತಾನೇ ಹಾಗೆಮಾಡಲಾರರೇ? ಒಂದುವೇಳೆ ದಾರಿಯಲ್ಲಿ ನನ್ನ ಮೇಲೆ ಕಾಣಿಸಿಕೊಂಡರೆ, ನನ್ನ ಈ ಕತ್ತಿಯು ಆ ಶತ್ರುಗಳನ್ನು ವಿಚಾರಿಸಿ ಕೊಳ್ಳುವುದು, ನಾನು ಮತ್ತೊಂದುಸಾರಿ ತನ್ನಲ್ಲಿಗೆ ಬಂದು ತನ್ನ S (h|