ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬A ಒ ಬ ಕಾಯುವಿಜಯ ಯನ್ನು ನಾನು ಹಂಚಿಕೇಳಬೇಕಾಗಿದೆ, ಆದುದರಿಂದ ಸರಿಯಾದ ಸ್ಥಳ ವನ್ನು ತೋರಿಸು, ” . ಮುಕಾಂಬೆ:-* ಅಗೋ ! ಆ ಚಿಕ್ಕಮನೆಗೆ ಯಾರೂ ಬರುವು ದಿಲ್ಲ, ಅಲ್ಲಿ ಸದ್ದು ಮಾಡದೆ ಕುಳಿತುಕೊಂಡಿದ್ದರೆ, ಆ ಕಿರುಮನೆಯ ಮಗ್ಗುಲಲ್ಲಿರುವ ಜಗಲಿಯಮೇಲೆ ಅವರಿಬ್ಬರೂ ಮಲಗಿಕೊಂಡು ಮಾತ ನಾಡಿಕೊಳ್ಳುವರು ನೀನು ಅವರ ಸಂಭಾಷಣೆಯನ್ನು ಸುಲಭವಾಗಿ ಕೇಳಬಹುದು, ೨೨ ಹೀಗೆ ಹೇಳಿ ಮುಕ್ಕಾಂಬೆಯು ಆ ಸ್ಥಳವನ್ನು ಬಿಟ್ಟು ಹೊರಟು ಹೋದಳು. ಇದಾದ ಸ್ವಲ್ಪ ಹೊತ್ತಿನಲ್ಲೇ ಪ್ರಹರೇಕ್ಷರನೂ ವಿಜಯಂ ಹನೂ ಊಟಮಾಡಿ ಎಲೆ ಅಡಕೆ ಹಾಕಿಕೊಳ್ಳುತ್ತಾ, ತಮ್ಮ ತಮ್ಮ ಹಾಸಿ ಗೆಯಮೇಲೆ ಕುಳಿತುಕೊಂಡಿದ್ದರು, ಆ ಸಮಯಕ್ಕೆ ಸರಿಯಾಗಿ, ಸುಮಾರು ಮೂವತ್ತು ವರುಷ ವಯಸ್ಸುಳ್ಳ ಪುರುಷನೊಬ್ಬನು ಅಲ್ಲಿಗೆ ಬಂದು ಕುಳಿ ತುಕೊಂಡು, ವಿಜಯಸಿಂಹನೊಡನೆ ಈ ಮುಂದೆ ಹೇಳುವಂತೆ ಸಂಭಾಷಿಸ ಡಗಿದನು:- ಆಗಂತುಕ:- ** ವಿಜಯಸಿಂಹ ! ನಿನ್ನನ್ನು ನೋಡಿದರೆ ಪರಾಕ್ರಮ ಸಿಂಹನಂತೆ ಕಾಣಿಸುತ್ತಿರುವೆ, ವೈರಿಗಜಗಳಮೇಲೆ ಹಾರಿ ಕುಂಭಸ್ಥಳ ವನ್ನು ಸೀಳದೆ ಹೀಗೇಕೆ ಸುಮ್ಮನಿರುವೆ ?” ವಿಜಯ:-( ವೈರಿಗಳು ಮತ್ತಗಜಗಳಂತಹವರಾಗಿದ್ದರೆ ನೀನು ಹೇಳುವಂತೆಯೇ ಮಾಡಬಹುದು, ಅವರೂ ಬಲಿಷ್ಠ ನಿಂಹಪರಾಕ್ರನು ಕಾಲಿಗಳೇ ಆಗಿದ್ದರೆ, ಸ್ನೇಹವನ್ನು ಅವಲಂಬಿಸುವುದೇ ಯುಕ್ತವು, “ ಆಗಂತುಕ:-CK ಒಳ್ಳೆಯ ಮಾತುಹೇಳಿದೆ. ಬಲಿಷ್ಠರಾದ ವೈರಿಗ ಳನ್ನು ನಿಲನಾಡಬೇಕಾದರೆ ಕಸಟಸ್ಸೇಹದಂತಹ ಸಾಧನವು ಮು ತೊಂದಿಲ್ಲ. ಪರತವನ್ನು ಸಣ್ಣಗಿರುವ ನೀರಿನ ಪ್ರವಾಹವು ಕೊರೆದು ಹಾಕುವಂತೆ ಬೆಂಕಿಯು ಭೇದಿಸಬಲ್ಲುದೇ ? ಹಾಗೆಯೇ ಪ್ರಬಲ ಶತು | ಗಳನ್ನು ಸ್ನೇಹವು ನಿನ್ನೊಲಿಸುವಂತೆ ವಿಕ್ರಮವು ಮಾಡಲಾರದು, ?? ವಿಜಯ:- ಈ ನಿನ್ನ ವಿಪರೀತಪ್ರಸಂಗದಿಂದ ನನಗೆ ಏನೂ ಅರ್ಥ ವಾಗಲಿಲ್ಲ ಡಕ್ರವರ್ತಿಗಳನ್ನು ಕೊಲ್ಲಬೇಕೆಂದು ಅವರ ಬಳಿಯ ಸೇರಿಕೊಂಡಿರುವೆನೆಂದು ತಿಳಿದಿರುತ್ತೀಯಾ? ೨೨