ಪುಟ:ರಾಯಚೂರು ವಿಜಯ ಭಾಗ ೧ .djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಏಳನೆಯ ಪ್ರಕರಣ marwwswavಆಸಿಸಿಯೂwnwwwmwwwsws “ ಯಾರು, ಅವರು ? ” ಎಂದು ಕೇಳಲು ಅದಕ್ಕೆ “ ನಾನು, ಮುಕ್ಕಾಂಬೆ ನೀವು ಯಾರು? "ಎಂದು ಉತ್ತರಕೊಟ್ಟಳು. ಆ ವ್ಯಕ್ತಿಯು “ ತಾಯಿ ! ನಾನು ಹೊರಟ ಹೊತ್ತು ಬಹಳ ಒಳ್ಳೆಯದು, ಆದುದರಿಂದಲೇ ನೀನು ಸುಲಭವಾಗಿ ನನಗೆ ಕಾಣಬಂದೆ ” ಎಂದು ಹೇಳಲು, ಮುಕ್ಕಾಂಬೆಯ ಓಹೊ ! ನಿನೋ ? ರಾಮರಾಜ! ಈ ಕತ್ತಲೆಯಲ್ಲಿ ಏಕಪ್ಪಾ ಬಂದೆ?” ಎಂದಳು. ರಾಮರಾಜ:-“ಕಾರಣವನ್ನು ಆಮೇಲೆ ಹೇಳುವೆನು. ವಿಜಯ ಸಿಂಹನು ಇಲ್ಲಿಯೇ ಇರುವನೆ ? ಸುಖವಾಗಿರುವನೆ ? ವಿಶೇಷಗಳೇನೂ ಇಲ್ಲವಷ್ಟೆ ?' - ಮುಕ್ತಾಂಬೆ:- ವಿಶೇಷಗಳಿಲ್ಲದೆಯೇನು ? ಈದಿನ ನಿನ್ನಿಂದ ನನಗೆ ಒಂದು ದೊಡ್ಡ ಉಪಕಾರವಾಗಬೇಕಾಗಿರುವುದು, ಅದನ್ನು ಮಾಡಿಕೊ ಡುವೆನೆಂದು ಮಾತುಕೊಡು, 2) ರಾಮರಾಜ:-'ನಿನ್ನಿಂದ ನಾನು ಪಡೆದಿರುವ ಉಪಕಾರದಲ್ಲಿ ಸಾವಿ ರದಲ್ಲಿ ಒಂದು ಪಾಲನ್ನಾದರೂ ನಾನು ತೀರಿಸಲಾರೆನು, ನಿನ್ನ ವಾಕ್ಕಾ. ತುಲ್ಯದಿಂದಲೇ ನನ್ನಲ್ಲಿ ರಾಜಪುತ್ರಿಗೆ ಅನುರಾಗವು ಹುಟ್ಟುವಂತೆ ಮಾಡಿದೆ. ರಾಜದ್ರೋಹವೊಂದನ್ನು ಬಿಟ್ಟು, ಎಂತಹ ಸೇವೆಯನ್ನಾದರೂ ಮಹೋಪ ಕಾರಿಣಿಯಾದ ನಿನಗೆ ಮಾಡಲು ಸಿದ್ದನಾಗಿರುವೆನು. ಮುಕ್ಕಾಂಬ:-“ಸಾರ್ಥಕವಾದ ಮಾತನ್ನಾಡಿದೆ ! ರಾಜದ್ರೋ ಹವೆ !! ಅಂತಹ ಮಾತನ್ನೇ ನನ್ನ ಇದಿರಿಗೆ ಎತ್ತಬೇಡ, ಈ ರಾತ್ರಿ ವಿಜಯ ಸಿಂಹರಿಗೆ ಅಪಾಯವು ಒದಗುವುದು, ಅದರಿಂದ ಅವರನ್ನು ತಪ್ಪಿಸ ಬೇಕು, ಒಂದುವೇಳೆ ಕೆಲವರ ಸಹವಾಸದಿಂದ ಪ್ರಹರೇಕ ರನು ರಾಜ ರೋಹಿಗಳಡನೆ ಸೇರಿರುವನೆಂದು ಕಂಡುಬಂದರೂ, ಈ ವಿಷಯವನ್ನು ಯಾರೊಡನೆಯಾಗಲಿ ತಿಳಿಸದಿರಬೇಕು, ಈ ಎರಡು ಉಪಕಾರಗಳನ್ನೂ ಮಾಡಿ ನನಗೆ ಸಹಾಯಮಾಡು. ?? ರಾಮರಾಜ:-* ಸೋದರೀ ! ನಿನ್ನ ಈ ಎರಡು ಕೋರಿಕೆಗಳನ್ನೂ ತಪ್ಪದೆ ನಡೆಯಿಸಿಕೊಚುವೆನು, ಈದಿನ ನೀನೂ ನನಗೆ ಮತ್ತೊಂದು ಉಪಕಾರಮಾಡಬೇಕಾಗಿದೆ. , ಪಹರೇಕ್ಷರವಿಜಯಸಿಂಹರ ಸಂಭಾಷಣೆ