ಪುಟ:ರಾಯಚೂರು ವಿಜಯ ಭಾಗ ೧ .djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ ಹೊತ್ತುಕೊಂಡು ಹೋಗಿರುವರೆಂದು ಜನರು ನಂಬಶರು, ಯಾರಿಗು ಏನೂ ಅಪಾಯವಿರುವುದಿಲ್ಲ. " ರಾನಯನ ಈ ಸೂಚನೆಗೆ ತಕ್ಕ ಪ್ರತಿಬಂಧಕವನ್ನು ತಂದು ಒಕ್ಕ ಲು ಮುಕ್ಕಾಂಬೆಗೆ ತೋರಲಿಲ್ಲ, ಇಂತಹ ಸಂದರ್ಭದಲ್ಲಿ ಮಾತನಾಡಿದರೆ ತನ್ನಮೇಲೆಯೆ ಸಂಶಯಬರುವುದೆಂದು ಸುಮ್ಮನಾದಳು, ಆದುದರಿಂದ ರಾಮುಯನು ಸೂಚಿಸಿದ್ದಂತೆಯೇ ನಿರ್ಣಯವಾಯಿತು. ಬಳಿಕ ರಾಮಯಾದಿಗಳು ಆ ಸ್ಥಳವನ್ನು ಬಿಟ್ಟು ಅಗಲಿದರು, ಪ್ರಹ ರೇಶ್ವರನೂ ತನ್ನ ಕಯನಸ್ಥಳಕ್ಕೆ ಬಂದುಸೇರಿದನು. - ಪ್ರಹರೆಶರನು ತನ್ನ ಬಳಿಗೆ ಬಂದುದನ್ನು ಕಂಡು ವಿಜಯಸಿಂಹನು ಅವನನ್ನು ಕುರಿತು ನೀವು ಹೋಗಿದ್ದ ಕೆಲಸವೇನಾಯಿತು? ” ಎಂದು ಕೇಳಿ ದನು. - ಪಹರೇ-“ ವಿಜಯಸಿಂಹ! ನಾನು ಆಸ್ಥಳಕ್ಕೆ ಹೋಗಿನೋಡಿದನು. ಅವರಲ್ಲಿ ಒಬ್ಬರಾದರೂ ಬರಲಿಲ್ಲ. ಆದುದರಿಂದ ಅವರ ಮನೆಗೇ ಹೋಗಿ ವಿಚಾರಿಸಲು, ಅವರೆಲ್ಲರೂ ಗ್ರಾಮಾಂತರಗಳಿಗೆ ಹೋಗಿರುವರೆಂದೂ ಇನ್ನು ಎರಡುಮೂರು ದಿನಗಳಿಗೆ ಹಿಂದಿರುಗಿ ಬರುವರೆಂದೂ ತಿಳಿಯಿತು. ನೀನು ಮತ್ತೊಂದಬಾರಿ ಸಾವಕಾಶವಾಗಿ ಇಲ್ಲಿಗೆ ಬಂದರೆ, ರಾಜದ್ರೋಹಿಗಳು ರನ್ನೂ ಸುಲಭವಾಗಿ ಹಿಡಿದುಬಿಡಬಹುದು. ಈಗ ಮಾತನಾಡಿ ಪ್ರಯೋಜನ ವೇನು ? ಅವರೆಲ್ಲರನ್ನೂ ಬಲೆಗೆಬೀಳಿಸುವ ಭಾರವು ನನ್ನದಾಗಿರಲಿ, ಈಗ ಗಲೇ ಬಹಳ ಹೊತ್ತಾಯಿತು. ಶಾಪ 1 ನೀನು ದಾರಿನಡೆದು ದಣಿದಿದೀಯೆ! ಸುಖವಾಗಿ ನಿದ್ದೆ ಮಾಡು, ನಾನೂ ಇಲ್ಲಿಯೇ ಮಲಗಿಕೊಳ್ಳುವನು, ೨೨ ಪಹರೇಶ್ವರನ ಈ ಉಪಚಾರದ ಮಾತುಗಳಿಂದ ಸರಳಹೃದಯ ನಾದ ವಿಜಯಸಿಂಹನು ಅತ್ಯಾನಂದಭರಿತನಾದನು ; ಆದರೆ ಮುಕ್ಕಾಂಬೆಯ ಡನೆ ಮಾತನಾಡುವುದಕ್ಕೆ ಅನುವು ದೊರೆಯಲಿಲ್ಲವಲ್ಲಾ ! ಎಂದು ವ್ಯಥೆಪ ರುತ್ತಿದ್ದನು, ಹಾಗೆಯೇ ಯೋಚಿಸುತ್ತಾ ಮುಕ್ಕಾಂಬೆಯ ವಿಷಯವಾಗಿ ಸಂಕಲ್ಪ ಪರಂಪರೆಗಳಿಂದ ಆಕಾಕಹತ್ತ್ವವನ್ನು ಕಟ್ಟಿ ಅದರಲ್ಲಿ ಸುಖಾನುಭವ ವನ್ನು ಪಟ್ಟು ಕೊಳ್ಳುತ್ತಾ ಹಾಗೆಯೇ ನಿದ್ರಾವಶನಾದನು.