ಪುಟ:ರಾಯಚೂರು ವಿಜಯ ಭಾಗ ೧ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ ಕೈಗೆ ಸಿಕ್ಕಿದ ಹಗೆಗಳನ್ನು ಬಿಟ್ಟುಬಿಡಲಾರವು, ಎಲ್ಲಿ ? ತಮ್ಮ ಮಂತ್ರಿ ಗಳವರನ್ನು ಕರೆಯಿಸಿ ; ಅವರು ಇಲ್ಲಿಗೆ ದಯಮಾಡಿ ತನ್ನನ್ನು ಬಿಡಿಸಿ ಕಂದುಬಿಡುವರು " ವಿಜಯ- “ ಹೇಡಿಗಳಾದ ದುರಾತ್ಮರುಗಳಿರಾ ! ನಿಮ್ಮಂತಹ ಪುಕ್ಕಲ ರಾದ ದುಷ್ಟರಿಂದ ಬಿಡಿಸಿಕೊಳ್ಳುವುದಕ್ಕೆ ಮಂತ್ರಿಗಳು ಬರಬೇಕ ? ನಿಮ್ಮ ವಿಚಾರಣೆಯನ್ನು ತೆಗೆದುಕೊಳ್ಳುವುದಕ್ಕೆ ನಾನೊಬ್ಬನೇ ಸಾಕು, ನಿಮ್ಮಲ್ಲಿ ಕೂರತನವು ಎಳ್ಳಷ್ಟಾದರೂ ಇದ್ದರೆ, ಎಲ್ಲಿ ? ನೋಡೋಂ! ನನಗೆಂದು ಕತ್ತಿಯನ್ನು ಕೊಟ್ಟು ನಿಲ್ಲಿ. ನಿದ್ದೆಯಲ್ಲಿದ್ದವರ ಮೇಲೆ ಹೇಡಿಗಳಂತ ಬಿದ್ದು ಕೈಕಾಲುಗಳನ್ನು ಕಟ್ಟಿ ವೀರಲಾಪಗಳನ್ನಾಡುತ್ತಿರುವ ನಿಮಗೆ ನಾಚಿಕ ಎಂಬುದೇ ತಿಳಿದಿಲ್ಲವಲ್ಲಾ ! ನಿಮ್ಮ ಬಾಳನ್ನು ಸುಡಬೇಕು ! ) ರುದ್ರ-“ ನಿನ್ನ ಪ್ರಗಲ್ಪವಚನಗಳಲ್ಲವನ್ನೂ ಒಂದು ಗಂಟುಕಟ್ಟಿ ದೂರವಾಗಿ ಎಸೆದುಬಿಡು, ನಿನ್ನ ನೌರುಷವಾಕ್ಕುಗಳಿಂದ ಕದ್ದರಾಗಿ ನಿನ್ನೆ ಕೈಗೆ ಕತ್ತಿಯನ್ನು ಕೊಟ್ಟುಬಿಡುವೆವೆಂದು ನೀನು ನಂಬಿರಬಹುದು, ನಾವು ವೀರಧರ್ಮವನ್ನು ಕಟ್ಟಿಕೊಂಡು ಅಳಬೇಕಂದಿಲ್ಲ, ನಿನ್ನ ಮೇಲೆ ಮುಖ್ಯ ತೀರಿಸಿಕೊಳ್ಳುವುದೊಂದೇ ನಮಗಪರಮೋದ್ದೇಶವಾಗಿದೆ ; ಆದುದರಿಂದ ಆಂತಹ ಭ್ರಮೆಗಳಿಗೆ ಅವಕಾಶಕೊಡಬೇಡ, ೨) ವಿಜಯ-“ ನಾನು ಸಾವಿಗೆ ಹೆದರುವೆನೆಂದು ತಿಳಿದಿರುವಿರೇನು ? ಸಾವಿನ ಭಯವು ನಿನ್ನಂತಹ ಹೇಡಿಗಳಿಗೆ ಇರುವುದೇ ಹೊರತು ಇತರರಿಗೆ ಇರುವುದಿಲ್ಲ. ಒಂದುವೇಳೆ ಭಯಪಟ್ಟ ಮಾತದಿಂದ ಸಾವು ತಪ್ಪಿಹೋಗು ವುದೇ ? ಈದಿನ ನಾನು ಸಾಯಬಹುದು ; ನಾಳೆ ನಿಮ್ಮ ಸರದಿಯು ಬಂದೇ ಬರುವುದು, ಎಂದಾದರೂ ಸಾಯಲೇಬೇಕಾಗಿರುವಾಗ ಒಂದು ದಿನ ಮುಂದಾಗಿ ಸಾಯುವುದಕ್ಕೆ ಹೆದರಿಕೆ ಏಕ ? ೨) ರಾಮಯ-“ ನಿನ್ನ ವೇದಾಂತಗಳಿಗೆ ನಮ್ಮ ಮನಸ್ಸು ನಿಲುಕಲಾ ರದು ; ನಿನ್ನ ಬಲವನ್ನು ಈ ಕಟ್ಟುಗಳು ಕಟ್ಟಿಹಾಕಿವೆ; ನಿನ್ನ ಹರಟೆಗಳ ನ್ನು ಈ ಬಟ್ಟೆಯು ತಡೆದುಬಿಡುವುದು ?” ಎಂದು ತನ್ನ ಬಂಟರ ಕಡೆಗೆ ನೋಡಲು ಅವರು ವಿಜಯಸಿಂಹನ ಬಾಯಿಗೆ ಆ ಬಟ್ಟೆಯನ್ನು ಗಿಡಿದು ಬಿಟ್ಟರು.