ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರುವಿаರು Un Marway ಬನ್ನಿ” ಎಂದು ಪಿಸುಗುಟ್ಟುತ್ತಾ ಅವರನ್ನು ಒಳಕ್ಕೆ ಕರೆದುಕೊಂಡು ಹೋದರು. ಬಳಿಕ ರಾನಯನ ಅಪ್ಪಣೆಗೆ ಅನುಸಾರವಾಗಿ ರುದ್ರದೇವಾದಿ ಗಳು ನಿಮಿಪಮಾತ್ರದಲ್ಲಿ ಪಹರೇಶ್ವರನನ್ನು ಹೆಡಮುರಿಗಟ್ಟಿ ಕೆಡವಿದರು, ಆದರೂ ಎಳ್ಳು ಬಿದ್ದಷ್ಟು ಕಬ್ದವೂ ಆಗಲಿಲ್ಲ. ಇದಾದಮೇಲೆ ವಿಜಯಸಿಂಹನ ಸರದಿಯು ಬಂದಿತು. ರುದ್ರದೇವಾದಿಗಳು ವಿಜಯನಿಂಹನಮೇಲೆ ಕೈಹಾಕಿದ ಕೂಡಲೆ ಅವನಿಗೆ ಎಚ್ಚರವಾಗಿ ಅವರಿಂದ ಬಿಡಿಸಿಕೊಳ್ಳಬೇಕೆಂದು ತನ್ನ ಕೈಯಲ್ಲಾದಮಟ್ಟಿಗೂ ಪ್ರಯತ್ನಿಸಿದನು. ಆದರೆ ದಾಂಡಿಗರಾದ ನಾರು ಕಟ್ಟಾಳುಗಳ ಮೇಲೆ ಒಬ್ಬನ ಸಾಹಸವು ಕಂದುವುದುಂಟೆ? ಅಂತಹ ವಿಷಮ ಸಮಯದಲ್ಲಿ ಪ್ರಹರೇಶ್ವರನಾದರೂ ಸಹಾಯಮಾಡುವನೆಂದು ಅವನು ಮಲಗಿದ್ದ ಕಡೆ ತಿರುಗಿನೋಡಲು, ಆಗಲೇ ಅವನಿಗೆ ಹೆಡಮೆ.ರಿಸೇವೆಯಾಗಿ ದ್ವಿತು. ರಾಜಗೋಲಹಿಗಳು ತಮ್ಮ ಕೆಲಸವನ್ನು ಒಂದುಕ್ಷಣಕಾಲದಲ್ಲಿ ಮುಗಿಸಿಬಿಟ್ಟು, ವಿಜಯಸಿಂಹನನ್ನೂ ಕಟ್ಟಿ ಉರುಳಿಸಿಬಿಟ್ಟರು. ಆಗ ಅವನು ಅವರನ್ನು ನೋಡಿ ('ನೀವು ಯಾರು?ನನ್ನನ್ನೇಕೆ ಕಟ್ಟಿಹಾಕಿರುವಿರಿ? ನನ್ನಿಂದ ನಿಮಗೆ ಆದ ಅಪರಾಧವೇನು? ಪಹರೇಶ್ವರನು ಮಾಡಿರುವ ತಪ್ಪೇ ನು? ಎಂದು ಕೇಳಿದನು..

  • “ನಾವು ನಿಮ್ಮ ಪಾಲಿನ ಯಮದೂತರು, ಯುವರಾಜನಿಗೆ ಬಲ ಕಾಲಿಯಾದ ಒಬ್ಬ ದೂತನು ಈಗಲೇ ಬೇಕಾಗಿರುವನು, ನಿನ್ನನ್ನು ಆತನ ಲೈಗೆ ಕಳುಹಿಸಿಕೊಡುತ್ತೇವೆ, ನೀನು ನನಗೆ ಮಹಾಪರಾಧವನ್ನು ಮಾಡಿ ರುತ್ತೀಯ, ಮಂತ್ರಿಯನ್ನು ಕೊಲ್ಲಲು ಯತ್ನಿಸಿದಾಗ ಅಡ್ಡಬಂದು ನಮ್ಮ ಕೆಲಸವನ್ನು ಕೆಡಿಸಿದೆ; ನಮ್ಮನ್ನು ಕೊಲ್ಲುವುದಕ್ಕೂ ಯತ್ನಿಸಿದ್ದೆ. ಅದರ ಫಲವನ್ನು ಈಗ ಉಣ್ಣುವೆ ! ನಿನ್ನಂತಹ ದುರಾತ್ಮನಿಗೆ ಆಶ್ರಯ ವನ್ನು ಕೊಟ್ಟ ಈ ಮುದುಕನಿಗು ನಿನಗಾಗುವ ಶಿಕ್ಷೆಯೇ ತಕ್ಕುದಾಗಿರುವುದು."

- ವಿಜಯ-“ ನನ್ನನ್ನು ಹಿಡಿಕೊಂಡು ಹೋಗಿ ನಿಮಗೆ ಬೇಕಾದುದ ನ್ನು ಮಾಡಿಕೊಳ್ಳಿ, ನನ್ನಮೇಲಣ ಮುಯ್ಕೆಗಾಗಿ ಪ್ರಹರೇಕ್ಷರನನ್ನು ಹಿಂಸಿಸಬೇಡಿ, ಆತನು ನಿರಪರಾಧಿ ; ಆತನನ್ನು ಮಾತ್ರಬಿಡಿ, ” ರುದ-“ ನಿನ್ನ ಮಾತು ನನ್ನ ಕಿವಿಗೆ ಬೀಳುವುದಿಲ್ಲ; ನನ್ನ