ಪುಟ:ರಾಯಚೂರು ವಿಜಯ ಭಾಗ ೧ .djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಎಂಟನೆಯ ಪ್ರಕರಣ ದರಿಂದ ಯುದ್ಧ ಪ್ರಸಕ್ತಿಯಿಲ್ಲದೆಯೇ ಅವರನ್ನು ಬಿಡಿಸುವುದು ಮೇಲು. ನಿನ್ನೊಡನೆ ಆದ್ದರು ಯಾರಾದರೂ ಬಂದಿರುವರೋ ? ೨ ರಾಮರಾಜ- ತಂಗೀ ! ನನ್ನೊಡನೆ ನಾಲ್ವರು ಸೇವಕರು ಬಂದಿ ರುವರು, ಅವರನ್ನು ಈ ಊರಲ್ಲಿ ಒಂದು ಕಡೆ ನಿಲ್ಲಿಸಿ ಬಂದಿರುವೆನು. ಆದ ರೂ ಅವರು ಅಷ್ಟೇನು ೭ ಲಶಾಲಿಗಳಲ್ಲ. "

  • ಸಹೋದರ ! ಸಮೋಪಾಯದಿಂದಲೇ ಕೆಲಸವನ್ನು ಮಾಡಿಕೊ ಳ್ಳಬಹುದಾಗಿರುವಾಗ ಬಲಶಾಲಿಗಳಿಂದ ಆಗಬೇಕಾಗಿರುವುದೇನು ? ಸ್ವಲ್ಪ ಧೈಲ್ಯವನ್ನು ಅವಲಂಬಿಸಿದ್ದರೆ ಸಾಕು, ನೀನು ಅವರನ್ನು ಕರೆದುಕೊಂಡು ಹೋಗಿ ಶೈವಮಠಕ್ಕೆ ಹೋಗುವ ದಾರಿಯಲ್ಲಿ ಹೊಂಚುಹಾಕಿಕೊಂಡು ಕುದಿದ್ದರೆ, ನಾನು ಆ ಮಾರ್ಗವಾಗಿ ಸ್ವಲ್ಪ ಹೊತ್ತಿನಲ್ಲಿಯೇ ಬರುವೆನು. ಮುಂದೆ ಮಾಡಬೇಕಾದ ಉಪಾಯಗಳನ್ನು ತಿಳಿಸುವೆನು. ” ಎಂದು ಹೇಳಿ ಮುಕ್ತಾಂಬೆಯು ಅವನನ್ನು ಕಳುಹಿಸಿ ತನ್ನ ಕೊಟಡಿಯಲ್ಲಿ ಕಣ್ಣು ಬಿಟ್ಟು ಕೊಂಡು ಮಲಗಿದ್ದಳು.

ಸುಮಾರು ರಾತ್ರಿ ಎರಡು ಜಾವವಾಯಿತು, ಪುರನಿವಾಸಿಗಳ ದುರ್ಗರಕ್ಷಕನಟರೂ ನಿದ್ರಾಸಕ್ತರಾದರು. ಪುರವೆಲ್ಲವೂ ನಿಶ್ಯಬ್ದ ಮಯ ವಾಗಿದ್ದಿತು. ಪಹರೇಕ್ಷರನ ಮಂದಿರದಲ್ಲಿಯ ನಾಲ್ವರುವಿನಾ ಉಳಿದವರೆಲ್ಲರೂ ಗಾಢನಿದ್ರೆಯಿಂದ ಮೈಮರೆತಿದ್ದರು. ಈ ನಾಲ್ಪ ರಲ್ಲಿ ಮುಕ್ತಾಂಬೆಯೊಬ್ಬಳು ಮುಂದಣ ಫುಟನಾವಳಿಯನ್ನು ಪ್ರತೀ ಕ್ಷಿಸುತ್ತ ನಿಶ್ಯಬ್ದವಾಗಿ ಮಲಗಿದ್ದಳು. ಪಹರೇಶ್ವರನು ತನ್ನ ಸಂಗಡಿಗರು ಯಾವಾರ ಬಂದಾರೋ ಎಂದು ತದೇಕ ಧ್ಯಾನದಲ್ಲಿದ್ದರೂ, ನಿದ್ದೆಯಿಂದ , ಮೈಮರೆತು ಗೊರಕೆಹೊಡೆಯುತ್ತಿರುವಂತೆ ನಟಿಸುತಿದ್ದನು, ಉಳಿದವರು ಪ್ರಹರೇಶನ ಭಟರು, ಇವರು ಆತನ ಲಂಚದ ರುಚಿಯನ್ನು ಕಂಡಿದ್ದವರಾ ದುದರಿಂದ, ಕದ್ದು ಚಾಲುಕುಡಿದು ಬಂದಿರಃ ಬೆಕ್ಕಿನಂತೆ ಮೌನವಾಗಿ ಮಲಗಿಕೊಂಡಿದ್ದರು. ಅಷ್ಟರಲ್ಲಿ ಕೆಲವರು, ಪ್ರಹರೇಶ್ವರನ ಮನೆಯನ್ನು ಸದ್ದಿಲ್ಲದಂತೆ ಹೊಕ್ಕರು: ಎಚ್ಚರವಾಗಿದ್ದ ಪ್ರಹರೇಶ್ವರನ ಭಟರು ಅವ ರನ್ನು ಕಂಡಕೂಡಲೆ ಅವರಬಳಿಗೆ ಹೋಗಿ “ ಇದು ಹೊತ್ತು ಏಕೆ ? ಬನ್ನಿ!