. ಎಂಟನೆಯ ಪ್ರಕರಣ MMwwwy ಅತ್ಯಂತ ಕಠಿನಹೃದಯನಾದ ರುದ್ರದೇವನು ಮಿಕ್ಕವರನ್ನು ಕುರಿತು ಈ ದುರಾತ್ಮನನ್ನು ಬಂದೇ ಏಟಿಗೆ ಕಲ್ಲಬಾರದು ; ಗಳಿಗೆಗೆ ಒಂದೊಂದರಂತ ಇವನ ಅವಯವಗಳನ್ನು ಕಡಿದುಹಾಕm " ಎಂದು ಹೇಳಿದನು. ರುದ್ರದೇ ವನ ಬಾಯಿಂದ ಈ ಮಾತುಗಳು ಹೊರಡುವಷ್ಟರಲ್ಲೇ-“ ಆಯ್ಯಯ್ಯೋ! ಸತ್ತೆ ! ಈ ಕಳ್ಳರು ನನ್ನನ್ನು ಕೊಲ್ಲುತ್ತಿರುವರಲ್ಲಾ ! ರಾಮಯ ! ನೀವು ನನ್ನನ್ನು ಹೀಗೆ ಕೈಬಿಡಬಹುದೇ ? ರುದ್ರದೇವ ! ನೀನು ನನ್ನನ್ನು ಪ್ರೀತಿ ಸುವುದು ಹೀಗೆ? ? ಅಯ್ಯೋ! ನನಗೆ ಈ ಗತಿ ! ” ಎಂಬ ಆರ್ತ ಧ್ವನಿಯು ಕರ್ಣ ಕಠೋರವಾಗಿ ಅನತಿದೂರದಲ್ಲಿ ಕೇಳಬಂದಿತು. ಈ ಧ್ವನಿ ಯು .ಯಾರದೆಂಬುದು, ಅಲ್ಲಿದ್ದವರೆಲ್ಲರಿಗೂ ತತ್‌ಕ್ಷಣವೇ ಗೊತ್ತಾಗಿ ಹೋದುದರಿಂದ, ರಾಮಯ ರುದ್ರದೇವಾದಿಗಳು ಭಯಭ್ರಾಂತರಾಗಿ, ಶಬ್ದವು ಕೇಳಿಬಂದ ಕಡೆಗೆ ಹೊರಟರು. ವಿಜಯಸಿಂಹನ ಕಾವಲಿಗೆ ಇಬ್ಬರು ಆಳು ಗಳು ಮಾತ್ರ ಅಲ್ಲಿಯೇ ನಿಂತಿದ್ದರು, ಉಳಿದವರು ಆ ಗಾಢಾಂಧಕಾರ ವಯ ಎಂದ ರಾತ್ರಿಯಲ್ಲಿ ಮುಕ್ತಾಂಬೆಯಿದ್ದ ಸ್ಥಳಕ್ಕೆ ಹೋಗಿ ಸೇರಲು ಸ್ವಲ್ಪ ಸಾವಕಾಶವಾಯಿತು, ಮುಕಾಂಬೆಯನ್ನು ಬಿಡಿಸಿಕೊಳ್ಳವುದ *ಾಗಿ ಯಾರೋ ಓಡಿಬರುತ್ತಿರುವ ಶಬ್ದವನ್ನು ಕೇಳದಕೂಡಲೆ, ಆಕೆ ಯನ್ನು ಹಿಡಿದುಕೊಂಡು ಬಂದಿದ್ದವರು ಆಕೆಯನ್ನು ಬಿಟ್ಟು ತಲೆತಪ್ಪಿಸಿ ಕೊಂಡು ಓಡಿಹೋದರು, ಇಷ್ಟು ಹೊತ್ತಿಗೆ ರಾಮಯವಾದಿಗಳು ಮುಕ್ಕಾಂಬ ಯ ಬಳಿಗೆ ಬಂದು, ಆಕೆಯ ಕೈಕಾಲುಗಳಿಗೆ ಬಿಗಿದಿದ್ದ ಕಟ್ಟುಗಳನ್ನು ಬಿಡಿಸಿ, ಆಕೆ 'ಗನ್ನು ಸಂತೈಸಿದರು, ಸ್ವಲ್ಪ ಶಾಂತವಾದ ಬಳಿಕ ರಾಮಯನು ವ.ಕ್ಯಾಂಬೆಯನ್ನು ಕುರಿತು (* ರಾಜಪುತ್ರಿ! ನಿನಗೆ ಇಂತಹ ಕಷ್ಟವು ಬಸ್ತವಾವುದಕ್ಕಾಗಿ ವ್ಯಸನಪಡುತ್ತಿದೇನೆ. ಆ ದುರಾತ್ಮರಿಂದ ನಿನಗೆ ಗಾಯಗಳೇನೂ ಆಗಲಿಲ್ಲವಷ್ಟೆ ? ಆ ನೀಚರು ಯಾರು ? ?” ಎಂದು ಕೇಳಿದನು ಮುಕಾಂಬೆ- ದೈವಾನುಗ್ರಹದಿಂದ ನನಗೆ ಗಾಯಗಳೇನೂ ಆಗಿಲ್ಲ. ಆ ದುರಾತ್ಮರು ಯಾರೋ ತಿಳಿಯದು. ಅವರು ನನ್ನನ್ನು ಹೊತ್ತು ತರುತ್ತಿದ್ದಾಗೆ ವಿಜಯಸಿಂಹನ ಹೆಸರನ್ನೆ ತಿದುದರಿಂದ ಆತನ ಸ್ನೇಹಿತರಾಗಿ Cಬಹುದೆಂದು ಕಾಣುವುದು, ಮನೆಯಲ್ಲಿ ಪಹರೇಕ್ಷರನನ್ನು ಯಾರೋ ವ
ಪುಟ:ರಾಯಚೂರು ವಿಜಯ ಭಾಗ ೧ .djvu/೯೪
ಗೋಚರ