ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿ ತ ವಿ ಜ ಯ ನಾ ಟ ಕ ೦ - ೧೭ ವಸಂತಮಿತ್ರ. (ಸ್ವಗತ) ಈಗ ಮತ್ತೂ ಚೆನ್ನಾಯಿತು. ಈ ಸ್ತ್ರೀಯು ತನ್ನ ಮೋಹವೆಂಬ ಬಲೆಯನ್ನು ಬೀಸಿ, ಓರೆನೋಟ ವೆಂಬ ಬಾಣದಿಂದ ನಮ್ಮ ಮಹಾರಾಜನನ್ನು ಹೊಡೆಯುತ್ತಿರು ವಳು. ಒಳ್ಳೇದು ಇವಳು ಏನು ಹೇಳುವಳೆ ಹೋಗಿ ಕೇಳುವೆನು. (೨-೩ ಹೆಜ್ಜೆ ಮುಂದಿಡುವನು.) * ಚಾರುಶೀಲೆ, (ಸ್ವಗತಃ) ಇವರಿಬ್ಬರಿಗೂ ಪರಸ್ಪರ ವೈರವನ್ನು ತಂದುಹಾಕುವುದಕ್ಕೆ ಇದೇಸಮಯ. (ಸಚಿವನನ್ನು ನೋಡಿ) ಅಯ್ಯ, ನಿನ್ನನ್ನೇ ಕರೆದೆನಲ್ಲವೆ ! ಬಾ ಯೋಚನೆ ಏಕೆ ? - ಸೌಗಂಧಿಕ ಮಿತ್ರನೆ, ಈಗಲಾದರೂ ಕೇಳಿದೆಯಾ ? ನಿನ್ನನ್ನೇ ಕರೆ ದಳು. ಹೋಗಿ ವಿಚಾರಿಸು. ವಸಂತಮಿತ್ರ, (ಕೋಪದಿಂದ ಹತ್ತಿರಕ್ಕೆ ಬಂದು) ಸ್ತ್ರೀಯೆ, ನನ್ನನ್ನು ಕರೆದುದು ಏಕೆ, ಬೇಗಹೇಳು ? ಚಾರುಶೀಲೆ, ನಿಮ್ಮ ಕೋಪವನ್ನು ಸಹಿಸಲು ಅಬಲೆಯಾದ ನನಗೆ ಸಾಧ್ಯವೆ? ಒಂದು ಗೋಪ್ಯವಾದ ವಿಷಯವನ್ನು ಹೇಳಬೇಕೆಂದು ಕರೆದೆನೆ ಹೊರತು ಮತ್ತೆಬೇರೆಯಲ್ಲ. ಆದರೆ ಒಬ್ಬರ ಸಂಗಡಲೂ ಹೇಳುವುದಿಲ್ಲವೆಂದು ಪ್ರಮಾಣಮಾಡಿಕೊಟ್ಟರೆ ಹೇಳುವೆನು. ವಸಂತಮಿತ್ರ. (ಮರೆಯಲ್ಲಿ) ಒಂದುವೇಳೆ ನಮ್ಮ ರಾಜನ ವಿಷಯ ವನ್ನೇನಾದರೂ ಕೇಳುವಳೆ ? ಸೌಗಂಧಿಕ ಸಚಿವನೆ, ಇದ್ದರೂ ಇರಬಹುದು, ಜಾಗ್ರತೆಯಾಗಿ ಕೇಳು. = ಕೆಂದ !! ತರುಣಿಯತನುಲತೆಯೊಳು ೪ರುತಿಹ ಗುರುಕುತ ರಧಾಂಗಯುಗಳಂ ಭಯದಿ೦ || ನೆರೆಪಾರಿಪೋಗದಂತೀ ಕರಪಂಜರ ವೊಡ್ಡು ತೈದೆ ಸಂತಸವಡುವೆಂ | | ೧೯|| ಚಾರುಶೀಲೆ, ಪ್ರಮಾಣಮಾಡಿಕೊಟ್ಟರೆ ಹೇಳುವೆನು. ವಸಂತಮಿತ್ರ. ಒಳ್ಳೇದು ಬೇಗ ಹೇಳು. ಚಾರುಶೀಲೆ, (ಸಗತಃ) ಜಯಧ್ವಜವನ್ನು ಸ್ಥಾಪಿಸಲು ಅಸ್ತಿಭಾರ