ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ನ ಸ ೦ ತ ಮಿ ತ ವಿ ಜಿ ಯ ನಾ ಟ ಕ • ವಸಂತ ಮಿತ, ನನ್ನ ಪರಮಮಿತ್ರನು ಇನ್ನು ಖಂಡಿತವಾಗಿಯೂ ನನಗೆ ಆಜ್ಞೆ ಮಾಡಿರುವನೆ ! ( ಸ್ವಗತ) ಮಿತ್ರನ, ವಿವಾಹವನ್ನು ನೋಡಲು ಅಸಾಧ್ಯವಾದ ಹೇಡಿಯೇ ಸಾಯಬಾರದೆ. (ಬಿಳುವನು.) - ಸೇವಕ, ಅಯ್ಯ, ಏಳು ಏಳು, «« ಅತ್ಯುನ್ನತಃ ಪತನ ಹೇತುಃ” ಎಂಬಂತೆ ನೀನು ಮಿತಿವಿಾರಿ ಮಾಡಿದ ಸ್ನೇಹವೇ ನಿನ್ನನ್ನು ಇಂತಹ ದುರ್ದೆಶೆಗೆ ತಂದಿತು. ಈಗಲಾದರೂ ಯಾವ ಕೆಲಸವನ್ನಾಗಲಿ ಮಿತಿ ವಿಾರಿ ಮಾಡಬಾರದೆಂದು ತಿಳಿದುಕೊ, ವಸಂತಮಿತ್ರ, (ಮೇಲಕ್ಕೆ ಎದ್ದು) ಅಯ್ಯ, ನನ್ನ ಮಿತ್ರನು ಪ್ರಾಣ ಬಿಡುವನೆಂದು ವಿ ವರು ಹೇಳಿರುವರು. ಒಂದುಸಾರಿ ಆತನ ಮುಖಾರವಿಂದವನ್ನು ನೋಡಿ ಪ್ರಾಣಬಿಡಬೇಕೆಂದೇ ನನ್ನ ಮನೆ ನಿಶ್ಚಯವು, ತೆಗೆದುಕೊ ಬಹುಮಾನವಾಗಿ ಕೊಡುವ ಹಣವನ್ನು (ಕೊಡುವುದಕ್ಕೆ ಕೈ ನೀಡುವನು) ಸೇವಕ. ನಿಮ್ಮ ಬ್ಲಾಧ್ಯವಾದ ಸ್ನೇಹಭಾವಕ್ಕೆ ನಾನು ಮೆಚ್ಚಿ ದಾಗೂ ನಿಮ್ಮನ್ನು ಕೋಟೆಯೊಳಗೆ ಬಿಡೋಣವೆಂದರೆ ಸ್ವಾಮಿವೃತ್ಯ ನ್ಯಾಯವೆಂಬ ದಂಡವು ನನ್ನನ್ನು ಭೀತಿಪಡಿಸುತ್ತಿರುವುದು. ಆದರೆ ಲಾಲಿಸಬೇಕು. ಸೇವಾವೃತ್ತಿಯು ಅತಿ ಹೇಯವಾದುದು. ಯಜಮಾನನ ಮನೋವೃತ್ತಿಯಂತೆ ನಡೆದು, ತನ್ನ ಕರ್ತವ್ಯ ವನ್ನು ನಡೆಸಿ, ತ್ರಿಕರಣಗಳಲ್ಲಿಯೂ ಒಂದೇರೀತಿಯಾಗಿ ಆಚರಿಸಿ, ಆತನ ಅಭಿವೃದ್ಧಿ ಯನ್ನೆ ಬಯಸತಕ್ಕವರಲ್ಲಿ ಸೇವಕನಾದ ನನ್ನ ವಂಚನೆಯು ಒಂದುವೇಳೆ ರಾಜನಿಗೆ ಅಗೋಚರವಾಗಿದ್ದರೂ ಸರ್ವಜ್ಞನಾದ ಪರಮಾತ್ಮನಿಗೆ ಗೋಚರವಿಲ್ಲವೆ ? ಅಪನಂಬಿಕೆ ಯಿಂದ ಅಪ್ರತಿಹತವಾದ ಅನರ್ಥಗಳು ಅಡಿಗಡಿಗೂ ಅನುವರ್ತಿಸು ವುದರಲ್ಲಿ ಅನುಮಾನವೇನಿದೆ. ಆರರೆ, ಅರುಹಿದುದನ್ನು ಅಕ್ಕರೆ ಯಿಂದ ಆಲಿಸಿ ಅಜ್ಞನಾದವನಿಗೆ ಆಜ್ಞೆಯಾಗಬೇಕೆಂದು ಆಜ್ಞಾಧಾರ ಕನು ಅನಮಿಸುವನು. (ನಮಸ್ಕರಿಸುವನು.) ಕಂದ | ಪರಸೇವಾವೃತ್ತಿಯೆತಾಂ ನೆರೆನಿಂದಿತ ಮೆನಿಪುದವನಿಯೊಟ್ಟಿ ಜಧರಾ ಚರಣೆಯ ಬಿಡ ದಾವಂತ ನೆರೆಯನ ವಿಧಿಖಾರ ದಿರ್ಪನವನೇ ಭತ್ಯಂ || || ೩೩ |