ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ ೦ ಕ ೦ . ೩೭ * ವಸಂತಮಿತ್ರ. ಇಂತಹ ಕೃತ್ಯನನ್ನು ನಾನು ಇದುವರೆಗೂ ಎಲ್ಲಿಯೂ ನೋಡಲಿಲ್ಲ. ಮನುಷ್ಯನು ಎಂತಹ ಸ್ಥಿತಿಯಲ್ಲಿದ್ದಾಗ್ಯೂ ತನ್ನ ಕರ್ತವ್ಯವನ್ನು ಬಿಡದೆ ನ್ಯಾಯವರಿತು ಮಾಡುವ ಕೆಲಸವೇ ಶ್ಲಾಘನೀಯವಾದುದು. ಒಳಗೆ ಬಿಡೆಂದು ಕೇಳುವುದಕ್ಕೆ ನನಗೆ ನಾಲ ಗೆಯೇ ಬರುವದಿಲ್ಲ. ಈಗ ಏನುಮಾಡಲಿ, (ಯೋಚಿಸಿ) ಮಹಾತ್ಮ ರಾದ ಆ ಮಾಂಡವ ಖತ್ರಿಗಳು ಹೇಳಿದಂತೆ ಈ ಊರು ಹೊರಗಿನ ಕುಟೀರಕ್ಕೆ ಹೋಗುವೆನು. ದೇವರ ಚಿತ್ತವಿದ್ದಂತಾಗಲಿ. (ಹೋಗುವನು.) ಸ್ಥಾನ.-ಕುಟೀರ, ಸುರಂಗದಮಾರ್ಗ. (ಒಬ್ಬ ಕುಂಟನು ಕೂತಿರುವನು.) ಕುಂಟ, ದೇವರು ಮನುಷ್ಯನನ್ನು ನೀಚಸ್ಥಿತಿಯಲ್ಲಿಟ್ಟಿದ್ದರೂ ಪೂರ್ವಪುಣ್ಯತೇಪವಿದ್ದರೆ ತಾನಿದ್ದ ಕಡೆಯಲ್ಲಿಯೇ ಸರ್ವ ಸಂತೋಷ ವನ್ನುಂಟುಮಾಡುವನು. ಈಗ ನನ್ನ ಸ್ಥಿತಿಯು ಅತಿ ಹೇಯವಾಗಿ ದರೂ ರಾಜಕುಮಾರಿಯಾದ ಆನಂದವತಿಯು ಪ್ರತಿದಿನವೂ ನನಗೆ ಅನ್ನೋದಕಗಳಿಂದ ತೃಪ್ತಿ ಪಡಿಸುತ್ತಿರುವಳು. ನನಗೆ ಹಸಿವೆಯಾ ದರೆ ಬಹಳವಾಗಿರುವುದು. ಇಷ್ಟಾದರೂ ಆಕಯು ಬರಲಿಲ್ಲವಲ್ಲ. ಆಕೆಯು ಬಂದರೆ ಇದೋ ಈ ಚಾವಟಿಯಿಂದಲೇ ಹೊಡೆದು ನನ್ನ ಕೋಪವನ್ನು ಶಾಂತಗೊಳಿಸಿಕೊಳ್ಳುವೆನು.

  • ರಾಗ – ಭೈರವಿ

ರೂಪಕ. ನಾಮಾಡಿದ ಕರ್ಮ ಫಲವಿದ 1 ನೇನೆಂಬೆನಕ್ಕಟ || ಪ || ಭೂಮಿಪಾಲ ನನ್ನು ನೋಡದೆ ತೊಳಲುವೆನು !! ಅ | ಆದಕಾವಯೊಚನೆ ಗೈದರು ! ಹದ ನೇನು ಕಾಣೆನು ಕೋಟೆ | ಮದದಿಂದಪೋಗಲು ನೂಕಿಕಳುಹಿದರು !೧! ಪರಮಾಪ್ತನಾದ ಭೂಮಿಪ 1 ವರಮಿತ್ರನನು ನೋಡದೆ ! ಧರೆಯೊಳಕ್ಕಟ ಬಾಳಲರಿಯೆನು || ೨ ||