ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ವ ಸ ೦ ತ ವಿ ವಿ ಜಿ ಯ ನಾ ಟ ಕ ೦ . ಆನಂದವತಿ ಪ್ರಾಣಪದಕವೆ, ನನ್ನ ಮೇಲೆ ಕೋಪವೆ ? ಸೌಗಂಧಿಕ. ಇಲ್ಲ, ಈ ದಿವಸ ತಲೆ ನೋಯುತ್ತಿರುವುದು, ಫಲ ಹಾರವು ಬೇಡ, ವಸಂತಮಿತ್ರ, ದೇವರೆ, ನೀನು ಆತನಿಗೆ ಪ್ರೇರೇಪಿಸಿ ಬೇಡವೆಂದು ಹೇಳಿದೆಯಲ್ಲ, ನನಗೆ ಸಂತೋಷವಾಯಿತು. ಆನಂದವ, ಹಾಗಾದರೆ ಈ ಹಾಲನ್ನಾದರೂ ಕುಡಿ. ಸೌಗಂಧಿಕ. ಇದೂ ನನಗೆ ಬೇಡ. ವಸಂತಮಿತ್ರ. ಇದರಲ್ಲಿಯೂ ನನ್ನ ಮಿತ್ರನು ಮೋಸಹೋಗಲಿಲ್ಲ. ಇನ್ನೂ ಏನು ಹೇಳುವ ಕೇಳುವೆನು, ಅನಂದವತಿ ನನ್ನ ಪ್ರಿಯನು ಒಂದಕ್ಕೂ ಒಪ್ಪಲಿಲ್ಲವಲ್ಲ. ಏನು ಮಾಡಲಿ. (ಯೋಚಿಸಿ ಯೋಜನೆಯಾಕೆ. ಇದೊ, ಈ ಪುಸ್ಮಕೂ ವಿಳ್ಯದೆಲೆಗೂ ಪಾಪ್ರಾಣವನ್ನು ಬೆರೆಸುವೆನು. (ಎಂದು ತೋರಿಸುತ್ತಿರುವಳು.) ವಸಂತಮಿತ್ರ, ಪುಷ್ಪಕ ವಿಸಕೂರ್ಣವನ್ನು ಸವರುತ್ತಿರುವ ಇಲ್ಲ. ಅನ್ಯಾಯಪ್ರಪಂಚವೆ. ಈ ನೀಚ ಜನ್ಮವು ಯಾವದಕ್ಕೂ ಹೇಸತಕ್ಕುದಾಗಿಲ್ಲ. ಆನಂದವತಿ ಪ್ರಿಯನೆ, ಹಾಗಾದರೆ ಈ ಗಂಧವನ್ನಾದರೂ ತೊಡೆ ಯುವೆನು; ಸ್ವೀಕರಿಸಬೇಕು. ವಸಂತಮಿತ್ರ. « ನಿನ್ನ ಹೆಸರನ್ನೇ ತೊಡೆಯುವೆನು ಬಾ ಪ್ರಿಯನೆ.” ಎಂದು ಕರೆಯುವ ನಿನ್ನ ಕಪಟಧ್ವನಿಯನ್ನು ದೇವರು ಇನ್ನೂ ಏಕೆ ಅಡಗಿಸಲಿಲ್ಲ. ನೌಗಂಧಿಕ. ಇದೂ ನನಗೆಬೇಡ ಹಿಂಸೆಮಾಡಿ ಪ್ರಯೋಜನವಿಲ್ಲ. ಆನಂದವು ಪ್ರಾಣಕಾಂತನೆ, ಕೊನೆಗೆ ಈ ಪುಸ್ಮವನ್ನಾದರೂ ಮುಡಿಸುವೆನು. ಸೌಗಂಧಿಕ. ಇದೂ ನನಗೆ ಬೇಡ. ವಸಂತಮಿತ್ರ, ಗಂಡನನ್ನು ವಂಚಿಸಿ ಹೆಂಡಿರು ತಮ್ಮ ವಿಟನನ್ನು ಸಂತೋಷಪಡಿಸಬೇಕೆಂದು ನಟನೆಯಿಂದ ತೋರಿಸುವ ಪ್ರೀತಿಯು ಕವಾದ ಕಾವ್ಯಗಳೆಲ್ಲಾ ವಂಚನೆಯೆಂದು ಭಾವಿಸಿದೆ, ಆ ವಿಟರೂ