ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃ ತಿ ಯಾ ೦ ಕ ೦ , ಸ್ಥಾನ ೧-ಕಾರಾಗೃಹ. (ವಸಂತಮಿತ್ರನು ಕಾರಾಗೃಹದಲ್ಲಿರುವನು.) ವಸಂತಮಿತ್ರ. ಈ ವಿಧಿಯೆ ? ಪರಮಮಿತ್ರನನ್ನು ಕಳೆದುಕೊಳ್ಳು ವಂತೆ ಮಾಡಿದುದಲ್ಲದೆ ಕಾರಾಗೃಹ ಪ್ರಾಪ್ತಿಮಾಡಿದೆಯಾ? ಮಿತ್ರನೆ, ನೀನು ಮೃತನಾದುದನ್ನು ನನ್ನ ಪಾಪಿಕಣ್ಣುಗಳು ನೋಡಬೇಕಾದವೆ! ವಿಧಿಯೆ, ನೀನು ಯಾರನ್ನು ತಾನೆ ಬಿಟ್ಟಿರುವೆ. ನಿದ್ರೆಯಾದರೋ ಅತಿವೇಗವಾಗಿ ಬರುತ್ತಿರುವುದು. ಪ್ರಪಂಚದಲ್ಲಿರುವ ಸಕಲಜೀವಿ ಗಳಗುಂಟಾದ ಆಯಾಸವನ್ನು ಪರಿಹಾರಮಾಡುವದು ನಿದ್ರೆಯಾದಾ ಗ್ಯೂ, ಇದು ಈ ಕಾಲದಲ್ಲಿ ನನಗೆ ತೊಂದರೆಯನ್ನುಂಟುಮಾಡು ವುದು. ಮಾಡತಕ್ಕುದೇನು. (ಮಲಗಿಕೊಂಡು ನಿದ್ರೆ ಮಾಡುವನು.) (ರಾಜಹಂಸ, ಸುನೀತಿ ಪ್ರವೇಶಿಸುವರು.) ರಾಜಹಂಸ ಮಂತ್ರಿಯೆ, ಕಾರಾಗೃಹವೆಲ್ಲಿ ? ಸುನೀತಿ, ಸ್ವಾಮಿ, ಇದೋ ಇಲ್ಲಿ ಕಾಣಿಸುವುದು. ರಾಜಹಂಸ, ಕಾರಾಗೃಹದ ಬಾಗಳನ್ನುತೆಗೆ, ಆ ನೀಚನು ಏನು ಮಾಡುತ್ತಿರುವನೋ ನೋಡೋಣ. (ಹತ್ತಿರಕ್ಕೆ ಹೋಗಿ ನೋಡಲು ವಸಂತಮಿತ್ರನು ಗಾಢನಿದ್ರೆಯಲ್ಲಿರುವನು.) n a me = = = = = = a, as

  • ರಾಗ-ಕದಂಬಗಜಲ್,

ವಿಧಿಯಿಂತುಗೈದನು ! ವಿರೋಧಿಯಾದೆನು | ಪ | ಸರಸಸಖನನೀಗಿ ! ಜೀವಿಸಿಕೆ ೧ ಅ ಎಂದುವಿನೋದವ ನೊಂದುವೆಶನೆ ! ಇಂದಿ೦ತುಪಾಪಿ ಯಾದೆನೊನಾ || ೧|