ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧ ತೃ ತೀ ಯಾ ೦ ಕ ೦ . ಯನ್ನು ವಿಧಿಸಿರುವನು. ಸಂಶಯವೇಕೆ? (ಇಬ್ಬರೂ ಕತ್ತಿಯನ್ನು ಮಸೆಯುತ್ತಾ ನಿಂತಿರುವರು) . ಆನಂದವತಿ, ಪ್ರಾಣಕಾಂತನೆ, ನಮ್ಮ ತಂದೆಯು ಹೊರಟು ಹೋದನು. ಇನ್ನು ನಾವು ಸುಖವಾಗಿರೋಣವೆ? ಮುಂದಕ್ಕೆ ಯಾವ ತೊಂದರೆಯೂ ಇಲ್ಲ. ೨ನೇಯವನು. ನಿಜ. ನಿಮಗೆ ಯಾವ ತೆ ಎಂದರೆಯೂ ಮುಂದಕ್ಕೆ ಇರದಂತೆ ಮಾಡುವುದಕ್ಕೆ ನಾವು ಬಂದಿರುವೆವು, ಯೋಚನೆಯೇಕೆ? ಕುಂಟ ನೀಳಕಳೆ, ನಿನ್ನ ಪತಿಯನ್ನು ಕೊಲ್ಲುವುದಕ್ಕೆ ನಿನ್ನ ಮನ ಸ್ಸು ಹೇಗೆ ಬಂತು? ಅನೇಯವನು. ನನ್ನ ಕೈಗಳಿಂದ ಕೊಲ್ಲಿಸಿಕೊಳ್ಳುವುದಕ್ಕೆ, ಅನಂದವು. ಆ ಪ್ರಸಕ್ತಿಯು ಈಗ ಪ್ರಯೋಜನವಿಲ್ಲ. ಈಗ ಹೊತ್ತಾಯಿತು. ಬಾ, (ಎಂದು ಎಬ್ಬಿಸುವುದಕ್ಕೆ ಹೋಗುವಳು.) ೧ನೇಯವನು, ಆವನಿಂದ ಪ್ರಯೋಜನವಿಲ್ಲ. ಈಗ ನಾವು ನಿಮಗೆ ಶಾಶ್ವತ ಸೌಲ್ಯವನ್ನುಂಟುಮಾಡುವೆವು. (ಇಬ್ಬರೂ ಕಾಣಿಸಿಕೊಳ್ಳುವರು ) ಅನಂದವು. ಇದೇನು, ಇಲ್ಲಿ ಯಾರೋ ಮಾತನಾಡುವಂತಿದೆ, ಯಾರಲ್ಲಿ ? ಅನೇಯವನು ನಿಮ್ಮ ಭಾಗದ ಮೃತ್ಯುಗಳು. ಆನಂದವತಿ, ಕಟುಕರೆ, ಇದೇನು ಈ ನಿಶಿಯಲ್ಲಿ ಇಲ್ಲಿಗೆ ಬಂದಿರಿ? ಕುಂಟ. ಪ್ರಿಯೇ, ಮುಂದೇನುಗತಿ? ಅನೇಯವನು, ನಿಮಗೆ ನಾವೇ ಗತಿ. ಆನಂದವ, ನಮ್ಮನ್ನು ಕೊಲ್ಲುವುದಕ್ಕೆ ಕಾರಣವೇನು? ಕ್ಷಮಿಸಿರಿ. ೧ನೇಯವನು, ಇದಕ್ಕೆ ಕಾರಣವನ್ನು ನಿಮ್ಮ ತಂದೆಯನ್ನು ಕೇಳಿಕೊ, (ಆನಂದವತಿಯನ್ನೂ ಕುಂಟನನ್ನೂ ಶಿರಛೇದನಮಾಡುವನು.) ಕುಂಟ, ಪ್ರಿಯೆ. ಹಾಪ್ರಿಯೆ. (ಕೆಳಗೆ ಬೀಳುವನು.) ಅನೇಯವನು, ಸತ್ಪುರಷನಾಗಿದ್ದರೆ, ಪ್ರಾಣೋತೃಮಣ ಕಾಲದಲ್ಲಿ ದೇವರ ಸ್ಮರಣೆಯು ಬರುತ್ತಿತ್ತು, ನೀಚರಿಗೆ ದೇವರ ಸ್ಮರಣೆಯು ಬರುವುದುಂಟೆ?