ಪುಟ:ವಸಂತಮಿತ್ರ ವಿಜಯ ನಾಟಕಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ ವ ಸ ೦ ತ ಮ ತ ವಿ ಜಿ ಯ ನಾ ಟ ಕ ೦ , (ಸ್ವಲ್ಪ ಮುಂದಕ್ಕೆ ಹೋಗಿ) ಇದೇನಾಕ್ಟರ್, ಅನೇಕ ಮೊಹರುಗಳಿಂದ ಕೂಡಿರುವ ಈ ಪೆಟ್ಟಿಗೆಯು ಇಲ್ಲಿ ಬಿದ್ದಿರುವುದಕ್ಕೆ ಕಾರಣವೇನು? (ಯೋಚಿಸಿ) ಒಂದುವೇಳೆಕೋರರೇನಾದರೂ ತಂದು ಹಾಕಿರಬಹುದೆ! ಧನದಿಂದ ತುಂಬಿರುವುದಾದರೆ ಕಳ್ಳರು ಹೀಗೆ ಬಿಟ್ಟು ಹೋಗು ವುದೆಂದರೇನು? ಸ್ವಲ್ಪಮರೆಯಾಗಿ ನಿಂತು ಏನಾಗುವುದೋ ನೋಡುವೆನು. (ಮರೆಯಲ್ಲಿ ನಿಂತಿರುವನು ) (ವಸಂತಮಿತ್ರನ ಪ್ರವೇಶ.) ವಸಂತಮಿತ್ರ, ನಿತ್ಯಕರ್ಮಗಳನ್ನು ತೀರಿಸಿಕೊಂಡುದಾಯಿತು' ಇನ್ನು ಗಂಗಾತೀರಕ್ಕೆ ಹೊರಡುವೆನು. (ಸ್ವಲ್ಪ ಮುಂದೆ ಹೋಗುತ್ತಿ ರುವನು.) ಕುಶಲಮತಿ. ಈತನ ಮುಖವನ್ನು ನೋಡಿದುದಾದರೆ ಏನೋ ಒಂದು ವಿಧವಾಗಿ ಮನಸ್ಸಿಗೆ ಹೊಳೆಯುತ್ತಿರುವುದು. ಈತನಾರಾಗಿರ ಬಹುದು? ವಸಂತಮಿತ್ರ* (ಪೆಟ್ಟಿಗೆಯನ್ನು ನೋಡಿ)ನಿನ್ನ ಸುಂದರಾಸ್ಯವೆಲ್ಲಿ ? ಮಂದಹಾಸವೆಲ್ಲಿ? ನಿನ್ನ ಚತುರೋಕ್ತಿಯೆಲ್ಲಿ ? ಇವುಗಳೆಲ್ಲಾ ನನ್ನ ದುಃಖಸಾಗರದಲ್ಲಿಯೇ ಮುಳುಗಿಹೋದವೇ ? ನಾನು ಇಷ್ಟು ಕಷ್ಟ ಸಡುತ್ತಿದ್ದರೂ ಸಂತೋಷದಿಂದ ಸುಖನಿದ್ರೆ ಮಾಡುತ್ತಿರುವೆಯೋ ? ಒಂದು ಮಾತನ್ನೂ ಆಡುವದಿಲ್ಲವೆ ? ಬೇಡ, ಹಠ ಮಾಡಬೇಡ. ನನ್ನನ್ನು ನಿನ್ನ ಪ್ರಿಯಮಿತ್ರನೆಂದು ಹೇಳಿಕೊಳ್ಳಲಿಲ್ಲವೆ' ಸ್ನೇಹಿತ ರಲ್ಲಿ ಮಾತನಾಡದಷ್ಟು ಮಾತ್ಸಲ್ಯವನ್ನು ಬೆಳೆಸಬಹುದೆ ? ಇದು ಲೋಕವಿರುದ್ಧವಲ್ಲವೆ? ಆಂಥವನಮೇಲೆ ಕೋಪವೆ? ಕೋಪವನ್ನು ಮುಖ್ಯವಾಗಿಟ್ಟುಕೊಂಡರೆ ಇದರಿಂದ ಚಿತ್ತವೃತ್ತಿಯು ಪಲ್ಲಟವಾಗಿ

  • ರಾಗ-ನಾದನಾಮಕ್ರಿಯ

ರೂಪಕ, ಸರಸವಾಡಿದುದೆಲ್ಲಿ! ಮರುಕತೋರಿದುದೆಲ್ಲಿ | ಸರಸಮುಖವರು ಸರಳ ಹೃದಯನೆ | ಪಗಿ ಸುಂದರಾಶೆವಕಂಡಾ | ನಂದವಾನುವೆಸಖ || ವಂದಿಸುವೆನು ನಿನಗೆ | ಒಂದುಮಾತಾಡು |೧|| ಪ್ರಾಣವೆಯೆನ್ನಯ | ಪ್ರಾಣಸಖನೊಳು || ಜಾಣತನದಿಬೆರೆದು ! ಪ್ರಾಣವನುಳಿಪೆಯ ೨!