ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ವಿಮರ್ಶೆಯ ನೆಲೆಗಳು



ಕಲೆ, ಸಾಹಿತ್ಯಗಳ ವಿಕಾಸದಲ್ಲಿ ವಿಮರ್ಶೆಯ ಪಾತ್ರ ಬಹಳ ಮುಖ್ಯ ವಾದುದು. ಸಶಕ್ತವಾದ ವಿಮರ್ಶೆಯು ಸಾಂಸ್ಕೃತಿಕ ಪ್ರಕಾರಗಳ ಗತಿ ಯನ್ನು ನಿರ್ಧರಿಸಬಲ್ಲುದು. ಅದಕ್ಕೆ ಹೊಸ ಆಯಾಮಗಳನ್ನು, ತಿರುವು ಗಳನ್ನು ನೀಡಬಲ್ಲುದು. ಈ ನೆಲೆಯಲ್ಲಿ, ಯಕ್ಷಗಾನ ಕಲೆಯ ಸಂದರ್ಭ ದಲ್ಲಿ ವಿಮರ್ಶೆಯ ಸ್ವರೂಪ ವಿವೇಚನೆಯನ್ನು, ತುಂಬ ಸ್ಥೂಲವಾಗಿ ಮಾಡುವ ಪ್ರಯತ್ನ ಈ ಲೇಖನದ ವ್ಯಾಪ್ತಿ.

ವಿಮರ್ಶೆಯ ಕೆಲಸ

ವಿಮರ್ಶೆ ಎಂಬ ಚಿಂತನಪ್ರಕಾರ ಮಾಡುವ ಕೆಲಸ ಯಾವುದು? ಕಲಾಕೃತಿಯನ್ನು ನೋಡುವ ವಿವೇಕಯುಕ್ತವಾದ ದೃಷ್ಟಿ ಅದು. ಕಲೆ ಯನ್ನು, ಕಲಾಕೃತಿಯನ್ನು, ಪ್ರದರ್ಶನವನ್ನು ಅರ್ಥವಿಸುವ ಕೆಲಸ ವಿಮರ್ಶೆಯದು. ಕಲಾಕೃತಿಯನ್ನು ಸರಿಯಾಗಿ ಪರಿಶೀಲಿಸಿ, ಅದನ್ನು ವ್ಯಾಖ್ಯಾನಿಸುವ, ಅದರ ಹೊರ, ಒಳ ಮೈಗಳನ್ನು ತಿಳಿಯುವ ಯತ್ನ ವನ್ನು ವಿಮರ್ಶೆಯು ಮಾಡುತ್ತದೆ. ಇದು ಹೀಗಿದೆ ಎಂದು ಬರಿಯ ವಿವರಣೆ ನೀಡುವ ಕೆಲಸವೂ ವಿಮರ್ಶೆಯೇ ಆಗಿದ. ಕಾರಣ, ಕೇವಲ ವಿವರಣೆ ಕೂಡ ಒಂದು ದೃಷ್ಟಿಕೋನವನ್ನು ಹೊಂದಿಕೊಂಡಿರುತ್ತದೆ. ನಾವು ಯಾವುದೇ ಘಟನೆಯನ್ನು ವರದಿಯಂತೆ ಹೇಳುವಾಗ ಕೂಡ, ನಮಗೆ ತಿಳಿದೋ, ತಿಳಿಯದೆಯೋ ನಾವು ಆಯ್ಕೆಗಳನ್ನು ಮಾಡುತ್ತ ಇರುತ್ತೇವೆ. ನಮ್ಮ ಒಪ್ಪಿಗೆ ಯಾ ನಿಷೇಧಗಳನ್ನು ಸೂಚಿಸುತ್ತೇವೆ. ಆದರೆ, ವರದಿಯೇ ವಿಮರ್ಶೆಯ ಕೆಲಸವಲ್ಲ. ಅದಕ್ಕಿಂತ ಆಚೆಗೆ ಹೋಗಿ, ಕಲಾರಸಿಕನಿಗೆ ಒಂದು ದೃಷ್ಟಿಯನ್ನು ನೀಡುವ, ಪರಿಜ್ಞಾನ ಪೂರ್ವಕವಾದ ವೀಕ್ಷಣೆಯನ್ನು ಸಾಧ್ಯಗೊಳಿಸುವ ಕೆಲಸ ಅದಕ್ಕಿದೆ. ವಿಮರ್ಶೆಯು ರಸಿಕನಿಗೂ, ಕಲೆಗೂ ಹೊಸ ಪ್ರಚೋದನೆಗಳನ್ನು ನೀಡಬೇಕು. ಆರೋಗ್ಯಕರ ದೃಷ್ಟಿಯನ್ನು ವ್ಯವಸ್ಥಿತವಾದ ಅಭಿಪ್ರಾಯ ನಿಲುಮೆಗಳನ್ನು ಹೊಂದಲು ಸಹಾಯ ಮಾಡಬೇಕು. ವಿಮರ್ಶೆಯನ್ನು ಓದಿದ, ಕೇಳಿದ ಕಲಾವಿದನಾಗಲಿ, ಕಲಾರಸಿಕನಾಗಲಿ, ಕಲೆಯನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು. ಆ ಕುರಿತು ಆತನು ಯೋಚಿಸಲು ಹಚ್ಚಬೇಕು. ತಾನು ಕಲೆಯ ಬಗ್ಗೆ, ಈಗ ಹೆಚ್ಚು