“ಪ್ರಯೋಜನಮನುದ್ದಿಷ್ಯ ನಮಂದೋಪಿಪ್ರವರ್ತತೇ” ಎಂಬುದು ಕುಮಾರಿಲಭಟ್ಟ (೮ನೆಯ ಶತಮಾನ) ವಿರಚಿತ ಶ್ಲೋಕವಾರ್ತಿಕದ ತುಣುಕು. ಆದರೆ ಅದನ್ನು ರಾಮ, ಕೃಷ್ಣ, ದುರ್ಯೋಧನರು ಹೇಳಬಹುದು. ಕಾರಣ ಅದು ಆ ಪಾತ್ರಗಳಿಗೆ ಹೇಳಿದ ಮಾತುಗಳೇ ಎಂಬುದು ಹೊಂದಾಣಿಕ, ಗಾದೆಗಳಿಂದ ಹಿಡಿದು ಆಧುನಿಕ ಕವಿತೆಗಳ ವರೆಗೆ, ಹೊಂದುವುದಾದರೆ, ಬಳಸಬಹುದು. ಆಧುನಿಕ ರಾಜಕೀಯ ಸಾಮಾಜಿಕ ವಿದ್ಯಮಾನಗಳೂ ಸ್ಪಂದನಶೀಲ ಕಲಾವಿದನಿಗೆ ಪ್ರೇರಣೆ ನೀಡುತ್ತವೆ.
ಅರ್ಥಗಾರಿಕೆಯ ಆಕರ ಸಾಮಗ್ರಿಯ ನಿರ್ವಹಣೆಯ ವಿಷಯವನ್ನು
ಸಂಗ್ರಹವಾಗಿ 'ಅನುಶಾಸನ-ಸಂಘರ್ಷ-ಸಮನ್ವಯ' ಎಂದು ಹೇಳ
ಬಹುದು. ಪ್ರಸಂಗದ ಶಿಸ್ತು, ಚೌಕಟ್ಟಿನ ಶಿಸ್ತು, ಸಾಮಗ್ರಿಯ ಶಿಸ್ತನ್ನು
ರಕ್ಷಿಸುತ್ತ ಜತೆಗೆ ಆ ಸಾಮಗ್ರಿಯೊಂದಿಗೆ ಒಂದು ಬಗೆಯ ಸಂಘರ್ಷ
ವನ್ನು, ತಾತ್ವಿಕ ಸಂವಾದವನ್ನು ಸಾಧಿಸುತ್ತ, ಜೋಡಿಸುತ್ತ,
ಬೇರ್ಪಡಿಸುತ್ತ ಸಾಗಬೇಕು. ಇದರಲ್ಲಿ ಒಂದು ಬಗೆಯ ಅತೃಪ್ತಿ
ಕಲಾವಿದನನ್ನು ಬಾಧಿಸುತ್ತಿದ್ದರೆ, ಅದು ಶುಭಲಕ್ಷಣ. ಹದವಾದ
ಸಮನ್ವಯಸೂತ್ರ ಅರ್ಥಪ್ರಕ್ರಿಯೆಯಲ್ಲಿ ಸತತವಾಗಿ ಜೀವಂತವಾಗಿ
ಇರಬೇಕು
೧.ಈ ವಿಷಯಗಳ ಕೆಲವು ಪ್ರಸ್ತಾವಗಳಿಗೆ ನೋಡಿ :
ಬರೆದ ಪದ್ಯ ಆಡುವ ಗದ್ಯ : ಯಕ್ಷಗಾನ ಬಯಲಾಟ :
ಶಿವರಾಮ ಕಾರಂತ ೧೯೬೩
ಅರ್ಥಗಾರಿಕೆ ಸ್ವರೂಪ ಸಮೀಕ್ಷೆ : (ಸಂ.) ಎಂ. ಪ್ರಭಾಕರ ಜೋಶಿ,
ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು - ೧೯೮೧
('ಸಿರಿ' : ಅಮೃತ ಸೋಮೇಶ್ವರ ಅಭಿನಂದನ ಗ್ರಂಥ, ೧೯೯೫)