ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೯೩


ಎಷ್ಟು ಚೆನ್ನಾಗಿ, 'ನಿಯಮಬದ್ಧವಾಗಿ 'ಪ್ರದರ್ಶಿತವಾಗಿದೆ ಎಂಬುದನ್ನು ನೋಡುವುದಷ್ಟೆ ನಮ್ಮ ಕೆಲಸವೆ? ಎಂಬ ವಿಚಾರ, ಯಕ್ಷಗಾನದಂತಹ 'ಪ್ರಾಚೀನ ಪ್ರಧಾನ' ಮತ್ತು ವಿಶಿಷ್ಟ ಶೈಲಿ, ವಿಧಾನಗಳ ಪ್ರತ್ಯೇಕತೆ ಇರುವ ಕಲೆಯ ವಿಮರ್ಶೆಯು ತಾಂತ್ರಿಕ ವಿಮರ್ಶೆ ಆಗುವುದು ಅನಿವಾರ್ಯ ಆದರೆ, ವಸ್ತು, ಆಶಯ, ಅಭಿವ್ಯಕ್ತಿಗಳಲ್ಲಿ ಮುನ್ನೋಟ, ನಾವೀನ್ಯ ಮತ್ತು ಕಾಲೋಚಿತ ವಿವೇಕವನ್ನು ಅಪೇಕ್ಷಿಸುವ ಮತ್ತು ಅದು ಇರುವಂತೆ ಪ್ರೇರೇಪಿಸುವ ಕರ್ತವ್ಯವು ವಿಮರ್ಶೆಗೆ ಇದೆ. 'ಕಲಾಕೃತಿಯ ಅರ್ಥೈಸುವಿಕೆ ಮತ್ತು ವ್ಯಾಖ್ಯಾನ'ವೆಂಬುದರಲ್ಲಿ, ಈ ವಸ್ತು-ಆಶಯ ಪರೀಕ್ಷಣವು ಆಗಿಯೇ ಆಗಬೇಕು. ಆಶಯ ಮತ್ತು ವಸ್ತುವಿನ ನಿರ್ವಹಣದ ಕ್ರಮವು ಈ ಮಾಧ್ಯಮದ ಅನನ್ಯತೆಯನ್ನು ಲಕ್ಷಿಸಿ ನಡೆಯ ಬೇಕೆಂಬ ಸೂತ್ರದ ಮೂಲಕ ವಿಮರ್ಶಕನು ಇಲ್ಲಿ ವಿಮರ್ಶೆಯ ವಿವಿಧ ಮುಖಗಳನ್ನು ಏಕಸೂತ್ರಕ್ಕೆ ತರಬೇಕಾಗುತ್ತದೆ.

ಯಕ್ಷಗಾನ ವಿಮರ್ಶಾ ಪರಂಪರ

ಯಕ್ಷಗಾನ ಕಲಾಪರಂಪರೆಯ ಸುದೀರ್ಘ ಅವಧಿ ಮತ್ತು ಈ ರಂಗದ ಗಾತ್ರವನ್ನು ನೋಡಿದರೆ, ಈ ರಂಗದ ವಿಮರ್ಶೆಗೆ ಅಂತಹ ಪರಂಪರೆ ಅಥವಾ ವಿಸ್ತಾರ ಇಲ್ಲ. ಈ ಶತಮಾನದ ಮೊದಲ ಭಾಗ ದಿಂದಲೇ ಲೇಖನಗಳ ಮೂಲಕ ಈ ಕಲೆಯ ಬಗೆಗಿನ ಬರಹದ ಯತ್ನ ಆರಂಭವಾಗಿದ್ದರೂ, ಡಾ| ಕಾರಂತರ ಗ್ರಂಥವೇ (೧೯೫೭) ಈ ಕಲೆಯ ಬಗೆಗಿನ ವ್ಯವಸ್ಥಿತ ವಿವರಣೆ ವಿಶ್ಲೇಷಣೆಯ ಮೊದಲ ಗ್ರಂಥ. ನಂತರ ಕೆಲವು ಪುಸ್ತಕಗಳು ಬಂದಿವೆ. ಆದರೂ, ಯಕ್ಷಗಾನ ವಿಮರ್ಶೆ, ಮೀಮಾಂಸೆಗಳಿಗೆ ಗಟ್ಟಿಯಾದ ನೆಲೆ ಒದಗಿಲ್ಲ. ಯಕ್ಷಗಾನದಲ್ಲಿ ವ್ಯವಸ್ಥಿತ ವಿವರಣೆಗೆ ಇನ್ನೂ ಆರಂಭಿಕ ಸ್ಥಿತಿಯಲ್ಲಿ ಇದೆ. ಉತ್ತಮ ಗುಣಮಟ್ಟದ ಮತ್ತು ಸಾಕಷ್ಟು ಪ್ರಮಾಣದ ವಿಮರ್ಶೆ ಬೆಳೆಯದಿರು ವುದು ಈ ರಂಗದ ಒಂದು ಪ್ರಮುಖ ಸಮಸ್ಯೆ. ಬಂದಿರುವ, ಬರು ತಿರುವ ವಿಮರ್ಶೆಯಲ್ಲೂ ಸಮಗ್ರ ದೃಷ್ಟಿಯುಳ್ಳ ಬರಹಗಳು ಕಡಿಮೆ.

ಮೌಖಿಕ ವಿಮರ್ಶೆಯ ಪರಂಪರೆ

ಮುಖ್ಯವಾಗಿ ಮೌಖಿಕ ಪರಂಪರೆಗೆ ಸೇರಿದ: ಯಕ್ಷಗಾನದ ವಿಮರ್ಶೆಯೂ ಮೌಖಿಕವಾಗಿಯೇ ನಡೆದುದು ಹೆಚ್ಚು. ಪ್ರದರ್ಶನವಿದ್ದ