ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಪಠ್ಯ : ವಿವಿಧ ಹಂತಗಳು



ಪಠ್ಯ ಅಥವಾ ಪಾಠವೆಂದರೆ ಲಿಖಿತವಾದ ಅಥವಾ ಮೌಖಿಕ ವಾಗಿರುವ ಕೃತಿಯ ರೂಪ (text), ಲಿಖಿತವಾದ ಕಾವ್ಯ, ನಾಟಕ, ಪ್ರಬಂಧ, ಮೊದಲಾದುವುಗಳಿಗೆ ಒಂದು ನಿಶ್ಚಿತವಾದ ಪಠ್ಯವಿರುತ್ತದೆ. ಅದೇ ಅದರ ಸಾಹಿತ್ಯಕ ರೂಪ. ಅದನ್ನು ಓದುಗರು ಓದಿ ಅರ್ಥವನ್ನು ಅಥವಾ ಅರ್ಥಗಳನ್ನು ಸಂಗ್ರಹಿಸುತ್ತಾರೆ. ನಟರು, ನಿರ್ದೇಶಕರು ಅರ್ಥೈಸಿ ಪ್ರದರ್ಶಿಸುತ್ತಾರೆ. ಇಲ್ಲಿ ಪಠ್ಯ ಒಂದೇ ಆದರೂ ಅರ್ಥಗಳು ಭಿನ್ನವಾಗಿರುತ್ತವೆ. ಪಠ್ಯದಲ್ಲಿ ಅರ್ಥವಿರುವುದು ಪಠ್ಯದ ಶಬ್ದಗಳಲ್ಲಿ ಮಾತ್ರವಲ್ಲ ಅದು ನಮ್ಮೊಳಗೆ ಇದೆ. ಆದುದರಿಂದ ಓದುವಿಕೆ ಯೆಂಬುದು, ಅರ್ಥವನ್ನು ನಿರ್ಮಿಸುವ ಪ್ರಕ್ರಿಯೆಯೂ ಹೌದು. ಓದುಗರೆಷ್ಟು ಮಂದಿಯೋ, ಅಷ್ಟು ಅರ್ಥಗಳಾಗಬಹುದು, ಅಥವಾ ಅದಕ್ಕಿಂತ ಹೆಚ್ಚು ಅರ್ಥಗಳೂ ಆಗಬಹುದು; ಕಾರಣ, ಒಬ್ಬನೇ ಓದುಗನ ಬೇರೆ ಬೇರೆ ಓದುವಿಕೆಗಳಲ್ಲಿ ಬೇರೆ ಬೇರೆ ಅರ್ಥಗಳು ಸ್ಪುರಿಸಬಹುದು. ಅದು ಓದುಗನ ಅಧ್ಯಯನ, ಸಂಸ್ಕಾರ, ಹಿನ್ನೆಲೆ, ಓದುವ ಸಂದರ್ಭಗಳನ್ನು ಅವಲಂಬಿಸಿದೆ. ಎಂತಿದ್ದರೂ ಇಲ್ಲಿ ಪಠ್ಯವು ನಿಶ್ಚಿತವಾಗಿದೆ.
ಯಕ್ಷಗಾನ ಕಲೆಯಂತಹ ಪ್ರಕಾರಗಳಲ್ಲಿ ಪಠ್ಯದ ವಿಚಾರ ಇನ್ನೊಂದು ರೀತಿಯದು. ಯಕ್ಷಗಾನ ಪ್ರಸಂಗದ ಹಿಂದೆ ಅದಕ್ಕೆ ಆಕರಗಳಾಗಿರುವ ಕಾವ್ಯ, ಕಥಾನಕಗಳಿರುತ್ತವೆ. ಅದರ ಹಿಂದೆ ಆ ಕತೆಗೆ ಸಂಬಂಧಿಸಿದ ಮತ್ತೊಂದು ಆಕರವೊ, ಪರಂಪರೆಯೋ ಇರುತ್ತವೆ. ಇವು ಹಿನ್ನೆಲೆಯ ಪಠ್ಯಗಳು, ಅವುಗಳು ಪ್ರಸಂಗಕರ್ತನ ಮೇಲೆ ಪ್ರಭಾವ ಪ್ರೇರಣೆಗಳನ್ನು ಬೀರಿ ಪ್ರಸಂಗದ ರಚನೆಗೆ ಕಾರಣಗಳಾಗುತ್ತವೆ. ಒಂದೇ ಆಕರವನ್ನು ಅಥವಾ ವಿವಿಧ ಆಕರಗಳನ್ನು ಆಶ್ರಯಿಸಿ ಪ್ರಸಂಗ ರಚನೆ ಆಗುತ್ತದೆ. ಆಕರವು ಪ್ರಸಂಗವಾದಾಗಲೇ ಒಂದು ಪಾಠಾಂತರ ಜರಗು ಇದೆ. ಏಕೆಂದರೆ ಪ್ರಸಂಗವೂ ಪೂರ್ತಿಯಾಗಿ ಆಕರದ ಅನುವಾದವಾಗಿರು ವುದು ಶಕ್ಯವಲ್ಲ.
ಯಕ್ಷಗಾನದ ಪ್ರಸಂಗವೆಂಬುದು ಸುಮಾರಾಗಿ ನಿಶ್ಚಿತ ಅಥವಾ ಸ್ಥಿರ ಪಠ್ಯವೆನ್ನಬಹುದು. ಅಂದರೆ, ಒಂದು ಪ್ರಸಂಗದ : ಪ್ರದರ್ಶನಗಳ