ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨ / ವಾಗರ್ಥ

ಸರ್ವಂಕಷ ಜೀವನಮೀಮಾಂಸೆ ಅಲ್ಲವೆನ್ನಬಹುದು. ಹಾಗಾಗಿ ಇಲ್ಲಿ ವಿಮರ್ಶೆಯ ಅನ್ವಯ ಎಷ್ಟು ಎಂಬುದೂ ಒಂದು ಪ್ರಶ್ನೆ, ವಿಮರ್ಶಾ ತತ್ವಗಳ ಸಮಗ್ರ ಅನ್ವಯ ಇಲ್ಲಿ ಸಾಧ್ಯವೆ? ಆವಶ್ಯಕವೆ? ಎಂಬ ದೃಷ್ಟಿಯಿಂದ ವಿಚಾರಕರು ಯೋಚಿಸಬೇಕಿದೆ. ಪ್ರಾಯೋಗಿಕ ವಿಮರ್ಶೆ ಈ ಕ್ಷೇತ್ರದಲ್ಲಿ ಬೆಳೆದು ಬಂದಿಲ್ಲ. ಅದು ಬೆಳೆಯಬೇಕಾಗಿರುವ ಈ ಘಟ್ಟ ದಲ್ಲಿ ಇಂತಹ ಮಹತ್ವದ ಪ್ರಶ್ನೆಗಳನ್ನು ಉತ್ತರಿಸುವುದು, ಈ ರಂಗಕ್ಕೆ ವಿಶಿಷ್ಟವೆನಿಸುವ ವಿಮರ್ಶಾಪರಂಪರೆಯ ನಿರ್ಮಾಣಕ್ಕೆ : ತಳಹದಿ ಯನ್ನೊದಗಿಸುವುದು ಮತ್ತು ಇಂತಹ ಯತ್ನದಲ್ಲಿ 'ಅರ್ಥ' ಎಂಬ ಮಾತುಗಾರಿಕೆ ಪದ್ಯದ ಅರ್ಥವಾಗಿಯೂ, ಪುರಾಣದ ಅರ್ಥೈಸುವಿಕ ಯಾಗಿಯೂ, ಜತೆಗೆ ಅನುಭವದ ಅರ್ಥವಾಗಿಯೂ ಅರಳುವ ಕ್ರಿಯೆಯ ಅಭ್ಯಾಸ ಅವಶ್ಯವಿದೆ.

ತಾಳಮದ್ದಳೆಯ ಪ್ರದರ್ಶನದ ಆಧಾರವಾದ ಪ್ರಸಂಗ ಕಾವ್ಯದ ಪದ್ಯಕ್ಕೆ ಅರ್ಥವನ್ನು ಹೇಳುವಲ್ಲಿ- ಅರ್ಥದಾರಿಗೆ ಇರುವ ಸ್ವಾತಂತ್ರ್ಯ ವನ್ನೂ, ಅದರಿಂದಾಗಿ ಒಂದೇ ಪದ್ಯಕ್ಕೆ, ಒಂದೇ ಸನ್ನಿವೇಶಕ್ಕೆ ಭಿನ್ನಭಿನ್ನ ವಾದ 'ಅರ್ಥಪಠ್ಯ' ನಿರ್ಮಾಣದ ಸಾಧ್ಯತೆಯನ್ನು ಹಿಂದೆ ಪ್ರಸ್ತಾವಿಸಿದೆ. ಅದಕ್ಕೆ ಉದಾಹರಣೆಯಾಗಿ ಒಂದೆರಡು ಸಂದರ್ಭಗಳನ್ನು ಪರಿಶೀಲಿಸ ಬಹುದು. ಪ್ರಸಿದ್ಧವಾದ "ಕರ್ಣಪರ್ವ' - ಪ್ರಸಂಗ (ಗೇರುಸೊಪ್ಪೆ ಶಾಂತಪ್ಪಯ್ಯ ರಚಿತ)ದಲ್ಲಿ ಕರ್ಣನ ಪಾತ್ರ ಪ್ರವೇಶದ ಒಂದು ಪದ್ಯ ಹೀಗಿದೆ :

ಇನನುದಯದೊಳಗೆದ್ದು ನಿತ್ಯಕರ್ಮಂಗಳo
ವಿನಯದಿಂ ರಚಿಸಿ ಬಹುದಾನಂಗಳಂ ವಿಪ್ರ
ಜನಕಿತ್ತು ರವಿಜನತಿ ರಭಸದಿಂ ಕೊಳುಗೊಳಕೆ
ಸನ್ನಹವಾಗಿ ಬರಲು ||

ಕರ್ಣನು ಯುದ್ಧಕ್ಕೆ ಹೊರಟನೆಂದು ಸೂಚಿಸುವ ಒಂದು ಸಾಮಾನ್ಯ ಪದ್ಯ ಇದು. ಆದರೆ ಒಬ್ಬ ಅರ್ಥಧಾರಿ ಈ ಪದ್ಯದ ಶಬ್ದಗಳನ್ನು ಹೇಗೆ ಬಳಸುತ್ತಾನೆ? 'ಇನನುದಯ' ಎಂಬುದನ್ನು ತೆಗೆದುಕೊಂಡು, ಹೇಗೆ ಸೂರ್ಯನ ಮಗನಾದ ಕರ್ಣನಿಗೆ' ಬದುಕಿನಲ್ಲಿ ಸೂರ್ಯೋದಯವಾಗದೇ ಹೋಯಿತು; ಲೋಕಸಾಕ್ಷಿಯಾದ ಸೂರ್ಯಪುತ್ರನೇ ಯಾರ ಮಗನೆಂದು