ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮ / ವಾಗರ್ಥ

ಹೇಳುವವರೂ ಈ ರಂಗದಲ್ಲಿದ್ದಾರೆ. ಸಮಕಾಲೀನ ಪ್ರಜ್ಞೆಯು ಹೆಚ್ಚೆಂದರೆ, ತಾತ್ವಿಕವಾದ, ಸಾರ್ವಕಾಲಿಕ ಚಿಂತನರೂಪದಿಂದ ಮಾತ್ರ ಬರಬಹುದೆಂದು ಇವರ ಅಭಿಪ್ರಾಯ. ಇವರು ರಸವಾದಿ-ಪೌರಾಣಿಕ ಚಿತ್ರಣವಾದಿಗಳು. ಯಾವುದೇ ಕಲೆಯು ಆ ಆ ಕಾಲದ ಪ್ರೇರಣೆಗಳನ್ನು ಸ್ವೀಕರಿಸದಿದ್ದರೆ, ಜೀವಂತವಾಗುವುದಿಲ್ಲ. ಆದರೆ, ಸಮಕಾಲೀನತೆಯ ಹೆಸರಲ್ಲಿ, ಜನಪ್ರಿಯ ಸಮಕಾಲೀನತೆಯನ್ನು, ಹುಸಿ ನಾವೀನ್ಯವನ್ನು ಜರ್ನಲೀಸ್ ಆದ ಮಾತುಗಾರಿಕೆಯನ್ನು ಒಪ್ಪುವುದು, ಈ ರಂಗ ದಲ್ಲಂತೂ ಸೂಕ್ತವಲ್ಲ- ಇಷ್ಟುಮಟ್ಟಿಗೆ, ಇವರ ಅಭಿಪ್ರಾಯವನ್ನು ಒಪ್ಪ ಬಹುದು. ಆದರೆ ಗತಿಶೀಲವಾದ ಯಾವುದೇ ಸಾಂಸ್ಕೃತಿಕ ಪ್ರಕಾರದಲ್ಲಿ, ಪುರಾಣಚಿತ್ರಣ ಮತ್ತು ರಸವನ್ನು ಮಾತ್ರ ಲಕ್ಷ್ಮವಾಗಿರಿಸಿಕೊಂಡು ವ್ಯವಹರಿಸುವುದು ಸಾಧುವೂ ಅಲ್ಲ, ಸ್ಪಂದನಶೀಲನಿಗೆ ಸಾಧ್ಯವೂ ಅಲ್ಲ. ನಮ್ಮ ಭಾಷೆಯೂ, ಅಭಿವ್ಯಕ್ತಿಯೂ, ವಿಚಾರಕ್ರಮವೂ ಹಲವು ಪ್ರಭಾವ ಗಳಿಂದ ನಿರ್ಮಿತವಾಗಿದ್ದು ಅದೂ ಆಧುನಿಕವೇ. ಮಧ್ಯಯುಗೀನ ಆಶಯಗಳಿಗೆ ಅದು ಹಿಂತಿರುಗಲಾರದು. ಆದರೆ ಭಾಗಶಃ "ಪುರಾಣ" ವೆಂದರೆ ಹೀಗೇ ಎಂಬ ಅರಿವೂ ಕೂಡ ಕಲಾವಿದನಿಗಿರಬೇಕೆಂಬುದು ಸತ್ಯ.

ಕಲಾವಿದನ ಮನಸ್ಸು ಕಥಾವಸ್ತುವಿನಿಂದ, ರಂಗದ ಇತರ ಕಲಾವಿದ ರಿಂದ, ಪ್ರಸಂಗಕಾವ್ಯದಿಂದ ಏಕಕಾಲದಲ್ಲಿ ಪ್ರೇರಣೆಗಳನ್ನು ಪಡೆಯುತ್ತ ಹೋಗುತ್ತದೆ. ಅರ್ಥದಾರಿಯ ಮಾತಿನ ಮಧ್ಯೆ, ವಿಶೇಷತಃ ಸ್ವಗತ ಭಾಷಣಗಳಲ್ಲಿ ಹಿಮ್ಮೇಳದ ಕಲಾವಿದರು ಮಾತು ಸೇರಿಸಿ ಸಹಕರಿಸು ವುದುಂಟು. ಇದು ಚಿತ್ರಣಕ್ಕೆ, ಮಾತಿನ ಮಂಡನೆಗೆ ಹೊಸ ರೂಪ ನೀಡಬಹುದು. ಅದೇ ರೀತಿ, ಪ್ರೇಕ್ಷಕನ ಭಾಗವಹಿಸುವಿಕೆಯೂ ಇಲ್ಲಿ ಪರಿಣಾಮಶೀಲ. ಶೋತೃಗಳ ಸಂಖ್ಯೆಯೇ ತಾಳಮದ್ದಳೆಯ ಗುಣಮಟ್ಟ ವನ್ನು ಹೆಚ್ಚಿಸಬಲ್ಲುದು. ತುಂಬಿದ, ಪ್ರತಿಕ್ರಿಯೆ ಕೊಡುವ ಸಭೆ ತಾಳಮದ್ದಳೆಗೆ ಜೀವಕೊಡುತ್ತದೆ. ಕಲಾವಿದ-ಪ್ರೇಕ್ಷಕರೊಳಗೆ ಒಂದು ಸತತ ವಿನಿಮಯ ನಡೆದೇ ಇರುತ್ತದೆ.

ತಾಳಮದ್ದಳೆಯು ಮೂಲತಃ ಒಂದು ರಂಗಕ್ರಿಯೆ. ಹಾಗಾಗಿ ರಂಗಭೂಮಿಗಿರಬೇಕಾದ ಆಯಾಮಗಳೂ, ಶಿಸ್ತುಗಳೂ ಭಿನ್ನರೂಪದಲ್ಲಿ