ಇದೊಂದು ಸರಳವಾದ ಪದ್ಯವಷ್ಟೆ. ಆದರೆ ಇಲ್ಲಿ ಅರ್ಜುನ ಪಾತ್ರಧಾರಿ ಕರ್ಣನ ಸೂತಪುತ್ರತ್ವ, ಕ್ಷತ್ರಿಯನಾಗಲು ಅವನ ಪ್ರಯತ್ನ, ಅದರ ವೈಫಲ್ಯಗಳನ್ನು ಚಿತ್ರಿಸಿ, ದುರಧನನ ರಾಜನೀತಿಗೆಯೇ ಕರ್ಣನು ಸೂತ (ಸಾರಥಿ)ನಾಗಿ ತಂದ ದುರಂತ, 'ಕಲಹ' ಎಂದರೆ ಯುದ್ಧದಲ್ಲಿ ಕರ್ಣನಿಗಾದ ಸೋಲುಗಳು ಮತ್ತು 'ಕಲಹ' ಎಂದರೆ, ಪಾಂಡವ-ಕೌರವರ ದಾಯಾದ್ಯದಲ್ಲಿ ಕರ್ಣನು ಸ್ವಾರ್ಥಿಯಾಗಿ ಜಗಳವನ್ನು ಬೆಳೆಸಿದ್ದು, ಅದರಿಂದ ತಲೆಯನ್ನೆ ನೀಗಬೇಕಾಗಬಹುದೆಂಬ ಎಚ್ಚರಿಕ. ಇವನ್ನು ತಂದು ಮಾತಾಡಿದರೆ, ಆ ಸರಳ ಪದ್ಯವೇ ಉಜ್ವಲವಾಗುತ್ತದೆ.
ಅರ್ಜುನನ ಈ ಮಾತುಗಳಿಗೆ ಕರ್ಣನು ಉತ್ತರಿಸಿದಾಗ, ತುಂಬ ಸ್ವಾರಸ್ಯವಾದ ಸಂವಾದ ಬೆಳೆಯುತ್ತದೆ. ಹೀಗೆ ಪದ್ಯದ ಹಂದರವನ್ನು ಬಳಸಿ, ಅರ್ಥದಾರಿ, ಅದನ್ನು ಸೃಷ್ಟಿಶೀಲವಾದ ಕ್ರಮದಿಂದ ಬೆಳೆಸುತ್ತ ಅದಕ್ಕೆ ಕಥೆ, ವಾದ, ಚಿಂತನ, ವ್ಯಂಗ್ಯ, ಧ್ವನಿಗಳನ್ನು ನೀಡುತ್ತ ಬರುವುದೇ ಅರ್ಥಗಾರಿಕೆಯ ಮರ್ಮ, ಪಾತ್ರ, ಕಥೆ, ಪಾತ್ರಗಳ ಸಂಬಂಧ, ಸಂಘರ್ಷ, ಭಾವ- ಇವುಗಳ ನೋಟಗಳು ಆ ಆ ಪಾತ್ರಗಳ ಮಾತುಗಳಲ್ಲೂ, ಅನ್ಯ ಪಾತ್ರಗಳ ಮೂಲಕವೂ ಕಾಣಿಸಿಕೊಳ್ಳುತ್ತ ಹೋಗುತ್ತವೆ. ಒಬ್ಬ ಅರ್ಥದಾರಿ ಎತ್ತಿಕೊಂಡ ಒಂದು ಸಮಸ್ಯೆ, ಒಂದು ವಿಚಾರವೇ ಇಡೀ ತಾಳಮದ್ದಳೆಯ ಉದ್ದಕ್ಕೂ ವಿಭಿನ್ನ ರೀತಿಗಳಲ್ಲಿ ಅನುರಣನಗೊಳ್ಳುತ್ತ ಹೋಗುವುದುಂಟು. ಸಮಕಾಲೀನ ಪ್ರೇರಣೆ ಯೊಂದು, ಒಂದು ಇಡಿಯ ತಾಳಮದ್ದಳೆಯನ್ನು ಆವರಿಸುವುದುಂಟು. ಉದಾ: ತುರ್ತುಪರಿಸ್ಥಿತಿಯ ಕಾಲದ ನಿಲುಮೆಗಳು, ಭಟ್ಟಂಗಿ ರಾಜಕೀಯ, ಸ್ವಾತಂತ್ರ್ಯ, ನಿಷ್ಠೆ- ಮುಂತಾದವುಗಳು. ಅಥವಾ, ಒಂದು ದೃಷ್ಟಿಕೋನವಾಗಬಹುದು. ಉದಾ: ಪಾಂಡವ ಕೌರವರ ಜಗಳಕ್ಕೆ ಮುಖ್ಯ ಕಾರಣವೇನು? ರಾಜ್ಯದಾಹವೆ? ಕುರುಪಾಂಚಾಲರ ವೈರವೆ? ದೌಪದಯೇ? ಭೀಮನೆ? ದುದ್ಯೋಧನನೆ?- ಮುಂತಾದ ಪ್ರಶ್ನೆಗಳು, ಹೀಗೆ ಒಂದು ಪ್ರಶ್ನೆ, ವಿಷಯ (issue) ಒಂದು ಪ್ರದರ್ಶನಕ್ಕೆ ವ್ಯಾಪಕ ತಳಹದಿಯಾಗಬಹುದು.
ಇಂತಹದನ್ನೆಲ್ಲ ಚಿತ್ರಿಸುವುದು ತಾಳಮದ್ದಳೆಯ ಕೆಲಸವಲ್ಲ ವೆಂದೂ, ಪ್ರಸಂಗದ ಕಥೆಯನ್ನು ಭಾವಪೂರ್ಣವಾಗಿ, ಅದರದೇ ಮೌಲ್ಯ ಗಳ ಚೌಕಟ್ಟಿನಲ್ಲಿ, ಪ್ರೌಢವಾಗಿ ಮಂಡಿಸುವುದೇ ಅಪೇಕ್ಷಿತವೆಂದೂ